






ಪುತ್ತೂರು: ಉದ್ಯಮದಲ್ಲಿ ಉತ್ತಮ ಗುಣಮಟ್ಟ, 33 ವರ್ಷಗಳ ಅನುಭವ, ಕಡಿಮೆ ಬೆಲೆ ಹಾಗೂ ಗ್ರಾಹಕರ ನಂಬಿಕೆಯನ್ನು ಗಳಿಸಿಕೊಂಡಿರುವ ದರ್ಬೆ ಬುಶ್ರಾ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ನಯಾ ಚಪ್ಪಲ್ ಬಜಾರ್ ಇದೀಗ ಸೆ.5 ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗಾಗಿಯೇ ಅದೇ ದಿನದಂದು ವಿಶೇಷ ಆಫರ್ ಅನ್ನು ಪರಿಚಯಿಸುತ್ತಿದೆ.
ಶಿಕ್ಷಕರ ದಿನಾಚರಣೆ ದಿನದಂದು ಮಳಿಗೆಗೆ ಭೇಟಿ ನೀಡಿ, ಖರೀದಿಸುವ ವಸ್ತುಗಳ ಮೇಲೆ ಮಳಿಗೆಯ ಆಫರ್ ಅಲ್ಲದೆ ಎಕ್ಸ್ಟ್ರಾ 9% ಆಫರ್ ಶಿಕ್ಚಕರಿಗೆ ಲಭ್ಯವಾಗಲಿದೆ.


ಈ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಉತ್ತಮ ಅಧ್ಯಾಪಕ ಪ್ರಶಸ್ತಿಗೆ ಭಾಜನರಾಗಿರುವ ರೋಟರಿ ಕ್ಲಬ್ ಪುತ್ತೂರು ನಿಕಟಪೂರ್ವ ಕಾರ್ಯದರ್ಶಿ ಹಾಗೂ ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ|ಸುಬ್ಬಪ್ಪ ಕೈಕಂಬರವರನ್ನು ಸನ್ಮಾನಿಸಲಾಗುತ್ತದೆ. ಮಳಿಗೆಯು ಈಗಾಗಲೇ ಕಾರ್ಮಿಕರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಸೈನಿಕರ ದಿನಾಚರಣೆ ಹೀಗೆ ಹಲವು ದಿನಾಚರಣೆಗಳನ್ನು ಮಳಿಗೆಯಲ್ಲಿ ಹಮ್ಮಿಕೊಂಡು ಜನರ ಪ್ರಶಂಸೆಗೆ ಪಾತ್ರವಾಗಿತ್ತು. ಇದೀಗ ಮಳಿಗೆಯು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗೆ ವಿಶೇಷ ಆಫರ್ ಅನ್ನು ಪರಿಚಯಿಸುತ್ತಿದ್ದು ಶಿಕ್ಷಕರು ಇದರ ಪ್ರಯೋಜನ ಪಡೆದುಕೊಳ್ಞುವಂತೆ ಮಳಿಗೆಯ ಪ್ರಕಟಣೆ ತಿಳಿಸಿದೆ.













