ಆ.28: ಅವಿಭಜಿತ ಪುತ್ತೂರು ತಾಲೂಕು ಬಿಲ್ಲವ ಸಂಘದಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 172ನೇ ಜನ್ಮದಿನಾಚರಣೆ

0

ಪುತ್ತೂರು: ಅವಿಭಜಿತ ಪುತ್ತೂರು ತಾಲೂಕು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರದ ವತಿಯಿಂದ ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 172ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಪುತ್ತೂರು ಬಿಲ್ಲವ ಸಂಘದ ಸಭಾಂಗಣದಲ್ಲಿ ನಡೆಯಲಿದೆ.


ಬೆಳಿಗ್ಗೆ ನಡೆಯುವ ಸಭಾ ಕಾರ್ಯಕ್ರಮವನ್ನು ಕರ್ನಾಟಕ ಸರಕಾರ ಬ್ರಹ್ಮಶ್ರೀ ಶ್ರೀ ನಾರಾ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿರವರು ಉದ್ಘಾಟಿಸಲಿದ್ದಾರೆ. ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಲೋಹಿತ್ ಎಸ್.ಕೆರವರು ಗುರು ಸಂದೇಶ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಕಳ ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್ ಕಾರ್ಕಳ, ಮಂಗಳೂರು(MAHE) ಮಣಿಪಾಲ್ ದಂತ ವೈದ್ಯಕೀಯ ಮಹಾವಿದ್ಯಾಲಯದ ಅರ್ಥೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ|ಡಾ.ಆಶಿತ್ ಎಂ.ವಿರವರು ಭಾಗವಹಿಸಲಿದ್ದಾರೆ.


ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮ:
ಬೆಳಿಗ್ಗೆ(7.30)ರಿಂದ ನವೀನ್ ಶಾಂತಿ ಅಡ್ಯಾಲು ಅಜಿಲಮೊಗರು ಇವರ ಪೌರೋಹಿತ್ಯದಲ್ಲಿ ಪ್ರಾರ್ಥನೆ, ಗಣಹೋಮ, ಪಂಚಾಮೃತಾಭಿಷೇಕ, ಗುರುಪೂಜೆ ಬಳಿಕ ಸುಳ್ಯಪದವು ಬಿಲ್ಲವ ಗ್ರಾಮ ಸಮಿತಿಯಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಅವಿಭಜಿತ ಪುತ್ತೂರು ಹಾಗೂ ಕಡಬ ತಾಲೂಕಿನ 55 ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ವೇದಿಕೆ ಪುತ್ತೂರು, ಯುವವಾಹಿನಿ ಪುತ್ತೂರು ಘಟಕ, ಉಪ್ಪಿನಂಗಡಿ ಹಾಗೂ ಕಡಬ ಘಟಕಗಳ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಪರಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.


ಪ್ರತಿಭಾ ಪುರಸ್ಕಾರ:
2025-26ನೇ ವರ್ಷದ ಎಸೆಸ್ಸೆಲ್ಸಿಯಲ್ಲಿ ಶೇ.95 ಮತ್ತು ಮೇಲ್ಟಟ್ಟು ಅಂಕ ಗಳಿಸಿದವರಿಗೆ, ಪಿಯುಸಿ, ಐಟಿಐ, ಡಿಎಡ್ ಅಂತಿಮ ಪರೀಕ್ಷೆಯಲ್ಲಿ ಶೇ.90 ಮತ್ತು ಮೇಲ್ಪಟ್ಟು ಅಂಕ ಗಳಿಸಿದವರಿಗೆ, ಎಲ್ಲಾ ತರದ ಡಿಗ್ರಿ, ಡಿಪ್ಲೋಮಾ, ಬಿಬಿಎಂ, ಬಿಸಿಎ, ಬಿಎಡ್, ಎಲ್‌ಎಲ್‌ಬಿ ಇತ್ಯಾದಿ ಕೋರ್ಸಿನ ಅಂತಿಮ ಪರೀಕ್ಷೆಯಲ್ಲಿ ಶೇ.85 ಮತ್ತು ಮೇಲ್ಪಟ್ಟ ಅಂಕ ಗಳಿಸಿದವರಿಗೆ, ಎಲ್ಲಾ ಸ್ನಾತಕೋತ್ತರ, ವೈದ್ಯಕೀಯ, ತಾಂತ್ರಿಕ, ಎಂಸಿಎ, ಎಂಬಿಎ, ಎಂಎಸ್‌ಡಬ್ಲ್ಯೂ, ಎಂಎ, ಎಂಕಾಂ, ಎಂಟೆಕ್ ಕೋರ್ಸಿನ ಎಲ್ಲಾ ಸೆಮಿಸ್ಟರ್ ಗಳ ಪರೀಕ್ಷೆಯಲ್ಲಿ ಪಡೆದ ಅಂಕಗಳ ಕ್ರೋಢೀಕೃತ ಶೇ.80 ಮತ್ತು ಮೇಲ್ಪಟ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.


ಸನ್ಮಾನ/ಗೌರವಾರ್ಪಣೆ/ಅಭಿನಂದನೆ:
ಐಪಿಎಸ್, ಐಎಎಸ್, ಕೆಎಎಸ್, ಕೆಇಎಸ್, ವೈದ್ಯಕೀಯ, ಪಿಎಚ್‌ಡಿ, ಸಿಎ ಪದವಿ ಪಡೆದವರಿಗೆ, 2025-26ರ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಪಡೆದವರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಐದು ಮಹನೀಯರಿಗೆ, 2025-26ರಲ್ಲಿ ಜಿಲ್ಲಾಮಟ್ಟಕ್ಕಿಂತ ಮೇಲ್ಪಟ್ಟ ಕ್ರೀಡಾ ಕ್ಷೇತ್ರ, ಕಲಾ ಕ್ಷೇತ್ರ, ಸಾಹಿತ್ಯ, ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೈಯ್ದವರಿಗೆ ಪುರಸ್ಕಾರ(ಆಯಾ ಕ್ಷೇತ್ರದ ಸಾಧಕರಿಗೆ ಒಮ್ಮೆ ಮಾತ್ರ) ಕಾರ್ಯಕ್ರಮ ನಡೆಯಲಿದೆ.


ವಿದ್ಯಾನಿಧಿ ಯೋಜನೆ:
ಬಿಲ್ಲವ ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ, ಸಹಾಯಧನ, ಪ್ರತಿಭಾ ಪುರಸ್ಕಾರ ಇತ್ಯಾದಿ ಉದ್ಧೇಶಗಳಿಗಾಗಿ ಸ್ಥಾಪಿಸಿದ ವಿನೂತನ ವಿದ್ಯಾನಿಧಿ ಯೋಜನೆಗೆ ಸಮಾಜ ಬಾಂಧವರ ಧನ ಸಹಾಯದ ಸಹಭಾಗಿತ್ವವನ್ನು ಕೋರಲಾಗಿದೆ. ಸಹಾಯಧನವನ್ನು ನೀಡ ಬಯಸುವವರು ವಿದ್ಯಾನಿಧಿ ಯೋಜನೆಯ ಸಂಚಾಲಕರಾದ ಉಲ್ಲಾಸ್ ಕೋಟ್ಯಾನ್, ಸದಸ್ಯರಾದ ಗಿರೀಶ್ ಸಾಲ್ಯಾನ್ ಬದನೆ, ರಾಜೇಶ್ ನೆಲ್ಲಿತ್ತಡ್ಕರವರನ್ನು ಸಂಪರ್ಕಿಸುವಂತೆ ಬಿಲ್ಲವ ಸಂಘ ಮನವಿ ಮಾಡಿದೆ.


ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ 172ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಿಲ್ಲವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಬೇಕಾಗಿ ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಪ್ರಥಮ ಉಪಾಧ್ಯಕ್ಷರಾದ ಚಿದಾನಂದ ಸುವರ್ಣ ಗೆಣಸಿನಕುಮೇರು, ದ್ವಿತೀಯ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾವತಿ ಕೇಕುಡೆ, ಕಾರ್ಯದರ್ಶಿ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರೆಂಬೆಟ್ಟು, ಕೋಶಾಧಿಕಾರಿ ಜನಾರ್ದನ ಪೂಜಾರಿ ಪದಡ್ಕ, ಬ್ರಹ್ಮಶ್ರೀ ನಾರಾಯಣ ಗುರುಮಂದಿರದ ಸಂಚಾಲಕ ಅಶೋಕ್ ಕುಮಾರ್ ಪಡ್ಪು, ಸದಸ್ಯರಾದ ಮೋಹನ್ ತೆಂಕಿಲ, ಮಾಧವ ಸಾಲ್ಯಾನ್ ಕುರೆಮಜಲು, ಶ್ರೀಮತಿ ವಿಮಲ ಸುರೇಶ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಕಡಬ ತಾಲೂಕಿನಲ್ಲಿಯೂ ಬಿಲ್ಲವ ಸಂಘದ ಸ್ಥಾಪನೆ ಆಶಯ ಹೊಂದಿದ್ದೇವೆ..
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆಯನ್ನು ಬಹಳ ಅದ್ದೂರಿಯಿಂದ ಆಚರಣೆ ಮಾಡುತ್ತಿದ್ದೇವೆ. ಪುತ್ತೂರಿನ ಬಿಲ್ಲವ ಸಂಘದಲ್ಲಿನ 55 ಗ್ರಾಮ ಸಮಿತಿಯ ಮುಖಾಂತರ ಅವಿಭಜಿತ ಪುತ್ತೂರು ಹಾಗೂ ಕಡಬ ತಾಲೂಕಿನ ಸಮಾಜ ಬಾಂಧವರು ಸುಮಾರು ಮೂರು ಸಾವಿರದಷ್ಟು ಗುರುಪೂಜೆಯನ್ನು ಮಾಡಿದ್ದಾರೆ. ಗುರುಗಳ ತತ್ವ ಸಿದ್ಧಾಂತವಾದ ಒಂದೇ ಜಾತಿ, ಒಂದೇ ದೇವರು, ಒಂದೇ ಮತ ಎಂಬಂತೆ ಸಾಧನೆಗೈದ ಸಮಾಜ ಬಾಂಧವರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈಗಾಗಲೇ ಪುತ್ತೂರು ಹಾಗೂ ಕಡಬ ತಾಲೂಕು ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಕಡಬ ತಾಲೂಕಿನಲ್ಲಿಯೂ ಬಿಲ್ಲವ ಸಂಘವನ್ನು ಸ್ಥಾಪನೆ ಮಾಡುವ ಆಶಯವಿದೆ. ಕಳೆದ ಮೂರು ವರ್ಷಗಳಿಂದ ಎಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿ ತನಕ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಬಂದಿದ್ದು ಈ ವರ್ಷವೂ ಸುಮಾರು 250 ಮಂದಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದೇವೆ. ಬಿಲ್ಲವ ಗ್ರಾಮ ಸಮಿತಿಯ 55 ಗ್ರಾಮ ಸಮಿತಿಗಳು, 13 ವಲಯ ಸಂಚಾಲಕರು, ಯುವವಾಹಿನಿ ಘಟಕ, ಬಿಲ್ಲವ ಮಹಿಳಾ ವೇದಿಕೆ, ಬಿಲ್ಲವ ವಿದ್ಯಾರ್ಥಿ ಸಂಘ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕರಿಸುತ್ತಿದ್ದಾರೆ.
ಸತೀಶ್ ಕುಮಾರ್ ಕೆಡೆಂಜಿ, ಅಧ್ಯಕ್ಷರು, ಬಿಲ್ಲವ ಸಂಘ, ಪುತ್ತೂರು

ಸತೀಶ್ ಕುಮಾರ್ ಕೆಡೆಂಜಿ, ಅಧ್ಯಕ್ಷರು, ಬಿಲ್ಲವ ಸಂಘ, ಪುತ್ತೂರು

ಸನ್ಮಾನ..
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಪುತ್ತೂರಿನ ಹಿರಿಯ ಲೆಕ್ಕ ಪರಿಶೋಧಕ ಎಸ್.ರಾಮ ಭಟ್, ಪುತ್ತೂರು ಬಿಲ್ಲವ ಸಂಘದ ಹಿರಿಯ ಸದಸ್ಯ, ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ಪಿ.ಶೇಷಪ್ಪ ಬಂಗೇರರವರುಗಳನ್ನು ಸನ್ಮಾನಿಸಲಾಗುತ್ತದೆ.

LEAVE A REPLY

Please enter your comment!
Please enter your name here