







ತಾಲೂಕಿನ ಸಂಕಷ್ಟ – ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರಲು ಇರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ
ಇತಿಹಾಸದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಸರಕಾರದ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ಸೆಪ್ಟೆಂಬರ್ 18ರಂದು ನಡೆಯಲಿದೆ. ಕರಾವಳಿ ಜಿಲ್ಲೆಗಳ ಹಲವು ಬೇಡಿಕೆಗಳ ಕುರಿತು ಈ ಸಭೆಯಲ್ಲಿ ಸಕಾರಾತ್ಮಕ ನಿರ್ಣಯಗಳಾಗಲಿವೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.


ಹಾಗಿದ್ದರೆ ಪುತ್ತೂರು ತಾಲೂಕಿನ ಪ್ರಮುಖ ಸಮಸ್ಯೆಗಳು ಮತ್ತು ಪ್ರಮುಖ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯುವ ಅವಕಾಶವನ್ನು ನಾವೂ ಸೃಷ್ಠಿಸಿಕೊಳ್ಳೋಣವೇ…?
ಜನರು ತಾಲೂಕಿನ ಮತ್ತು ತಮ್ಮ ಊರಿನ ಪ್ರಮುಖ ಬೇಡಿಕೆಯ ಕುರಿತು ಸುದ್ದಿಗೆ ಬರೆಯಿರಿ. ಅಥವಾ ವಾಟ್ಸಾಪ್ ಮೂಲಕ ಕಳಿಸಿರಿ. ಅಥವಾ ವೀಡಿಯೋ ಮಾಡಿ ನಮಗೆ ಕಳುಹಿಸಿರಿ. ಅಥವಾ ಸುದ್ದಿಯ ವರದಿಗಾರರು ಅಥವಾ ಪ್ರತಿನಿಽಗಳು ನಿಮ್ಮ ಊರಿಗೆ ಬಂದಾಗ ಅವರಿಗೆ ಬೈಟ್ ನೀಡಿ. ಅವುಗಳನ್ನು ಪ್ರಚಾರ ಮಾಡುವ ಮೂಲಕ ಮತ್ತು ಸರಕಾರದ ಮುಖ್ಯಸ್ಥರಿಗೆ ನೀಡುವ ಮೂಲಕ ಸರಕಾರದ ಗಮನಕ್ಕೆ ತರುವ ಕಾರ್ಯವನ್ನು ನಾವು ಮಾಡುತ್ತೇವೆ, ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ನಮೂದಿಸಿ ಸುದ್ದಿಗೆ ಬರೆಯಿರಿ. ಅಥವಾ ವಾಟ್ಸಪ್ ಮಾಡಿ. ವೀಡಿಯೋ ಮಾಡಿ ಕಳುಹಿಸಿ.
ವಾಟ್ಸಪ್ ನಂಬರ್ :8050294039
ಇಮೇಲ್ : [email protected] – ಸುದ್ದಿ ಮೀಡಿಯಾ ಹೌಸ್ ಪುತ್ತೂರು



ಪರಿಗಣಿಸಬೇಕಾದ ಪ್ರಮುಖ ಅಂಶಗಳು
1) ಕಸ್ತೂರಿ ರಂಗನ್ ವರದಿ ವಿವಾದ
2) ತುಳು ಭಾಷೆಗೆ ಮಾನ್ಯತೆ
3) ಪುತ್ತೂರು ಮತ್ತು ದ.ಕ.ಜಿಯನ್ನು ಪ್ರಮುಖ ಟೂರಿಸಂ ಹಬ್ ಆಗಿ ಪರಿವರ್ತಿಸುವುದು.
4) ರೋಡ್ ಟ್ರಾನ್ಸ್ಪೋರ್ಟ್, ರೈಲು ಪ್ರಯಾಣ, ವಿಮಾನ
ಪ್ರಯಾಣ ಮತ್ತು ಬಂದರು ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದು.
5) ಅಡಿಕೆಗೆ ಹಳದಿ ರೋಗ
6) ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಭ್ರಷ್ಟಾಚಾರ ರಹಿತ ಆಡಳಿತ
7) ಸರ್ಕಾರಿ ಶಾಲೆಗಳಲ್ಲಿನ ಮೂಲ ಸೌಕರ್ಯ ಕೊರತೆ, ಸರ್ಕಾರಿ ಕಛೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸುವುದು










