









ತಿಂಗಳಾಡಿ: ಶ್ರೀ ಕೃಷ್ಣ ಮಿತ್ರವೃಂದ (ರಿ.), ಶ್ರೀ ಕ್ಷೇತ್ರ ದೇವಗಿರಿ, ತಿಂಗಳಾಡಿ ಮತ್ತು ರೋಟರಾಕ್ಟ್ ಕ್ಲಬ್ ತಿಂಗಳಾಡಿ (ಪ್ರಾಯೋಜಿತ: ರೋಟರಿ ಪುತ್ತೂರು ಪೂರ್ವ) ಇವರ ಸಂಯುಕ್ತ ಆಶ್ರಯದಲ್ಲಿ 34ನೇ ವರ್ಷದ ಮೊಸರು ಕುಡಿಕೆ ಉತ್ಸವವು ಸೆ.4ರಂದು ಶ್ರೀ ದೇವತಾ ಮಂದಿರ, ಶ್ರೀ ಕ್ಷೇತ್ರ ದೇವಗಿರಿಯಲ್ಲಿ ನಡೆಯಿತು.



ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮ:
ಈ ಕಾರ್ಯಕ್ರಮವನ್ನು ಭಾಗಮಂಡಲ ಶೇಷಪ್ಪ ರೈ ಮಿತ್ತೋಡಿ ಉದ್ಘಾಟಿಸಿದರು. ರೋಟರಾಕ್ಟ್ ತಿಂಗಳಾಡಿಯ ಅಧ್ಯಕ್ಷ Rtr. ಪ್ರಜ್ವತ್ ರೈ ಮಿತ್ರಂಪಾಡಿ ಅತಿಥಿಗಳನ್ನು ಸ್ವಾಗತಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಪುತ್ತೂರು ಪೂರ್ವದ ನಿಯೋಜಿತ ಅಧ್ಯಕ್ಷ Rtn. ದೀಪಕ್ ಶೆಟ್ಟಿ ಹಾಗೂ ಶ್ರೀ ದೇವತಾ ಸಮಿತಿಯ ಅಧ್ಯಕ್ಷ ಮಿತ್ರಂಪಾಡಿ ಜಯರಾಮ ರೈ, ಶ್ರೀ ಕೃಷ್ಣ ಮಿತ್ರವೃಂದದ ಅಧ್ಯಕ್ಷ ರಾಧಾಕೃಷ್ಣ ರೈ ಚಾವಡಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಮಿತ್ರವೃಂದದ ಕಾರ್ಯದರ್ಶಿ ಧನಂಜಯ ಗೌಡ ಪಟ್ಟೆ, ಶ್ರೀ ಕೃಷ್ಣ ಮಿತ್ರವೃಂದದ ಸದಸ್ಯರು, ರೋಟರಾಕ್ಟ್ ಕ್ಲಬ್ ತಿಂಗಳಾಡಿಯ ಸದಸ್ಯರು ಹಾಗೂ ಊರಿನ ಜನರು ಉಪಸ್ಥಿತರಿದ್ದರು.
ರೋಟರಾಕ್ಟ್ ಕ್ಲಬ್ ತಿಂಗಳಾಡಿ ಸಭಾಪತಿ Rtn. ಶರತ್ ಗೌಡ ಅವರು ಕಾರ್ಯಕ್ರಮ ನಿರೂಪಿಸಿದರು. ರೋಟರಾಕ್ಟ್ ಕ್ಲಬ್ ತಿಂಗಳಾಡಿ ಕಾರ್ಯದರ್ಶಿ Rtr. ಅಕ್ಷತ್ ರೈ ಚಾವಡಿ ವಂದಿಸಿದರು.ಉದ್ಘಾಟನಾ ಸಮಾರಂಭದ ನಂತರ ಬೆಳಿಗ್ಗೆ 10:30ಕ್ಕೆ ಮಕ್ಕಳ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು. ಬಳಿಕ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಧ್ಯಾಹ್ನ 1:00 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಮಧ್ಯಾಹ್ನ 2:00 ಗಂಟೆಯಿಂದ ಸಾರ್ವಜನಿಕ ಕಬಡ್ಡಿ ಪಂದ್ಯಾಟ ಜರುಗಿತು. ರಾತ್ರಿ 8:00 ಗಂಟೆಯಿಂದ ಶ್ರೀ ದೇವತಾ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು.










