







ಕಾಣಿಯೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಳುವಾರು ಇಲ್ಲಿ ಆ.28ರಂದು ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪುತ್ತೂರು ಇದರ ವತಿಯಿಂದ ಪುತ್ತೂರು ತಾಲೂಕು ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು ಇಲ್ಲಿಯ ಕಬ್ ತಂಡವು ದ್ವಿತೀಯ ಸ್ಥಾನ ಹಾಗು ಬುಲ್ ಬುಲ್ ತಂಡ ತೃತೀಯ ಸ್ಥಾನ ಪಡೆದಿರುತ್ತದೆ. ಭಾಗವಹಿಸಿದ ಹನ್ನೆರಡು ತಂಡಗಳಲ್ಲಿ ಕಾಣಿಯೂರು ಸರಕಾರಿ ಪ್ರಾಥಮಿಕ ಶಾಲೆ ಮಾತ್ರ ಪ್ರತಿನಿಧಿಸಿತ್ತು.













