






ಸವಣೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸವಣೂರು ವಲಯದ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮ ಹಾಗೂ ಭಜನಾ ಪರಿಷತ್ ಪದಗ್ರಹಣ ಸಮಾರಂಭ ಸವಣೂರು ಯುವ ಸಭಾ ಭವನದಲ್ಲಿ ನಡೆಯಿತು.


ಪದಗ್ರಹಣ ಸಮಾರಂಭದ ಉದ್ಘಾಟಿಸಿದ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುವ ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮವು ಪ್ರಕೃತಿ ವಿಕೋಪ, ಅಪಘಾತ, ಪ್ರವಾಹ, ಬೆಂಕಿ ಅವಘಡ ಸೇರಿದಂತೆ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಜನರಿಗೆ ತ್ವರಿತವಾಗಿ ನೆರವು ನೀಡುವ ಉದ್ದೇಶದಿಂದ ರೂಪುಗೊಂಡ ಸ್ವಯಂಸೇವಕರ ಸೇವಾ ಕಾರ್ಯವಾಗಿದೆ ಎಂದರು.




ಅಧ್ಯಕ್ಷತೆಯನ್ನು ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಇಂದುಶೇಖರ್ ಶೆಟ್ಟಿ ಅವರು ವಹಿಸಿದ್ದರು.ಯೋಜನೆಯ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆಯುವ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಸಮರ್ಥ ಜನಸೇವಾ ಟ್ರಸ್ಟಿನ ಅಧ್ಯಕ್ಷ ಗಿರಿಶಂಕರ ಸುಲಾಯ,ಕಡಬ ತಾಲೂಕು ಜನಜಾಗೃತಿ ವೇದಿಕೆಯ ಪೂರ್ವಾಧ್ಯಕ್ಷ ಮಹೇಶ್ ಕೆ ಸವಣೂರು,ಮಂಜುನಾಥೇಶ್ವರ ಭಜನಾ ಪರಿಷತ್ನ ಗೌರವ ಸಲಹೆಗಾರ ನಡುಮಜಲು ಸತ್ಯನಾರಾಯಣ ಹೆಗ್ಡೆ,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ, ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ಕಡಬದ ಕ್ಯಾಪ್ಟನ್ ರಮೇಶ್ ಬಾಣಜಾಲು, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸವಣೂರು ವಲಯದ ಅಧ್ಯಕ್ಷ ಚಂದ್ರಶೇಖರ ಮೆದು,ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು,ಸುರೇಶ್ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.
ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ನೂತನ ಸದಸ್ಯರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.ಭಜನಾ ಪರಿಷತ್ ಸದಸ್ಯರಿಗೆ ದಾಖಲಾತಿ ಹಸ್ತಾಂತರ ಮಾಡಲಾಯಿತು.ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ಹೇಮಲತಾ ಸ್ವಾಗತಿಸಿ,ಸವಣೂರು ವಲಯದ ಶೌರ್ಯ ಘಟಕ ಪ್ರತಿನಿಧಿ ಅನಿಲ್ ಖಂಡಿಗ ವಂದಿಸಿದರು.ರಾಕೇಶ್ ಆಚಾರ್ಯ ನಿರೂಪಿಸಿದರು.










