ಪುಣಚ ಪರಿಯಾಲ್ತಡ್ಕ ಮುಹ್ಯುದ್ದೀನ್ ಜುಮಾ ಮಸೀದಿಯಿಂದ ಸಿರಾಜ್ ಮಣಿಲರಿಗೆ ಸನ್ಮಾನ

0

ಪುಣಚ: SIR ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಜನರಿಗೆ ಅರಿವು ಮೂಡಿಸಿ ಜನಸೇವೆಗೆ ಮಾದರಿಯಾದ ಪುಣಚ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಮಣಿಲ ಅವರನ್ನು ಈದ್ ಮಿಲಾದ್ ಕಾರ್ಯಕ್ರಮದ ದಿವಸ ಮುಹ್ಯುದ್ದೀನ್ ಜುಮಾ ಮಸೀದಿ ಪರಿಯಾಲ್ತಡ್ಕ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಪರಿಯಾಲ್ತಡ್ಕ ಮುಹ್ಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಎಂ.ಎಸ್ ಮಹಮ್ಮದ್, ಖತೀಬರಾದ ಹಸೈನಾರ್ ಪೈಝಿ, ಅಬೂಬಕ್ಕರ್ ಸಿದ್ದೀಕ್ ರಝ್ವಿ, ಮಸೀದಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಬಿಕಾಂ, ಉಪಾಧ್ಯಕ್ಷರಾದ ಕಮರುದ್ದೀನ್ ಪರಿಯಾಲು,ಯುಟಿ ಅಲಿ, ಕೋಶಾಧಿಕಾರಿ ಫಾರೋಕ್ ಪಾಲಸ್ತಡ್ಕ, ಇಸ್ಮಾಯಿಲ್ ನಾಟೆಕಲ್ಲು, ನೂರ್ ಮುಹಮ್ಮದ್ ನೀರ್ಕಜೆ, ಲತೀಫ್ ಪುಣಚ, ಶಂಸುದ್ದೀನ್ ಅಜ್ಜಿನಡ್ಕ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here