






ವಿಟ್ಲ: ಬಂಟ್ವಾಳ ತಾಲೂಕಿನ ನೇರಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ ವಹಿಕಲ್ ಬಜಾರ್ ನ ಸಹಸಂಸ್ಥೆ ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಸೆ.3ರಂದು ವಿಟ್ಲ ಮೇಗಿನಪೇಟೆಯಲ್ಲಿ ಶುಭಾರಂಭಗೊಳ್ಳಲಿದೆ.


ನೂತನ ಸಂಸ್ಥೆಯನ್ನು ವಿಟ್ಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗರವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಭಾರತ್ ಗ್ರೂಪ್ನ ಪಾಲುದಾರರಾದ ಹರೀಶ್ ಎಂ. ಶೆಟ್ಟಿ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೋಟು, ಸದಸ್ಯ ವಿ.ಕೆ.ಎಂ ಅಶ್ರಫ್, ಪತ್ರಕರ್ತ ಲತೀಫ್ ನೇರಳಕಟ್ಟೆ, ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಅಝೀಝ್ ಸನ ಸಹಿತ ವಿವಿಧ ಕ್ಷೇತ್ರದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಭಾರತ್ ಡಿಜಿಟಲ್ ಸೇವಾ ಕೇಂದ್ರದ ಮಾಲಕ ಅಶ್ರಫ್ ಭಾರತ್ ರವರು ತಿಳಿಸಿದ್ದಾರೆ



ಉಚಿತ ಟೀಶರ್ಟ್:
ಸಂಸ್ಥೆಯ ಶುಭಾರಂಭದ ಪ್ರಯುಕ್ತ ಸೆ.3ರಿಂದ ಸೆ.5ರ ವರೆಗೆ ಸಂಸ್ಥೆಯಲ್ಲಿ ವಾಹನಗಳ ಇನ್ಸೂರೆನ್ಸ್ ಹಾಗೂ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಿಸುವವರಿಗೆ ಉಚಿತವಾಗಿ ಟೀ ಶರ್ಟ್ ಲಭಿಸಲಿದೆ.










