ಪ್ರಜ್ಞಾ ಆಶ್ರಮದಲ್ಲಿ ಉಮೇಶ್ ನಾಯಕ್ ಅವರಿಗೆ ಸನ್ಮಾನ

0

ಪುತ್ತೂರು: ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು, ಹೊಸಬೆಳಕು ಬಡವರ ಆಶಾಕಿರಣ ಆರ್ಲಪದವು ಪುತ್ತೂರು, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಪುತ್ತೂರು ಘಟಕ, ಶ್ರೀ ಕೃಷ್ಣ ಯುವಕ ಮಂಡಲ ಸಿಟಿಗುಡ್ಡೆ ಪುತ್ತೂರು ವತಿಯಿಂದ ಪುತ್ತೂರಿನ ಪ್ರಜ್ಞಾ ಆಶ್ರಮದಲ್ಲಿ ಸೆ.1 ರಂದು ಬಹುಮುಖ ಪ್ರತಿಭೆ ಉಮೇಶ್ ನಾಯಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷರೂ, ಸುವರ್ಣ ಕನ್ನಡಿಗ ಪ್ರಶಸ್ತಿ ಪುರಸ್ಕೃತರೂ ಆದ ಉಮೇಶ್ ನಾಯಕ್ ಅವರು ಶಿಕ್ಷಣ, ಸಾಹಿತ್ಯ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಸೇವೆಗಾಗಿ ಈ ಗೌರವ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀವಾಸು ನಾಯ್ಕ ನಿಸರ್ಗ ಗಣೇಶ್ ಭಾಗ್ ನೆಹರೂನಗರ ಪುತ್ತೂರು, ಪತ್ರಕರ್ತ ಹಿರಿಯ ಸಾಹಿತಿ ಜಯಾನಂದ ಪೆರಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷೆ, ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಡಾ. ಶಾಂತಾ ಪುತ್ತೂರು, ರಕ್ತ ಸಂಜೀವಿನಿ ಬ್ಲಡ್ ಗ್ರೂಪ್‌ನ ಸಮಾಜ ಸೇವಕ ನವೀನ್ ಸಿಟಿಗುಡ್ಡೆ, ಕಿರುತೆರೆ ಕಲಾವಿದ ಕೃಷ್ಣಪ್ಪ, ಅಣ್ಣಪ್ಪ, ಜ್ಯೋತಿ ದಂಪತಿ, ಅಸಹಾಯಕರ ಸೇವಾ ಟ್ರಸ್ಟ್ ಅಧ್ಯಕ್ಷೆ ನಯನಾ ರೈ, ಕಬಕ ಎಸ್‌ಡಿಎಂಸಿ ಸದಸ್ಯೆ ಪ್ರಮೀಳಾ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ನೆಟ್ಲದ ಈಶ್ವರ ಕುಲಾಲ್-ನಳಿನಾಕ್ಷಿ ದಂಪತಿ ಪುತ್ರಿ, ಕಲ್ಲಡ್ಕ ಶ್ರೀರಾಮ ಶಾಲೆಯ ವಿದ್ಯಾರ್ಥಿನಿ ಕಾರುಣ್ಯಳ ಹುಟ್ಟುಹಬ್ಬ ಆಚರಿಸಲಾಯಿತು.

LEAVE A REPLY

Please enter your comment!
Please enter your name here