ಪ್ರಿಯದರ್ಶಿನಿಯಲ್ಲಿ ಸಂಸ್ಕೃತ ದಿನಾಚರಣೆ

0

  • ಸಂಸ್ಕಾರಕ್ಕಾಗಿ ಸಂಸ್ಕೃತ ಅಗತ್ಯ – ಹರಿಶಂಕರ ಶರ್ಮ

ಪುತ್ತೂರು: ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಬೆಟ್ಟಂಪಾಡಿಯಲ್ಲಿ ಸಂಸ್ಕೃತ ದಿನಾಚರಣೆ ನಡೆಯಿತು.

ಮುಖ್ಯ ಅತಿಥಿ ಎಸ್.ವಿ.ಎ.ಯು.ಪಿ ಶಾಲೆ ಸ್ವರ್ಗ ಇಲ್ಲಿನ ಸಂಸ್ಕೃತ ಅಧ್ಯಾಪಕರಾದ ಹರಿಶಂಕರಶರ್ಮ ಮಾತನಾಡುತ್ತಾ ಸಂಸ್ಕಾರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಇಂದು ನಡೆದಿದೆ. ಅಂಕಗಳಿಕೆಗಾಗಿ ಸಂಸ್ಕೃತ ಕಲಿಕೆಯಲ್ಲ ಸಂಸ್ಕಾರಕ್ಕಾಗಿ ಸಂಸ್ಕೃತ ಅಗತ್ಯ. ವೇದ ಉಪನಿಷತ್ತುಗಳ ವಿಶಿಷ್ಟ ಜ್ಞಾನದ ಅರ್ಥ ತಿಳಿಯುವುದಕ್ಕಾಗಿ ದೇವ ಭಾಷೆ ಸಂಸ್ಕೃತದ ಅವಶ್ಯಕತೆ ಇದೆ ಎಂದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ರಂಗನಾಥ ರೈ ಗುತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಸ್ಕೃತ ಅಧ್ಯಾಪಕರಾದ ಶಿವರಾಮ ಭಟ್ ಸ್ವಾಗತಿಸಿದರು. ಸಂಸ್ಕೃತ ಭಾಷೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನ ನಡೆಯಿತು. ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಂಸ್ಕೃತ ಭಾಷೆಯಲ್ಲಿ ನೂರರಲ್ಲಿ ನೂರು ಅಂಕ ಪಡೆದ ವಿದ್ಯಾರ್ಥಿಗಳಾದ ಶಾವ್ಯ ಯುರೈ, ವಸು ಶರ್ಮ, ಶ್ರೀರಾಮ ಶರ್ಮ, ನವ್ಯಶ್ರೀ ಹಾಗೂ ಸಂಸ್ಕೃತ ಒಲಂಪಿಯಾಡ್ ಪರೀಕ್ಷೆಯಲ್ಲಿ ಸಾಧನೆಗೈದ ಚಂದನ್ ಇವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.

10ನೇ ತರಗತಿ ವಿದ್ಯಾರ್ಥಿ ಪ್ರಣವ್ ವಂದಿಸಿದರು. ವೇದಿಕೆಯಲ್ಲಿ ಮುಖ್ಯಗುರು ರಾಜೇಶ್ ಎನ್ ಉಪಸ್ಥಿತರಿದ್ದರು. ಹತ್ತನೇ ತರಗತಿ ವಿದ್ಯಾರ್ಥಿಗಳಾದ ಮೈತ್ರೇಯರಾಮ ಡಿ, ಆದಿತ್ಯ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here