ಕಡಬ ತಾ.5ನೆಯ ಕನ್ನಡ ಸಾಹಿತ್ಯ ಸಮ್ಮೇಳನ-ಕೃತಿ ಬಿಡುಗಡೆ

0

ರಾಮಕುಂಜ: ಆ.29ರಂದು ರಾಮಕುಂಜ ಶ್ರೀ ವಿಶ್ವೇಶತೀರ್ಥ ಸೌಧದ ಅನುಪಮ ಸಭಾಂಗಣದ ವಿಶ್ವೇಶತೀರ್ಥ ವೇದಿಕೆಯಲ್ಲಿ ನಡೆದ ಕಡಬ ತಾಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರಗೋಷ್ಠಿ ಹಾಗೂ ಕೃತಿ ಬಿಡುಗಡೆ ನಡೆಯಿತು.


ಕನ್ನಡದ ಬೆಳವಣಿಗೆಯಲ್ಲಿ ತುಳು ಭಾಷೆಯ ಕೊಡುಗೆ ಎಂಬ ವಿಚಾರದ ಕುರಿತು ಇತಿಹಾಸಕಾರ ಹಾಗೂ ಸಂಶೋಧಕ ಡಾ.ತುಕರಾಮ ಪೂಜಾರಿ ಬಂಟ್ವಾಳ ಅವರು ವಿಚಾರ ಮಂಡನೆ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕಿ ಪ್ರೇಮಾ ಬಿ., ಸುಪ್ರಿತಾ ಚರಣ್ ಪಾಲಪ್ಪೆ ಕಡಬ ಹಾಗೂ ಮೋಹಿತಾ ಹೊಸ್ಮಠ ಅವರ ಕೃತಿ ಬಿಡುಗಡೆಗೊಳಿಸಲಾಯಿತು.


ಕಾಂಚನ ವೆಂಕಟ ಸುಬ್ರಹ್ಮಣ್ಯಂ ಪ್ರೌಢಶಾಲಾ ಮುಖ್ಯಶಿಕ್ಷಕ ರಾಧಾಕೃಷ್ಣ ಕೆ.ಎಸ್., ಪ್ರಮುಖರಾದ ಗಿರಿಶಂಕರ ಸುಲಾಯ, ಮಾಮಚ್ಚನ್ ಮ್ಯಾಥ್ಯೂ, ಪ್ರಶಾಂತ್ ರೈ ಮನವಳಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಕೃಷಿಕ ಉದಯ ಕಶ್ಯಪ್ ಪೂರಿಂಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಯಶಸ್ವಿನಿ ಸ್ವಾಗತಿಸಿದರು. ಕ.ಸಾ.ಪ. ಕಡಬ ಹೋಬಳಿ ಅಧ್ಯಕ್ಷ ಪದ್ಮಪ್ಪ ಗೌಡ ವಂದಿಸಿದರು. ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು.

LEAVE A REPLY

Please enter your comment!
Please enter your name here