ಜಿಲ್ಲಾ ಮಟ್ಟದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಮಕುಂಜ ಕನ್ನಡ ಮಾಧ್ಯಮ ಬಾಲಕರ ವಿಭಾಗದಲ್ಲಿ ಸಮಗ್ರ ಚಾಂಪಿಯನ್-ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ, ಮಂಗಳೂರು, ದಕ್ಷಿಣ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಂಟ್ವಾಳ ಹಾಗೂ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆ, ವಿಟ್ಲ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 17 ವರ್ಷದೊಳಗಿನ ಬಾಲಕ–ಬಾಲಕಿಯರ ಜಿಲ್ಲಾ ಮಟ್ಟದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡವು ಶಾಲಾ ಇತಿಹಾಸದಲ್ಲೇ ಮೊದಲ ಬಾರಿಗೆ ಭಾಗವಹಿಸಿ ಅದರಲ್ಲಿ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದೆ.

65 ಕೆ.ಜಿ. ವಿಭಾಗದಲ್ಲಿ ಸಮರ್ಥ್ ಬಾಹುಬಲಿ ಯಲ್ಲಟ್ಟಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆಯ ಹಳಿಂಗಳಿ ಬಾಹುಬಲಿ ಯಲ್ಲಟ್ಟಿ ಹಾಗೂ ಶೋಭಾ ಯಲ್ಲಟ್ಟಿ ದಂಪತಿಯ ಪುತ್ರ 71 ಕೆ.ಜಿ. ವಿಭಾಗದಲ್ಲಿ ಆದರ್ಶ್ ರೈ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಎಕ್ಕಳ ಕೃಷ್ಣಾ ರೈ ಹಾಗೂ ಸರಸ್ವತಿ ದಂಪತಿಯ ಪುತ್ರ. 88 ಕೆ.ಜಿ. ವಿಭಾಗದಲ್ಲಿ ಪುನೀತ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಗೋಳಿತೊಟ್ಟು ಕುದ್ಕೋಳಿ ನಾರಾಯಣ ಗೌಡ ಹಾಗೂ ಶ್ಯಾಮಲಾ ದಂಪತಿಯ ಪುತ್ರ. 56 ಕೆ.ಜಿ. ವಿಭಾಗದಲ್ಲಿ ಯತೀಶ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ರಾಮಕುಂಜ ಕುದ್ಕೋಳಿ ಮೋಹನ ಹಾಗೂ ಸರೋಜಾ ದಂಪತಿಯ ಪುತ್ರ.

ಬಾಲಕಿಯರ ವಿಭಾಗದಲ್ಲಿ 48 ಕೆ.ಜಿ. ವಿಭಾಗದಲ್ಲಿ ದೀಕ್ಷಾಶ್ರೀ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಬಲ್ಯ ರಾಮಣ್ಣ ನಾಯ್ಕ ಹಾಗೂ ಗೀತಾ ದಂಪತಿಯ ಪುತ್ರಿ, 63 ಕೆ.ಜಿ. ವಿಭಾಗದಲ್ಲಿ ಯಶಿಕ ದ್ವಿತೀಯ ಸ್ಥಾನ ಪಡೆದಿದ್ದಾರೆ ಇವರು ಕಲ್ಕಾಡಿ ಹರಿಶ್ಚಂದ್ರ ಹಾಗೂ ಉಷಾ ದಂಪತಿಯ ಪುತ್ರಿ,ವಿದ್ಯಾರ್ಥಿಗಳಿಗೆ ಮಾಜಿ ಸೈನಿಕ ಹಾಗೂ ಎನ್‌ಐಎಸ್ ವೇಟ್‌ಲಿಫ್ಟಿಂಗ್ ತರಬೇತುದಾರರಾದ ವಿಶ್ವನಾಥ್ ಗೌಡ ಹಾಗೂ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲಾ ರೈ ಅವರು ತರಬೇತಿ ಮತ್ತು ಮಾರ್ಗದರ್ಶನ ನೀಡಿದ್ದರು.

ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here