ದಕ್ಷಿಣ ಕಾಶಿ ಉಪ್ಪಿನಂಗಡಿಯಲ್ಲಿ ಸ್ಟೀಲ್, ತಾಮ್ರ, ಹಿತ್ತಾಳೆ ಸಾಮಾಗ್ರಿಗಳ ಮಳಿಗೆ ಫೆರ್ನಾಂಡೀಸ್ ಮೆಟಲ್ಸ್ ಶುಭಾರಂಭ

0

ಕುಟುಂಬದ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಯಲ್ಲೂ ಕೈಜೋಡಿಸಿ-ವಂ|ಬಾಲ್ತಜಾರ್ ಪಿಂಟೊ
ಉದ್ಯಮವು ಗ್ರಾಹಕರ ಪ್ರೋತ್ಸಾಹದೊಂದಿಗೆ ಯಶಸ್ಸಿನತ್ತ ಸಾಗಲಿ-ವಂ|ಜೆರಾಲ್ಡ್ ಡಿ’ಸೋಜ

ಪುತ್ತೂರು: ಸ್ಟೀಲ್, ತಾಮ್ರ ಹಾಗೂ ಹಿತ್ತಾಳೆ ಉದ್ಯಮದಲ್ಲಿ ಸುಮಾರು 33 ವರ್ಷಗಳ ಅನುಭವ ಹೊಂದಿರುವ ಫೆರ್ನಾಂಡೀಸ್ ಮೆಟಲ್ಸ್ ಇದೀಗ ತಮ್ಮ ಉದ್ಯಮವನ್ನು ಉಪ್ಪಿನಂಗಡಿಗೆ ವಿಸ್ತರಿಸಿದ್ದು ಆ.31 ರಂದು ಸಂಗಮ ಕ್ಷೇತ್ರ ಹಾಗೂ ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಹೊಂದಿರುವ ಉಪ್ಪಿನಂಗಡಿಯ ಹಳೆ ಸೇತುವೆ ರಸ್ತೆಯ ಅಕ್ಷತಾ ಕಾಂಪ್ಲೆಕ್ಸ್‌ನಲ್ಲಿ ‘ಫೆರ್ನಾಂಡೀಸ್ ಮೆಟಲ್ಸ್’ ಸಂಸ್ಥೆಯು ಶುಭಾರಂಭಗೊಂಡಿತು.


ಕುಟುಂಬದ ಅಭಿವೃದ್ಧಿಯೊಂದಿಗೆ ಸಮಾಜದ ಅಭಿವೃದ್ಧಿಯಲ್ಲೂ ಕೈಜೋಡಿಸಿ-ವಂ|ಬಾಲ್ತಜಾರ್ ಪಿಂಟೊ:
ಬನ್ನೂರು ಸಂತ ಅಂತೋನಿ ಚರ್ಚ್ ಧರ್ಮಗುರು ವಂ|ಬಾಲ್ತಜಾರ್ ಪಿಂಟೊ ಹಾಗೂ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜರವರು ನೂತನ ಸಂಸ್ಥೆಗೆ ಪವಿತ್ರ ಜಲ ಸಿಂಪಡಿಸಿ ಆಶೀರ್ವಚನಗೈಯ್ದರು. ಈ ಸಂದರ್ಭದಲ್ಲಿ ಮಾತನಾಡಿದ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು, ವ್ಯವಹಾರ ಉದ್ಯಮವು ಕೇವಲ ತಮ್ಮ ಕುಟುಂಬದ ಅಭಿವೃದ್ಧಿಗೋಸ್ಕರ ಆಗಬಾರದು. ಕುಟುಂಬದ ಅಭಿವೃದ್ಧಿಯ ಜೊತೆಗೆ ಸಮಾಜದ ಅಭಿವೃದ್ಧಿಯಲ್ಲೂ ಕೈಜೋಡಿಸಿದಾಗ ಸಮಾಜದ ಅಭಿವೃದ್ಧಿ ಆಗುತ್ತದೆ. ಮಳಿಗೆಯ ಮಾಲಕ ತೋಮಸ್ ಫೆರ್ನಾಂಡೀಸ್ ದಂಪತಿರವರಿಗೆ ದೇವರು ಕೊಟ್ಟ ಪ್ರತಿಭೆಯನ್ನು ಉತ್ತಮ ರೀತಿಯಲ್ಲಿ ಪಾಲಿಸಿದ್ದಾರೆ. ಜೊತೆಗೆ ತೋಮಸ್‌ರವರ ಸೇವೆಯು ಸಮಾಜ ಬಾಂಧವರಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ತೋಮಸ್‌ರವರು ಬನ್ನೂರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಾಗಲಿ ಅಥವಾ ಇತರ ಸಂದರ್ಭದಲ್ಲಾಗಲಿ ಯಾವಾಗಲೂ ಅಭಿವೃದ್ಧಿ ಕುರಿತಾಗಿಯೇ ಗಮನ ಹರಿಸಿರುತ್ತಾರೆ. ಇದೀಗ ಉಪ್ಪಿನಂಗಡಿಯ ಜನತೆಗೆ ತಮ್ಮ ಗುಣಮಟ್ಟದ ಸೇವೆಯಲ್ಲಿ ನೀಡಲು ಮುಂದಾಗಿದ್ದು ಗ್ರಾಹಕರು ಪ್ರೋತ್ಸಾಹಿಸಬೇಕು ಎಂದರು.


ಉದ್ಯಮವು ಗ್ರಾಹಕರ ಪ್ರೋತ್ಸಾಹದೊಂದಿಗೆ ಯಶಸ್ಸಿನತ್ತ ಸಾಗಲಿ-ವಂ|ಜೆರಾಲ್ಡ್ ಡಿ’ಸೋಜ:
ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಧರ್ಮಗುರು ವಂ|ಜೆರಾಲ್ಡ್ ಡಿ’ಸೋಜ ಮಾತನಾಡಿ, ತೋಮಸ್ ಫೆರ್ನಾಂಡೀಸ್‌ರವರು ಈ ಉದ್ಯಮದಲ್ಲಿ ಬಹಳ ಅನುಭವಿ. ಈಗಾಗಲೇ ಅವರು ಬನ್ನೂರಿನ ಆನೆಮಜಲಿನಲ್ಲಿ ಹಾಗೂ ಕಡಬದಲ್ಲಿ ಈ ಉದ್ಯಮವನ್ನು ಆರಂಭಿಸಿರುತ್ತಾರೆ. ಇದೀಗ ಈ ಉದ್ಯಮವನ್ನು ಅವರು ಉಪ್ಪಿನಂಗಡಿಗೆ ವಿಸ್ತರಿಸಿ ಇಲ್ಲಿನ ಜನತೆಗೆ ಬಹಳ ಅನುಕೂಲತೆಯನ್ನು ಉಂಟು ಮಾಡಿರುತ್ತಾರೆ. ನಮ್ಮಲ್ಲಿರುವ ಪ್ರತಿಭೆಯನ್ನು ಹುದುಗಿಡುವ ಬದಲು ಅದನ್ನು ಸಮಾಜದಲ್ಲಿ ತೋರ್ಪಡಿಸುವಂತಾದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ತೋಮಸ್‌ರವರ ಈ ವ್ಯವಹಾರ ಉದ್ಯಮವು ಗ್ರಾಹಕರ ಪ್ರೋತ್ಸಾಹದೊಂದಿಗೆ ಯಶಸ್ಸಿನತ್ತ ಸಾಗಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.


ನೂತನ ಸಂಸ್ಥೆ ಫೆರ್ನಾಂಡೀಸ್ ಮೆಟಲ್ಸ್ ಮಾಲಕ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್‌ನ ನಿಕಟಪೂರ್ವ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್ ಹಾಗೂ ವೀಡಾ ಪಿಂಟೋ ದಂಪತಿ, ಪುತ್ರರಾದ ಜೋಹಾಸ್, ಜೋಹಾನ್ ಸ್ವಾಗತಿಸಿ, ಗ್ರಾಹಕರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಉದ್ಯಮಿ ಸಚಿನ್ ಸುಂದರ ಗೌಡ, ನಿವೃತ್ತ ಮುಖ್ಯ ಶಿಕ್ಷಕ ವಿನ್ಸೆಂಟ್ ಫೆರ್ನಾಂಡೀಸ್, ಆಯುರ್ವೇದ ವೈದ್ಯ ಡಾ.ಸುಪ್ರೀತ್ ಲೋಬೊ, ಕಥೋಲಿಕ್ ಸಭಾ ಪುತ್ತೂರು ವಲಯದ ಅಧ್ಯಕ್ಷ ಜೆರಾಲ್ಡ್ ಮಸ್ಕರೇನ್ಹಸ್, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಸದಸ್ಯ ರೋಶನ್ ಮೊರಾಸ್, ಸೇಡಿಯಾಪು ಕೋಸ್ಟಲ್ ಕೋಕನಟ್ ಇಂಡಸ್ಟ್ರೀ ಮಾಲಕ ಡೆನ್ನಿಸ್ ಮಸ್ಕರೇನ್ಹಸ್, ಉಪ್ಪಿನಂಗಡಿ ಕಥೋಲಿಕ್ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೋಸ್ ಹಿಮಾಲಯ, ಉಲ್ಲಾಸ್ ಬಾರ್ ಆಂಡ್ ಫ್ಯಾಮಿಲಿ ರೆಸ್ಟೋರೆಂಟ್ ಮಾಲಕ ಕರುಣಾಕರ ಸುವರ್ಣ, ಉದ್ಯಮಿ ಧನ್ಯಕುಮಾರ್ ರೈ, ಕಟ್ಟಡ ಮಾಲಕಿ ವೀಣಾ ವಸಂತ್ ಸಹಿತ ಹಲವರು ಹಿತೈಷಿಗಳು ಹಾಗೂ ಮಾಲಕ ತೋಮಸ್ ಫೆರ್ನಾಂಡೀಸ್‌ರವರ ಕುಟುಂಬಿಕರು ಉಪಸ್ಥಿತರಿದ್ದರು.


*ಉದ್ಘಾಟನಾ ಪ್ರಯುಕ್ತ ರಿಯಾಯಿತಿ ದರದಲ್ಲಿ ಸಾಮಾಗ್ರಿಗಳು ಲಭ್ಯ
*ಅಸ್ತ್ರ ಒಲೆ, ಬಾಯ್ಲರ್ ಹಂಡೆ, ಎಲ್ಲಾ ರೀತಿಯ ಸ್ಟೀಲ್ ಪಾತ್ರೆಗಳು, ಕಿಚನ್ ಕೌಂಟರ್, ರ‍್ಯಾಕ್ ಹಾಗೂ ಇನ್ನಿತರ ಪಾತ್ರೆಗಳು
*ಸ್ಟೀಲ್ ರೈಲಿಂಗ್ಸ್ ಮಾಡಿಕೊಡಲಾಗುವುದು
*ಸ್ಟೇನ್‌ಲೆಸ್ ಸ್ಟೀಲ್, ಪಾತ್ರೆಗಳು ಹಾಗೂ ಗೃಹೋಪಯೋಗಿ ವಸ್ತುಗಳ ತಯಾರಕರು ಹಾಗೂ ವಿತರಕ ಸಂಸ್ಥೆ
*ಗ್ರಾಹಕರಿಗೆ ವಸ್ತುಗಳು ಹೋಲ್‌ಸೇಲ್ ಹಾಗೂ ರಿಟೇಲ್ ದರದಲ್ಲಿ ಲಭ್ಯ
*ಹೆಚ್ಚಿನ ಮಾಹಿತಿಗಾಗಿ 9880068965 ನಂಬರಿಗೆ ಸಂಪರ್ಕಿಸಬಹುದು

ಸಹ ಸಂಸ್ಥೆ..
-ಜೋಹಾಸ್ ಸ್ಟೀಲ್ ಫ್ಯಾಕ್ಟರಿ, ಆನೆಮಜಲು
-ಮರೀನಾ ಸ್ಟೀಲ್ಸ್, ಕಡಬ

LEAVE A REPLY

Please enter your comment!
Please enter your name here