






ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ವಿತೀಯ ಸಾಧನೆಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಸತತ 9ನೇ ಬಾರಿಗೆ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ ಸ್ವೀಕರಿಸಿದೆ.


ಆ.22ರಂದು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಬ್ಯಾಂಕ್ನ ಅಧ್ಯಕ್ಷ ಡಾ| ಎಂ.ಎನ್ ರಾಜೇಂದ್ರ ಕುಮಾರ್, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ ಜಯರಾಮ ರೈ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಅಧ್ಯಕ್ಷ ನವೀನ್ ಡಿ. ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್ ಅವರು ಪ್ರಶಸ್ತಿ ಸ್ವೀಕರಿಸಿದರು. ಸಂಘದ ಉಪಾಧ್ಯಕ್ಷೆ ಪವಿತ್ರ ಕೆ.ಪಿ., ಮಾಜಿ ಉಪಾಧ್ಯಕ್ಷ ವೇದನಾಥ ಸುವರ್ಣ ಹಾಗೂ ಸದಸ್ಯ ಸುರೇಶ್ ಪ್ರಭು ಉಪಸ್ಥಿತರಿದ್ದರು.



ನರಿಮೊಗರು ಹಾಗೂ ಶಾಂತಿಗೋಡು ಎರಡು ಗ್ರಾಮಗಳ ವ್ಯಾಪ್ತಿ ಹೊಂದಿರುವ ಸಂಘವು ಆನಾಜೆ ಹಾಗೂ ಕೈಂದಾಡಿಯಲ್ಲಿ ಶಾಖೆಯನ್ನು ಹೊಂದಿದೆ. ಸಂಘವು 2025-26ನೇ ಸಾಲಿನಲ್ಲಿ ಗಣನೀಯ ಸಾಧನೆ ಮಾಡಿದೆ. ಸಂಘವು ವರದಿ ವರ್ಷದಲ್ಲಿ 4,835 ಮಂದಿ ಸದಸ್ಯರಿಂದ ರೂ.6.21ಕೋಟಿ ಪಾಲು ಬಂಡವಾಳ ಹೊಂದಿದೆ. ರೂ.4.08ಕೋಟಿ ಕ್ಷೇಮ ನಿಧಿ, ರೂ.56 ಠೇವಣಿ ಹಾಗೂ 3.23 ಕೋಟಿ ಇತರ ನಿಧಿಗಳನ್ನು ಹೊಂದಿದೆ. ರೂ.100 ಕೋಟಿ ಸದಸ್ಯರಿಗೆ ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ರೂ.53ಕೋಟಿ ಬ್ಯಾಂಕ್ ಸಾಲ ಹೊಂದಿದೆ. ಒಟ್ಟು ರೂ.527ಕೋಟಿ ವ್ಯವಹಾರ ನಡೆಸಿ ರೂ.3.06ಕೋಟಿ ಲಾಭಗಳಿಸಿದೆ. ಶೇ.97.67 ಸಾಲ ವಸೂಲಾತಿಯಾಗಿದೆ.
ರೂ.10ಲಕ್ಷಕ್ಕೆ ಸೀಮಿತವಾಗಿದ್ದ ಕೃಷಿ ಸಾಲವನ್ನು ರೂ.25ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ರೂ.4.60ಕೋಟಿ ಇದ್ದ ಸುಸ್ತಿ ಸಾಲವನ್ನು ರೂ.1.67ಕೋಟಿಗೆ ಇಳಿಕೆ ಮಾಡಲಾಗಿದೆ. ಲಾಭ ಗಳಿಕೆಯಲ್ಲಿ ಸಾಧನೆ ಮಾಡಿದ್ದು 2022-23ರಲ್ಲಿ 1.70ಕೋಟಿ ಲಾಭ ಪಡೆದಿದ್ದ ಸಂಘವು 2023-24ರಲ್ಲಿ ರೂ.2.45ಕೋಟಿ, 2024-25ರಲ್ಲಿ 2.95ಕೋಟಿ ಹಾಗೂ 2025-26ರಲ್ಲಿ ರೂ.3.06ಕೋಟಿಗೆ ಏರಿಕೆಯಾಗಿದೆ. ಸಂಘವು ವಾರ್ಷಿಕ ವ್ಯವಹಾರದ ಜೊತೆಗೆ ಲಾಭ ಗಳಿಕೆಯಲ್ಲಿಯೂ ಗಣನೀಯ ಸಾಧನೆ ಮಾಡಿದೆ.
ರೈತರ ಅನುಕೂಲಕ್ಕಾಗಿ ಕೃಷಿ ಸಲಕರಣೆಗಳನ್ನು ರಜಾ ದಿನಗಳಲ್ಲಿ ತೆರದಿರುತ್ತದೆ. ಲಕ್ಷ ನಿಧಿ ಉಳಿತಾಯ ಯೋಜನೆ, ರಸಗೊಬ್ಬರ ಮತ್ತು ಕೃಷಿ ಸಲಕರಣೆಗಳನ್ನು ಒಂದು ತಿಂಗಳ ಅವಧಿಗೆ ಬಡ್ಡಿ ರಹಿತವಾಗಿ, ನಂತರದಲ್ಲಿ ಕನಿಷ್ಠ ಬಡ್ಡಿಯೊಂದಿಗೆ ಆರು ತಿಂಗಳ ಅವಧಿಗೆ ಸಾಲ ನೀಡಲಾಗುತ್ತಿದೆ. ಸದಸ್ಯರಿಗೆ ವ್ಯವಹಾರದ ಮಾಹಿತಿಯನ್ನು ಎಸ್ಎಂಎಸ್ ಮೂಲಕ ನೀಡಲಾಗುತ್ತಿದೆ. ಕೃಷಿಯೇತರ ದೀರ್ಘಾವಧೀ ಸಾಲವನ್ನು 8ರಿಂದ 10 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಕೃಷಿ ಸಾಲ ಹೊಂದಿದ ಸದಸ್ಯ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿಶೇಷ ಶಿಕ್ಷಣ ಸಾಲ, ನಿರಖು ಠೇವಣಿಗಳಿಗೆ ಶೇ.0.50 ಹೆಚ್ಚುವರಿ ಬಡ್ಡಿ, ಕೃಷಿ ಸಾಲ ಹೊಂದಿದ ಸದಸ್ಯರಿಗೆ ರೂ.2ಲಕ್ಷದ ಅಪಘಾತ ವಿಮೆ, ಮೃತ ಸಾಲಗಾರ ಸದಸ್ಯರ ಕುಟುಂಬಕ್ಕೆ ರೂ.5೦೦೦ ಮರಣ ಸಾಂತ್ವನ ನೀಡಲಾಗುತ್ತಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸಂಘದ ಉಪಾಧಕ್ಷರಾಗಿ ಪವಿತ್ರ ಕೆ.ಪಿ., ನಿರ್ದೇಶಕರಾಗಿ ದೇವಪ್ಪ ಗೌಡ ಓಲಾಡಿ, ವಿಶ್ವನಾಥ ಬಲ್ಯಾಯ ಮುಂಡೋಡಿ, ಪ್ರವೀಣ್ ಕುಮಾರ್ ಶೆಟ್ಟಿ, ಜಯರಾಮ ಪೂಜಾರಿ ಒತ್ತೆಮುಂಡೂರು, ಬಾಬು ಶೆಟ್ಟಿ ವೀರಮಂಗಲ, ಪರಮೇಶ್ವರ ಭಂಡಾರಿ ಮಣಿಯ, ಶಿವಪ್ರಸಾದ್ ನಾಯ್ಕ, ದೇವಪ್ಪ ಪಜಿರೋಡಿ, ನಮಿತಾ ನಾಕ್, ಚಂದ್ರ ಮಣಿಯ ಸೇವೆ ಸಲ್ಲಿಸುತ್ತಿದ್ದಾರೆ.
113 ವರ್ಷಗಳ ಇತಿಹಾಸವಿರುವ ಸಹಕಾರಿ ಸಂಘವು ವ್ಯವಹಾರ ಹಾಗೂ ಲಾಭಗಳಿಕೆಯಲ್ಲಿ ಸಂಘವು ವರ್ಷದಿಂದ ವರ್ಷಕ್ಕೆ ಉತ್ತಮ ಸಾಧನೆ ಮಾಡುತ್ತಿದೆ. ಈ ವರ್ಷ ರೂ.3.06 ಕೋಟಿ ದಾಖಲೆಯ ಲಾಭಗಳಿಸಿದೆ. ಸರಕಾರದ ಯೋಜನೆಗಳಾದ ಬೆಳೆಸಾಲ, ಕೃಷಿ ಅಭಿವೃದ್ಧಿ ಸಾಲಗಳ ಜೊತೆಗೆ ಸದಸ್ಯರಿಗೆ ಇತರ ಸಾಲಗಳನ್ನು ನೀಡುತ್ತಿದೆ. ಸದಸ್ಯರ ನಿರಂತರ ಸಹಕಾರ ಪ್ರೋತ್ಸಾಹದಿಂದ ಸತತ 9 ವರ್ಷಗಳಿಂದ ಪ್ರಶಸ್ತಿ ಪಡೆಯುತ್ತಿದ್ದು ಸಂಘದ ಈ ಸಾದನೆಗೆ ಕೈ ಜೋಡಿಸಿದ ಸದಸ್ಯ ಬಾಂಧವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಸಂಘದ ಮುಂದಿನ ಯೋಜನೆಯಾಗಿ ನೂತನ ನಿವೇಶನದಲ್ಲಿ ಸುಸಜ್ಜಿತ ಕಚೇರಿ, ಗೋದಾಮು ಕಟ್ಟಡ, ಹವಾನಿಯಂತ್ರಿತ ಸಭಾಂಗಣವನ್ನು ರೂ.೭ಕೋಟಿ ವೆಚ್ಚದಲ್ಲಿ ನಿರ್ಮಿಸಿ ಸಾರ್ವಜನಿಕ ಸೇವೆಗೆ ಒದಗಿಸುವ ಗುರಿ ಹೊಂದಿದೆ.
ನವೀನ್ ಡಿ., ಅಧ್ಯಕ್ಷರು










