ಜಿಲ್ಲೆ, ರಾಜ್ಯ ಮಟ್ಟದ ಈಜು ಸ್ಪರ್ಧೆ: ಪುತ್ತೂರಿನ ಅಕ್ವಾಟಿಕ್ ಕ್ಲಬ್‌ಗೆ 128 ಪದಕ

0

ಪುತ್ತೂರು: ಮಂಗಳೂರು ಜಿಲ್ಲಾ ಮಟ್ಟದ ಈಜು ಸ್ಪರ್ಧೆ, ಮಂಗಳೂರಿನಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಹಾಗೂ ಬೆಂಗಳೂರಿನಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಗಳಲ್ಲಿ ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಈಜುಗಾರರು ಉತ್ತಮ ಸಾಧನೆ ಮೆರೆದಿದ್ದು, ಒಟ್ಟು 128 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮAಗಳೂರಿನ ಮಂಗಳ ಸ್ವಿಮ್ಮಿಂಗ್ ಪೂಲ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಅಕ್ವಾಟಿಕ್ ಕ್ಲಬ್‌ನ ಈಜುಗಾರರು 4 ಚಿನ್ನದ ಪದಕಗಳು, 10 ಬೆಳ್ಳಿ ಪದಕಗಳು, 7 ಕಂಚಿನ ಪದಕಗಳು ಸೇರಿದಂತೆ ಒಟ್ಟು 21 ಪದಕಗಳನ್ನು ಗೆದ್ದುಕೊಂಡಿದ್ದಾರೆ.


ಶ್ರೀವಾರ ಅವರು 400 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ, 200 ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಸ್ನೇಹಿತ್ ಅವರು 400 ಮೀ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ, 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ, 50 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.


ಇಶಾನಿ ಅವರು 100 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ, 50 ಮೀ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ, 50 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಕಂಚಿನ ಪದಕ, ಚರಿತ್ ಅಮೀನ್ ಕೆ ಅವರು 100 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ, 100 ಮೀ. ಬಟರ್‌ಫ್ಲೈನಲ್ಲಿ ಚಿನ್ನದ ಪದಕ, 50 ಮೀ. ಬಟರ್‌ಫ್ಲೈನಲ್ಲಿ ಚಿನ್ನದ ಪದಕ, ಅಧಿಕ ಪಕ್ಕಳಅವರು 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಂಚಿನ ಪದಕ, ಮಾನ್ವಿ ಅವರು 100 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 50 ಮೀ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ, 50 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಕೌಸ್ತುಭ್ ಅವರು 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಂಚು, 200 ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ ಬೆಳ್ಳಿ, 200 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಬೆಳ್ಳಿ, ಆದಿತ್ಯ ಎಸ್ ಬೌದ್ ಅವರು 50 ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿ, 50 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ, 100 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅಲ್ಲದೆ, ಸಂಸ್ಥೆಯ 7 ಈಜುಗಾರರು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಈಜು ಚಾಂಪಿಯನ್‌ಶಿಪ್‌ನಲ್ಲಿ 20 ಚಿನ್ನ, 13 ಬೆಳ್ಳಿ, 8 ಕಂಚಿನ ಪದಕಗಳು ಸೇರಿದಂತೆ ಒಟ್ಟು 41 ಪದಕಗಳನ್ನು ಅಕ್ವಾಟಿಕ್ ಕ್ಲಬ್‌ನ ಈಜುಗಾರರು ಗೆದ್ದುಕೊಂಡಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಅನಿತೇಜ್ ಅವರು 800 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ, 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರೆ, ಸಮೃದ್ಧ್ ಅವರು 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 100 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, 100 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ, ಮಹೇಕ್ ಅವರು 200 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, ಶ್ರೀಹಾನ್ ಅವರು 200 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 100 ಮೀ. ಬಟರ್‌ಫ್ಲೈನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ನಮನ್ ನಾಯ್ಕ್ ಬಿ ಅವರು 100 ಮೀ. ಬಟರ್‌ಫ್ಲೈ, 400 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ, 50 ಮೀ. ಬಟರ್‌ಫ್ಲೈನಲ್ಲಿ ಚಿನ್ನದ ಪದಕ, ಲಾಸ್ಯ ಸಂತೋಷ್ 50 ಮೀ. ಬ್ರೆಸ್ಟ್ಸ್ಟ್ರೋಕ್ ಕಂಚಿನ ಪದಕ, 100 ಮೀ. ಬಟರ್‌ಫ್ಲೈ ಬೆಳ್ಳಿಯ ಪದಕ 100 ಮೀ. ಬ್ಯಾಕ್‌ಸ್ಟ್ರೋಕ್ ಬೆಳ್ಳಿಯ ಪದಕ,ಲಾಲನ್ ಅವರು 400 ಮೀ. ಫ್ರೀಸ್ಟೈಲ್‌ನಲ್ಲಿ ಕಂಚು, 200 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ, ಲಿಖಿತ್ ಅವರು 50 ಮೀ. ಬ್ರೆಸ್ಟ್ಸ್ಟ್ರೋಕ್, 100 ಮೀ. ಫ್ರೀಸ್ಟೈಲ್, 50 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.


ವೈಷ್ಣವ್ ಅವರು 50 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಕಂಚು, 100 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಬೆಳ್ಳಿ, 200 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಬೆಳ್ಳಿ, ಪ್ರತ್ಯುಷ್ ಅವರು 50 ಮೀ. ಬಟರ್‌ಫ್ಲೈ ಮತ್ತು 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ, 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಳ್ಳಿ, ಲಾಸ್ಯಾ ಕಿಶನ್ ಅವರು 50 ಮೀ. ಬಟರ್‌ಫ್ಲೈ, 50 ಮೀ. ಬ್ಯಾಕ್‌ಸ್ಟ್ರೋಕ್, 50 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ ಗೆದ್ದಿದ್ದಾರೆ.
ದೀಪಾಂಶ್ ಅವರು 200 ಮೀ. ಫ್ರೀಸ್ಟೈಲ್‌ನಲ್ಲಿ ಕಂಚು, 100 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ, 50 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನ, ರೀಷಾ ಅವರು 200 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ, ಸಾನ್ವಿ ಸಿ. ಎಚ್.50 ಮೀ. ಫ್ರೀಸ್ಟೈಲ್ ಚಿನ್ನದ ಪದಕ,50 ಮೀ. ಬ್ಯಾಕ್‌ಸ್ಟ್ರೋಕ್ ಚಿನ್ನದ ಪದಕ,100 ಮೀ. ಬ್ಯಾಕ್‌ಸ್ಟ್ರೋಕ್ ಚಿನ್ನದ ಪದಕ, ಆಸ್ಥಾ ಅವರು 50 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಚಿನ್ನ, 50 ಮೀ. ಬಟರ್‌ಫ್ಲೈ ಮತ್ತು 100 ಮೀ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ರಿಲೇ ಫಲಿತಾಂಶಗಳು:
4×100 ಮೀ. ಫ್ರೀಸ್ಟೈಲ್ ರಿಲೇ- U-14- ಚಿನ್ನ, 4×100 ಮೀ. ಫ್ರೀಸ್ಟೈಲ್ ರಿಲೇ-U17 – ಬೆಳ್ಳಿ, 4×100 ಮೀ. ಫ್ರೀಸ್ಟೈಲ್ ರಿಲೇ – U19 – ಬೆಳ್ಳಿ, 4×100 ಮೀ. ಮೆಡ್ಲಿ ರಿಲೇ – U14 – ಚಿನ್ನ, 4×100 ಮೀ. ಮೆಡ್ಲಿ ರಿಲೇ – U17 – ಬೆಳ್ಳಿ, 4×100 ಮೀ. ಮೆಡ್ಲಿ ರಿಲೇ – U19 – ಬೆಳ್ಳಿಯ ಪದಕ ಗೆದ್ದುಕೊಂಡಿದೆ.

ಮಂಗಳೂರಿನ ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ 44 ಚಿನ್ನ, 14 ಬೆಳ್ಳಿ ಹಾಗೂ 8 ಕಂಚಿನ ಪದಕಗಳು ಸೇರಿದಂತೆ ಒಟ್ಟು 66 ಪದಕಗಳನ್ನು ಕ್ಲಬ್ ಗೆದ್ದುಕೊಂಡಿದೆ.
ಅನಿತೇಜ್ ಮಧುಸೂದನ್ ಸಾಳೆ ಅವರು 800 ಮೀ. ಫ್ರೀಸ್ಟೈಲ್, 200 ಮೀ. ಬ್ಯಾಕ್‌ಸ್ಟ್ರೋಕ್ ಹಾಗೂ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನದ ಪದಕ, ಲಾಲನ್ ಯು. ನಾಯಕ್ ಅವರು 100 ಮೀ. ಬ್ಯಾಕ್‌ಸ್ಟ್ರೋಕ್ ಹಾಗೂ 400 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ, 200 ಮೀ. ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ, ಮೆಹಕ್ ರವಿ ಕುಮಾರ್ ಕೊಠಾರಿ ಅವರು 100 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 200 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಚಿನ್ನ, 50 ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ.
ರೀಶಾ ಪಿ. ಶೆಟ್ಟಿ ಅವರು 100 ಮೀ. ಫ್ರೀಸ್ಟೈಲ್ ಮತ್ತು 200 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ, 50 ಮೀ. ಬಟರ್‌ಫ್ಲೈನಲ್ಲಿ ಕಂಚಿನ ಪದಕ, ಪ್ರತ್ಯುಷ್ ಎಲ್.ಎಸ್. ಗೌಡ ಅವರು 50 ಮೀ. ಬಟರ್‌ಫ್ಲೈ, 50 ಮೀ. ಬ್ಯಾಕ್‌ಸ್ಟ್ರೋಕ್, 100 ಮೀ. ಬ್ಯಾಕ್‌ಸ್ಟ್ರೋಕ್, 4×100 ಮೀ. ಫ್ರೀಸ್ಟೈಲ್ ರಿಲೇ, 4×100 ಮೀ. ವೈಯಕ್ತಿಕ ಮೆಡ್ಲಿ ರಿಲೇಯಲ್ಲಿ ಚಿನ್ನದ ಪದಕ, ದೀಪಾಂಶ್ ಶೆಟ್ಟಿ ಅವರು 50 ಮೀ. ಫ್ರೀಸ್ಟೈಲ್, 100 ಮೀ. ಫ್ರೀಸ್ಟೈಲ್, 4×100 ಮೀ. ಫ್ರೀಸ್ಟೈಲ್ ರಿಲೇ, 4×100 ಮೀ. ವೈಯಕ್ತಿಕ ಮೆಡ್ಲಿ ರಿಲೇಯಲ್ಲಿ ಚಿನ್ನ, 200 ಮೀ. ಫ್ರೀಸ್ಟೈಲ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಶ್ರೀಹಾನ್ ಗೌಡ ಕೆ.ಜೆ. ಅವರು 200 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 4×100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ, 100 ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿ, 400 ಮೀ. ಫ್ರೀಸ್ಟೈಲ್‌ನಲ್ಲಿ ಕಂಚಿನ ಪದಕ, ಶ್ರೀಯನ್ ಗೌಡ ಕೆ.ಜೆ. ಅವರು 100 ಮೀ. ಬಟರ್‌ಫ್ಲೈ ಮತ್ತು 100 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಕಂಚು, 4×100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನದ ಪದಕ, ದೈವಿಕ್ ದೇವಾಡಿಗ ಅವರು 50 ಮೀ. ಬ್ರೆಸ್ಟ್ಸ್ಟ್ರೋಕ್ ಮತ್ತು 50 ಮೀ. ಬಟರ್‌ಫ್ಲೈನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದಾರೆ.
ವಿಹಾನ್ ರವಿ ಕುಮಾರ್ ಕೊಠಾರಿ ಅವರು 100 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 200 ಮೀ. ವೈಯಕ್ತಿಕ ಮೆಡ್ಲಿಯಲ್ಲಿ ಬೆಳ್ಳಿ, 4×100 ಮೀ. ವೈಯಕ್ತಿಕ ಮೆಡ್ಲಿ ರಿಲೇಯಲ್ಲಿ ಚಿನ್ನದ ಪದಕ, ನಿಶಾನ್ ಎಸ್. ಅವರು 4×100 ಮೀ. ವೈಯಕ್ತಿಕ ಮೆಡ್ಲಿ ರಿಲೇಯಲ್ಲಿ ಚಿನ್ನದ ಪದಕ ಸಮೃದ್ಧ್ ಎಲ್. ಶೆಟ್ಟಿ ಅವರು 100 ಮೀ. ಫ್ರೀಸ್ಟೈಲ್, 200 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 100 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಚಿನ್ನ, 4×100 ಮೀ. ವೈಯಕ್ತಿಕ ಮೆಡ್ಲಿ ರಿಲೇಯಲ್ಲಿ ಬೆಳ್ಳಿ, 4×100 ಮೀ. ಫ್ರೀಸ್ಟೈಲ್ ರಿಲೇಯಲ್ಲಿ ಕಂಚು, ಲಾಸ್ಯ ಕಿಶನ್ ಅವರು 50 ಮೀ. ಫ್ರೀಸ್ಟೈಲ್, 50 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 50 ಮೀ. ಬಟರ್‌ಫ್ಲೈನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಆಸ್ಥಾ ಎ. ಅವರು 100 ಮೀ. ಫ್ರೀಸ್ಟೈಲ್, 50 ಮೀ. ಬ್ರೆಸ್ಟ್ಸ್ಟ್ರೋಕ್ ಮತ್ತು 50 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಚಿನ್ನದ ಪದಕ, ಅನಿಕೇತ್ ರೈ ಅವರು 50 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗದಲ್ಲಿ ಕಂಚಿನ ಪದಕ, ಸಾನ್ವಿ ಸಿ. ಎಚ್. ಅವರು 100 ಮೀ. ಬ್ಯಾಕ್‌ಸ್ಟ್ರೋಕ್, 50 ಮೀ. ಬ್ಯಾಕ್‌ಸ್ಟ್ರೋಕ್ ಮತ್ತು 50 ಮೀ. ಫ್ರೀಸ್ಟೈಲ್ ವಿಭಾಗಗಳಲ್ಲಿ ಚಿನ್ನದ ಪದಕ, ಲಿಖಿತ್ ರಾಮಚಂದ್ರ ಅವರು 50 ಮೀ. ಫ್ರೀಸ್ಟೈಲ್, 100 ಮೀ. ಫ್ರೀಸ್ಟೈಲ್, 50 ಮೀ. ಬ್ರೆಸ್ಟ್ಸ್ಟ್ರೋಕ್, 4×50 ಮೀ. ಫ್ರೀಸ್ಟೈಲ್ ರಿಲೇ, 4×50 ಮೀ. ಮೆಡ್ಲಿ ರಿಲೇ ವಿಭಾಗಗಳಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

4×50 ಮೀ. ರಿಲೇ ಫಲಿತಾಂಶ:
ನಮನ ನಾಯಕ್ ಬಿ. ಅವರು 100 ಮೀ. ಬಟರ್‌ಫ್ಲೈ, 400 ಮೀ. ಫ್ರೀಸ್ಟೈಲ್ ಮತ್ತು 50 ಮೀ. ಬಟರ್‌ಫ್ಲೈ ವಿಭಾಗಗಳಲ್ಲಿ ಚಿನ್ನದ ಪದಕ, ವಿ. ವೈಷ್ಣವ್ ಅವರು 50 ಮೀ. ಬ್ರೆಸ್ಟ್ಸ್ಟ್ರೋಕ್ ವಿಭಾಗದಲ್ಲಿ ಬೆಳ್ಳಿ, 100 ಮೀ. ಬ್ರೆಸ್ಟ್ಸ್ಟ್ರೋಕ್ ಮತ್ತು 200 ಮೀ. ಬ್ರೆಸ್ಟ್ಸ್ಟ್ರೋಕ್ ವಿಭಾಗಗಳಲ್ಲಿ ಚಿನ್ನ, ಲಾಸ್ಯ ಸಂತೋಷ್ ಅವರು 100 ಮೀ. ಬಟರ್‌ಫ್ಲೈ ಮತ್ತು 100 ಮೀ. ಬ್ಯಾಕ್‌ಸ್ಟ್ರೋಕ್ ವಿಭಾಗಗಳಲ್ಲಿ ಚಿನ್ನ, 50 ಮೀ. ಬ್ರೆಸ್ಟ್ಸ್ಟ್ರೋಕ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ.


ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಸದಸ್ಯರಾಗಿರುವ ಈ ಈಜುಗಾರರು ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನ ಈಜುಕೊಳ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪಾರ್ಥ ವರನಾಶಿ,ತ್ರಿಶೂಲ್ ಗೌಡ,ಕ್ರಾಂತಿ ತೇಜ,ವಿಕಾಸ್ ,ಶಿಶಿಲ್,ನಿಶ್ಮಾ,ರಾಕೇಶ್ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    LEAVE A REPLY

    Please enter your comment!
    Please enter your name here