







ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ಇತ್ತೀಚೆಗೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಹಿಂದು ಸಮಾಜವು ಮುಂದಿನ ದಿನಗಳಲ್ಲಿ ಎಲ್ಲ ರೀತಿಯಿಂದಲೂ ಎಚ್ಚರಿಕೆಯಿಂದ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.


ದರ್ಬೆ ಘಟನೆಯಲ್ಲಿ ಗಾಯಗೊಂಡು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಜನಾ ಪೈ ಅವರನ್ನು ಆ.27ರ ರಾತ್ರಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ, ಅವರ ಪತಿ ಸದಾಶಿವ ಪೈ, ಡಾ| ಪ್ರಭಾಕರ್ ಭಟ್ ಹಾಗೂ ಕಮಲಾ ಭಟ್ ದಂಪತಿ ಜತೆ ಮಾತುಕತೆ ನಡೆಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಘಟನೆಯಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆದಿರುವುದು ಗಂಭೀರ ವಿಚಾರ. ಮಹಿಳೆಯರ ರಕ್ಷಣೆಗೆ ಸರಕಾರ ಮತ್ತು ಪೊಲೀಸ್ ವ್ಯವಸ್ಥೆ ಯಾವ ರೀತಿಯಲ್ಲಿ ಸ್ಪಂದಿಸಬೇಕು ಎಂಬ ಬಗ್ಗೆ ಚಿಂತನೆ ನಡೆಯಬೇಕು. ಅಂಜನಾ ಪೈ ಮತ್ತು ಅವರ ಪುತ್ರನ ಮೇಲೆ ಗಂಭೀರ ಪ್ರಕರಣ ದಾಖಲಿಸಿರುವುದು ಸರಿಯೇ ಎಂಬುದನ್ನು ಪೊಲೀಸ್ ಇಲಾಖೆ ಮತ್ತು ಸರಕಾರ ಪರಿಶೀಲಿಸಬೇಕು.



ತಾಯಿಯ ಮೇಲೆಯೇ ದಾಳಿ ನಡೆಯುತ್ತಿರುವ ಸಂದರ್ಭದಲ್ಲಿ ಮಗನು ಏನು ಮಾಡಬೇಕು. ಮಹಾಭಾರತದಲ್ಲಿ ದ್ರೌಪದಿಯ ಸೀರೆ ಎಳೆದಾಗ ಸುಮ್ಮನಿದ್ದಂತೆ ಇರಬೇಕೇ ಎಂಬುದನ್ನೂ ಕಾನೂನು ವ್ಯವಸ್ಥೆ ಪರಿಗಣಿಸಬೇಕು ಎಂದು ಅವರು ಹೇಳಿದರು. ನಮ್ಮ ಮೇಲೆ ಅಥವಾ ನಮ್ಮ ಕುಟುಂಬದವರ ಮೇಲೆ ಆಕ್ರಮಣ ನಡೆದಾಗ ಆತ್ಮರಕ್ಷಣೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಕಾನೂನನ್ನು ಕೈಗೆತ್ತಿಕೊಳ್ಳುವುದು ನಮ್ಮ ಉದ್ದೇಶವಲ್ಲ. ಆದರೆ ಆಕ್ರಮಣವಾದಾಗ ರಕ್ಷಿಸಿಕೊಳ್ಳುವುದೇ ಅಪರಾಧವಾಗಬಾರದು'' ಎಂದು ಅವರು ಹೇಳಿದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಸಂಘಟನೆ ಅಥವಾ ಗುಂಪಿನಿಂದ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆಯಬಾರದು.
ದರ್ಬೆ ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆಯೇ ಎಂಬುದನ್ನು ತನಿಖೆ ಮೂಲಕ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ ಅವರು ಪೊಲೀಸರು ಯಾವುದೇ ಸರ್ಕಾರದ ಒತ್ತಡಕ್ಕೆ ಒಳಗಾಗದೆ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರವೂ ಮತಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು ಎಲ್ಲರಿಗೂ ಸಮಾನ ರಕ್ಷಣೆ ನೀಡಬೇಕು ಎಂದು ಅವರು ಹೇಳಿದರು.
ಮುಷ್ಕರಕ್ಕೆ ಶ್ಲಾಘನೆ: ಪುತ್ತೂರಿನ ಜನತೆ ಮುಷ್ಕರಕ್ಕೆ ಸ್ಪಂದಿಸಿದ ರೀತಿಯನ್ನು ಶ್ಲಾಘಿಸಿದ ಅವರು, ಇಂದು ಇನ್ನೊಬ್ಬರ ಅಂಗಡಿಯ ಮೇಲೆ ನಡೆದ ಘಟನೆ ನಾಳೆ ನಮ್ಮ ಅಂಗಡಿಯ ಮೇಲೂ ನಡೆಯಬಹುದು ಎಂಬ ಭಾವನೆ ಜನರಲ್ಲಿ ಮೂಡಿದೆ. ಅದಕ್ಕಾಗಿ ಸಮಾಜ ಎಚ್ಚರಿಕೆಯಿಂದಿರುವ ಅಗತ್ಯವಿದೆ” ಎಂದ ಅವರು `ನಾವು ಯಾರ ಮೇಲೂ ಆಕ್ರಮಣ ಮಾಡಲು ಹೋಗುವುದಿಲ್ಲ. ಆದರೆ ನಮ್ಮ ಮೇಲೆ ಆಕ್ರಮಣವಾದಾಗ ಏನು ಮಾಡಬೇಕು ಎಂಬುದನ್ನು ಸಮಾಜ ತಿಳಿದುಕೊಳ್ಳಬೇಕು. ಹಿಂದು ಸಮಾಜ ಕಾನೂನನ್ನು ಗೌರವಿಸುತ್ತಲೇ ತನ್ನ ಸುರಕ್ಷತೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಕಾಲಘಟ್ಟ ಇದು’ ಎಂದರು. ಈ. ಅಶೋಕ್ ಶೆಣೈ, ನಾಗೇಂದ್ರ ಬಾಳಿಗ, ಸುರೇಶ್ಚಚಿದ್ರ ರೈ, ಶಶಿಧರ್ ನಾಯಕ್, ಪುನಿತ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು ಚಲೋಗೆ ಬೆಂಬಲ
ಪುತ್ತೂರು ಚಲೋ ಮೆರವಣಿಗೆಗೆ ಸಂಪೂರ್ಣ ಬೆಂಬಲವಿದ್ದು, ಮೆರವಣಿಗೆಗೆ ಪೊಲೀಸರು ಅನುಮತಿ ನೀಡಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಡಾ| ಪ್ರಭಾಕರ ಭಟ್ ಕಲ್ಲಡ್ಕ ಒತ್ತಾಯಿಸಿದರು. ಆದರೆ ಇನ್ನೊಂದು ಕಡೆಯಿಂದಯಲೂ ಅದೇ ದಿನ ಮೆರವಣಿಗೆ ಅನುಮತಿ ಕೇಳುತ್ತಿದ್ದಾರೆ. ಅವರಿಗೆ ಸಮಯ ಬದಲಾವಣೆ ಮಾಡಿ ಕೊಡಲಿ. ಮೊನ್ನೆ ಅವರ ಹಬ್ಬದ ಕಾರ್ಯಕ್ರಮದಲ್ಲಿ ನಾವು ಮೆರವಣಿಗೆಗೆ ಅನುಮತಿ ಕೇಳಿರಲಿಲ್ಲ. ಎಲ್ಲ ಸಮುದಾಯಗಳಿಗೂ ಸಮಾನವಾಗಿ ಕಾನೂನು ಅನ್ವಯವಾಗಬೇಕು. ಸೌಹಾರ್ದ ಎಂದರೆ ಒಂದು ಸಮುದಾಯ ಮಾತ್ರ ಹೊಂದಾಣಿಕೆ ಮಾಡಿಕೊಂಡು ಬದುಕುವುದಲ್ಲ. ಎಲ್ಲರೂ ಕಾನೂನು ಮತ್ತು ನ್ಯಾಯದ ಚೌಕಟ್ಟಿನಲ್ಲಿ ಪರಸ್ಪರ ಗೌರವದಿಂದ ಬದುಕುವುದು ಎಂದು ಡಾ. ಪ್ರಭಾರಕರ ಭಟ್ ಹೇಳಿದರು.










