ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

0

ಪುತ್ತೂರು: “ಉತ್ತಮ ಸೇವೆಯೊಂದಿಗೆ ನಮ್ಮ ಜೊತೆ ಬೆಳೆಯಿರಿ” ಎಂಬ ಧ್ಯೇಯ ವಾಕ್ಯದೊಂದಿಗೆ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಬಳಿಯ ಜೆಎಂಜೆ ಕಾಂಪ್ಲೇಕ್ಸ್‌ ನಲ್ಲಿ ಕಾರ್ಯಾಚರಿಸುತ್ತಿರುವ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಜೆಎಂಜೆ ಕಾಂಪ್ಲೆಕ್ಸ್ನಲ್ಲಿ ಆ.30 ರಂದು ಸಂಘದ ಸೊಸೈಟಿ ಅಧ್ಯಕ್ಷ ಲಿಯೋ ಡಿ’ಸೋಜರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸದಸ್ಯತನ, ಪಾಲು ಬಂಡವಾಳ:
ವರದಿ ವರ್ಷದಲ್ಲಿ 928 ಸದಸ್ಯರಿದ್ದು, ರೂ.20,34,250 ಪಾಲು ಬಂಡವಾಳವಿರುತ್ತದೆ. ಸಂಘದಲ್ಲಿ ಆಭ್ಯುದಯ ಸಮೃದ್ಧಿ ಯೋಜನೆ, ಮಾಸಿಕ ಠೇವಣಿ ಯೋಜನೆ, ಪಿಗ್ಮಿ ಠೇವಣಿ, ನಿರಖು ಠೇವಣಿ, ಉಳಿತಾಯ ಖಾತೆ, ಮಾಸಿಕ ವರಮಾನ ಯೋಜನೆ, ಚಾಲ್ತಿ ಖಾತೆ ಹೀಗೆ ಒಟ್ಟು ರೂ.5,38,04,358 ಠೇವಣಿ ಸಂಗ್ರಹವಿರುತ್ತದೆ. ಸದಸ್ಯರಿಗೆ ಆರ್ಥಿಕ ಸವಲತ್ತು ನೀಡುವ ಸಲುವಾಗಿ ಠೇವಣಿ ಸಾಲ, ವಾಹನ ಸಾಲ, ಮನೆ ಸಾಲ, ವೈಯಕ್ತಿಕ ಸಾಲ, ವ್ಯಾಪಾರ ಸಾಲ, ಪಿಗ್ಮಿ ಸಾಲ, ಜಾಮೀನು ಸಾಲ, ಚಿನ್ನಾಭರಣ ಸಾಲವನ್ನು ನೀಡುತ್ತಿದ್ದು, ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಮೇಲೆ ವಿಶ್ವಾಸವಿರಿಸಿ ಠೇವಣಿ ಹೂಡಿದ ಎಲ್ಲಾ ಠೇವಣಿದಾರರಿಗೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರು ಅಭಿನಂದನೆಯನ್ನು ಸಲ್ಲಿಸುತ್ತಾ ಮುಂದಿನ ಆರ್ಥಿಕ ವರ್ಷದಲ್ಲಿ ಇನ್ನೂ ಹೆಚ್ಚಿನ ಠೇವಣಿಯನ್ನು ಸಂಸ್ಥೆಯಲ್ಲಿ ತೊಡಗಿಸುವಂತೆ ಮನವಿ ಮಾಡಿದರು.

ಆಡಳಿತ ಮಂಡಳಿ ಸಭೆಗಳು:
ವರದಿ ಸಾಲಿನಲ್ಲಿ ಎಂಟು ಆಡಳಿತ ಮಂಡಳಿ ಸಭೆಗಳು ಹಾಗೂ 18 ಉಪ ಸಮಿತಿ ಸಭೆಗಳು ಜರಗಿರುತ್ತದೆ. ಆಡಳಿತ ಮಂಡಳಿಯ ಸಭೆಗಳಲ್ಲಿ ಆಯವ್ಯಯ ಮಂಜೂರಾತಿ, ಸದಸ್ಯರ ಸೇರ್ಪಡೆ, ಸಾಲ ಸೌಲಭ್ಯಗಳ ವಿತರಣೆ, ಮರುಪಾವತಿ ವಿವರ ಪರಿಶೀಲನೆ ಮತ್ತು ಇತರ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ಸಂಸ್ಥೆಯ ಮೇಲೆ ಅಭಿಮಾನವಿಟ್ಟುಕೊಂಡು ಸಾಲವನ್ನು ಪಡೆದ ಸಾಲಗಾರರು ಸಕಾಲದಲ್ಲಿ ಮರು ಪಾವತಿಸಿ ಸಂಸ್ಥೆಗೆ ಸಹಕಾರ ನೀಡಿರುತ್ತಾರೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರು ಹೇಳಿದರು.

ಈ ಸಂದರ್ಭದಲ್ಲಿ ಅಗಲಿದ ಸಂಸ್ಥೆಯ ನಿರ್ದೇಶಕರಿಗೆ ಹಾಗೂ ಸದಸ್ಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಸೊಸೈಟಿಯ ಉಪಾಧ್ಯಕ್ಷೆ ಕ್ರಿಸ್ತಿನಾ ಡೀನಾ ಮೊಂತೇರೊ, ನಿರ್ದೇಶಕರಾದ ಪ್ರವೀಣ್ ಮೊಂತೇರೊ, ಪ್ರಶಾಂತ್ ಡಿ’ಸೋಜ, ಅವಿನಾಶ್ ಡಿ’ಸೋಜ, ಜೋನ್ ಡೇವಿಡ್ ಸೆರಾವೊ, ಗಣೇಶ್, ಹರಿಪ್ರಸಾದ್ ರೈ, ಶರಲ್ ನಿಶಾ ಪಾಶನ್, ಎವ್ಲಿನ್ ಡಿ’ಸೋಜ, ರೇಷ್ಮಾ ಪಾಶನ್, ವೀಣಾ ಶಿವಕುಮಾರ್, ಡೆನ್ನಿಸ್ ಡಿ’ಸೋಜ, ಭವಾನಿ ಉಪಸ್ಥಿತರಿದ್ದರು.

ಶಾಖಾ ವ್ಯವಸ್ಥಾಪಕ ವಾಲ್ಟರ್ ಅರೋನ್ ಡಿ’ಸೋಜ ಪ್ರಾರ್ಥಿಸಿದರು. ಸಂಸ್ಥೆಯ ಆಡಳಿತ ವ್ಯವಸ್ಥಾಪಕಿ ಶ್ರೀಮತಿ ವಿಲ್ಮಾ ಪ್ರಿಯಾಂಕ ಡಿ’ಸೋಜ ವಂದಿಸಿ, ಕಿರಿಯ ಸಹಾಯಕ ಧನುಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಎಲ್ಲಾ ನಿರ್ದೇಶಕರಿಗೆ ಸಹಕಾರಿಯ ಶಾಲು ಹೊದಿಸಿ ಗೌರವಿಸಲಾಯಿತು.

ಸದಸ್ಯರುಗಳ ಸಹಕಾರವೇ ಸಂಘದ ಅಭಿವೃದ್ಧಿ..
ಸಂಸ್ಥೆಯು ಮೂರು ವರ್ಷಗಳನ್ನು ಪೂರೈಸಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸಂಸ್ಥೆಯು ಕೇವಲ ವ್ಯಾಪಾರ ದೃಷ್ಟಿಯನ್ನು ಇಟ್ಟುಕೊಳ್ಳದೆ ಸದಸ್ಯರೊಂದಿಗೆ ನಿರಂತರ ಸಂಪರ್ಕವಿಟ್ಟು ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಸಾಮಾಜಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಬಡ ಕುಟುಂಬಗಳಿಗೆ ಹಾಗೂ ಮಗುವಿನ ಕಾಯಿಲೆಯ ಚಿಕಿತ್ಸೆಗಾಗಿ ಧನಸಹಾಯವನ್ನು ಮಾಡಲಾಗಿದೆ. ಸದಸ್ಯರ ಅನೂಕಲತೆಗೆ ಅನುಗುಣವಾಗಿ ಸಂಸ್ಥೆಯ ವೆಬ್ಸೈಟ್‌ www.abhyudayacooperative.com ಅನ್ನು ಈಗಾಗಲೇ ಅನಾವರಣಗೊಳಿಸಲಾಗಿದೆ. ಸಂಸ್ಥೆಯಲ್ಲಿ ಒಂದು ವರ್ಷಕ್ಕೆ ಠೇವಣಿ ಇಡುವ ಹಿರಿಯ ನಾಗರಿಕರಿಗೆ, ವಿಶೇಷಚೇತನರಿಗೆ, ಸೈನಿಕರಿಗೆ, ನಿವೃತ್ತ ಪೊಲೀಸ್ ಸಿಬ್ಬಂದಿಗಳು ಸೂಕ್ತ ದಾಕಲೆಯನ್ನು ಒದಗಿಸಿದ್ದಲ್ಲಿ 10.50% ಬಡ್ಡಿದರವನ್ನು ನೀಡಲಾಗುತ್ತದೆ.
ವಿಕ್ಟರ್ ಶರೋನ್ ಡಿ’ಸೋಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ

ಶೀಘ್ರದಲ್ಲಿಯೇ ಮತ್ತೊಂದು ಶಾಖೆ..
ಸಂಸ್ಥೆಯು ಇದೀಗ ಮೂರನೇ ವರ್ಷವನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಸದಸ್ಯರ ಸೂಚನೆಯ ಮೇರೆಗೆ ಸಂಸ್ಥೆಯನ್ನು ವಿಸ್ತರಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದು, ಶೀಘ್ರದಲ್ಲಿ ಮೆಲ್ಕಾರ್, ಮಡಂತ್ಯಾರು, ಉಪ್ಪಿನಂಗಡಿ ಇಲ್ಲಿನ ಯಾವುದಾದರೊಂದು ಭಾಗದಲ್ಲಿ ನೂತನ ಶಾಖೆಯನ್ನು ಆರಂಭಿಸುವ ಬಗ್ಗೆ ಗಮನ ಹರಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರು ಹೇಳಿದರು.


LEAVE A REPLY

Please enter your comment!
Please enter your name here