






ಕಾಣಿಯೂರು: ಸ್ನೇಹಿತರ ಬಳಗ ಕಲ್ಪಡ ಕೊಡಿಯಾಲ ಇದರ ದಶಮ ಸಂಭ್ರಮದ ಪ್ರಯುಕ್ತ ಬೃಹತ್ ಕಾರ್ಮಿಕ ಕಾರ್ಡ್ ನೋಂದಾವಣೆ ಹಾಗೂ ಕಿಟ್ ವಿತರಣೆ ಕಾರ್ಯಕ್ರಮವು ಆ 30 ಕಲ್ಪಡ ಮೂವಪ್ಪೆಯಲ್ಲಿ ನಡೆಯಿತು.


ಕಾರ್ಯಕ್ರಮವನ್ನು ಹಿರಿಯ ಕಾರ್ಮಿಕ ಫಲಾನುಭವಿ ಶ್ರೀ ಹೊನ್ನಪ್ಪ ಗೌಡ ಕಲ್ಪಡ ಅವರು ಉದ್ಘಾಟಿಸಿದರು. ಸ್ನೇಹಿತರ ಬಳಗದ ಅಧ್ಯಕ್ಷರಾದ ಸುರೇಶ್ ಗುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಕಾರ್ಮಿಕ ಇಲಾಖೆಯ ಕಾರ್ಮಿಕ ಅಧಿಕಾರಿ ಶ್ರೀಮತಿ ವಿಲ್ಮ ಎಲಿಜಬೆತ್ ತಾವ್ರೊ ಅವರು ಕಟ್ಟಡ ಕಾರ್ಮಿಕರಿಗೆ ದೊರೆಯುವ ವಿವಿಧ ಸೌಲಭ್ಯಗಳು, ಫಲಾನುಭವಿಗಳಿಗೆ ಸರ್ಕಾರದಿಂದ ದೊರೆಯುವ ಹಣಕಾಸಿನ ನೆರವು, ಅಸಂಘಟಿತ ಕಾರ್ಮಿಕರಿಗಾಗಿ ಇರುವ ವಿವಿಧ ಯೋಜನೆಗಳು ಹಾಗೂ ಸಾರಿಗೆ ಕ್ಷೇತ್ರದ ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಸರ್ಕಾರ ಕಾರ್ಮಿಕರಿಗಾಗಿ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಅಲ್ಲದೆ, ಕಾರ್ಮಿಕರಿಗಾಗಿ ಇಂತಹ ಉಪಯುಕ್ತ ಕಾರ್ಯಕ್ರಮವನ್ನು ಆಯೋಜಿಸಿದ ಸ್ನೇಹಿತರ ಬಳಗದ ಕಾರ್ಯವನ್ನು ಶ್ಲಾಘಿಸಿದರು.




ಕಾರ್ಯಕ್ರಮದಲ್ಲಿ ಸ್ನೇಹಿತರ ಬಳಗದ ಗೌರವಾಧ್ಯಕ್ಷರಾದ ಶಿವರಾಮ ಉಪಾಧ್ಯಾಯ, ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲದ ಅಧ್ಯಕ್ಷ ಧರ್ಮಪಾಲ ಕಲ್ಪಡ, ಸುಳ್ಯ ತಾಲೂಕು ನೋಡೆಲ್ ಅಧಿಕಾರಿ ಜೀವನ್ ಹಾಗೂ ಪುತ್ತೂರು ತಾಲೂಕು ನೋಡೆಲ್ ಅಧಿಕಾರಿ ಹೇಮಂತ್ ಉಪಸ್ಥಿತರಿದ್ದರು. ಬಳಗದ ಸ್ಥಾಪಕ ಅಧ್ಯಕ್ಷ ಪ್ರಸಾದ್ ಕೆ. ಸ್ವಾಗತಿಸಿದರು. ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ಲೋಕೇಶ್ ಅವರು ವಂದಿಸಿದರು. ಸಂಚಾಲಕರಾದ ಕೇಶವ ಕೆ.ಪಿ.ಕಾರ್ಯಕ್ರಮದ ನಿರೂಪಿಸಿದರು.
ಕಾರ್ಯಕ್ರಮದಲ್ಲಿ 80ಕ್ಕೂ ಅಧಿಕ ಕಾರ್ಮಿಕ ಫಲಾನುಭವಿಗಳು ಭಾಗವಹಿಸಿ ಕಾರ್ಮಿಕ ಕಾರ್ಡ್ ನೋಂದಾವಣೆ ಹಾಗೂ ವಿವಿಧ ಸೌಲಭ್ಯಗಳ ಮಾಹಿತಿಯ ಸದುಪಯೋಗ ಪಡೆದುಕೊಂಡರು.










