ಉಪ್ಪಿನಂಗಡಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ-ಹಿರೇಬಂಡಾಡಿ ಶಾಲೆಗೆ ದ್ವಿತೀಯ ಸ್ಥಾನ

0

ಹಿರೇಬಂಡಾಡಿ: ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲಕರ ವಿಭಾಗದಲ್ಲಿ ಹಿರೇಬಂಡಾಡಿ ಸರಕಾರಿ ಉ.ಹಿ.ಪ್ರಾ.ಶಾಲೆ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದೆ.

ಶಾಲಾ ಮುಖ್ಯಶಿಕ್ಷಕ ಬಾಬು ಟಿ.,ಅವರ ಮಾರ್ಗದರ್ಶನದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವಾರಿಜ, ಶಿಕ್ಷಕಿ ರಾಧಿಕಾ, ಎಸ್‌ಡಿಎಂಸಿ ಸದಸ್ಯರಾದ ರೋಹಿತ್, ನವೀನ್, ಪುಣಿತ್, ಕೌಶಿಕ್, ಕಾರ್ತಿಕ್, ಗಣೇಶ್ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here