ದರ್ಬೆಯಲ್ಲಿ ನಡೆದ ಘಟನೆ : ಅಂಜನಾ ಪೈ ವಿರುದ್ಧ ಬಲವಂತದ ಕ್ರಮಬೇಡ-ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ

0

ಪುತ್ತೂರು: ಕೆಲ ದಿನಗಳ ಹಿಂದೆ ದರ್ಬೆಯ ಅಂಗಡಿಯೊಂದರಲ್ಲಿ ಲ್ಯಾಮಿನೇಶನ್‌ಗೆ ನೀಡಿದ್ದ ದಾಖಲೆ ಹಾನಿಗೊಂಡ ಪ್ರಕರಣದ ಬಳಿಕದ ಬೆಳವಣಿಗೆಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಅಂಗಡಿ ಮಾಲಕಿ ಅಂಜನಾ ಎಸ್.ಪೈ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.


ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ನಿರೀಕ್ಷಣಾ ಜಾಮೀನು ಅರ್ಜಿದಾರರಾಗಿರುವ ಅಂಜನಾ ಎಸ್.ಪೈ ಅವರ ವಿರುದ್ಧ ಬಂಧನದಂತಹ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ. ಅರ್ಜಿಯ ಮುಂದಿನ ವಿಚಾರಣೆ ಆ.29ರಂದು ನಡೆಯಲಿದೆ. ಅಂಜನಾ ಎಸ್.ಪೈ ಅವರ ಪರವಾಗಿ ನ್ಯಾಯವಾದಿ ಮಾಧವ ಪೂಜಾರಿ ವಾದಿಸುತ್ತಿದ್ದಾರೆ.


ಸುದರ್ಶನ್ ಪೈ ಜಾಮೀನು ಅರ್ಜಿ ಆ.29ಕ್ಕೆ ವಿಚಾರಣೆ:
ಪ್ರಕರಣದಲ್ಲಿ ಹಲ್ಲೆ, ಕೊಲೆ ಯತ್ನ ಆರೋಪಿಯಾಗಿ ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಸುದರ್ಶನ್ ಪೈ ಜಾಮೀನು ಕೋರಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಕೀಲ ಮಾಧವ ಪೂಜಾರಿ ಅವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಮುಂದಿನ ವಿಚಾರಣೆ ಆ.29ಕ್ಕೆ ನಡೆಯಲಿದೆ.

LEAVE A REPLY

Please enter your comment!
Please enter your name here