ಅಪಘಾತ ಪ್ರಕರಣ: ಬಸ್ಸಿನ ಚಾಲಕ, ಮಾಲಕನಿಗೆ ಜೈಲು ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್

0

ಪ್ರಾಸಿಕ್ಯೂಶನ್ ಪರ ಎಪಿಪಿ ಆರೋನ್ ಡಿ ಸೋಜಾ ವಿಟ್ಲ ವಾದ ಮಂಡನೆ

ಪುತ್ತೂರು: ಲೈಸನ್ಸ್ ಇಲ್ಲದೆ ಬಸ್ಸು ಚಲಾಯಿಸಿ ಅಪಘಾತ ಸಂಭವಿಸಿದ ಪ್ರಕರಣದಲ್ಲಿ ಮಂಗಳೂರಿನ ನ್ಯಾಯಾಲಯ ಚಾಲಕ ಮತ್ತು ಮಾಲಕನಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಚಾಲಕ ನಿಶಿತ್ ಶೆಟ್ಟಿ ಮತ್ತು ಬಸ್ ಮಾಲಕ ಪ್ರೀತಂ ದೇವೇಂದ್ರ ಕುಲಾಲ್ ಶಿಕ್ಷೆಗೆ ಒಳಗಾದವರು.

ಮಂಗಳೂರಿನ‌ ಬೆಂದೂರ್‌ವೆಲ್ ಜಂಕ್ಷನ್ ನಲ್ಲಿ 2024ರ ಜು.10ರಂದು ಸುಂದರಿ(66) ಅವರು ಶಕ್ತಿನಗರಕ್ಕೆ ಹೋಗುವ ಬಸ್ಸನ್ನು ಹತ್ತಲು ರಸ್ತೆ ದಾಟುತ್ತಿದ್ದಾಗ ಕರಾವಳಿ ವೃತ್ತದ ಕಡೆಯಿಂದ ಸ್ಟೇಟ್ ಬ್ಯಾಂಕ್ ಕಡೆಗೆ ನಿಶಿತ್ ಶೆಟ್ಟಿ ಚಲಾಯಿಸಿ ಕೊಂಡು ಬಂದ ಬಸ್ ಡಿಕ್ಕಿ ಹೊಡೆದಿತ್ತು. ಸುಂದರಿ ಅವರು ರಸ್ತೆಯ ಮೇಲೆ ಬಿದ್ದು ಬಸ್ಸಿನ ಎದುರಿನ ಚಕ್ರ ಅವರ ಬಲಕಾಲಿನ ಮೇಲೆ ಹರಿದು
ತೀವ್ರ ಸ್ವರೂಪದ ಗಾಯವಾಗಿತ್ತು. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಮಂಗಳೂರಿನ ಜೆ.ಎಂ.ಎಫ್. ಸಿ 8ನೇ ನ್ಯಾಯಾಲಯದ ನ್ಯಾಯಾಧೀಶೆ ಮೋನಿಷ ಆರ್. ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿ ಬಸ್ ಚಾಲಕ ನಿಶಿತ್ ಶೆಟ್ಟಿಗೆ ಲೈಸೆನ್ಸ್ ಇಲ್ಲದೆ ಬಸ್ಸು ಚಲಾಯಿಸಿದ್ದಕ್ಕೆ 1 ತಿಂಗಳ ಸಾದ ಜೈಲು ವಾಸ ಹಾಗೂ 5,000 ರೂ. ದಂಡ ಹಾಗೂ ಬಸ್‌ನ ಮಾಲಕ ಪ್ರೀತಮ್ ದೇವೇಂದ್ರ ಕುಲಾಲ್ ಬಸ್ ನ್ನು ಚಾಲಯಿಸಲು ನೀಡಿದ್ದಕ್ಕೆ 1 ತಿಂಗಳ ಸಾದಾ ಜೈಲು ವಾಸ ಹಾಗೂ 5,000 ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಆರೋನ್ ಡಿ ಸೋಜಾ ವಿಟ್ಲ ಅವರು ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here