









ಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪದವಿಪೂರ್ವ ವಿಭಾಗದ ವಿದ್ಯಾರ್ಥಿನಿಯರು ಟೀಚರ್ಸ್ ಡೇ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಿದರು.
ಹಳೇ ಕಾಲದ ಟೀಚರ್ಸ್ ಮತ್ತು ವಿದ್ಯಾರ್ಥಿನಿಯರು ಹಾಗೂ ಅಂದಿನ ವಿದ್ಯಾರ್ಥಿ ವ್ಯವಸ್ಥೆಯ ಬಗ್ಗೆ ಹಳೇಯ ಮಾದರಿಗಳ ಅಣುಕು ಪ್ರದರ್ಶನ ಮೂಲಕ ಕಾರ್ಯಕ್ರಮವನ್ನು ನಡೆಸಲಾಯಿತು.



ದ್ವಿತೀಯ ವಿಜ್ಞಾನ ವಿಭಾಗದ ರಾಫಿಯ ಮದ್ದಡ್ಕ ರಚಿಸಿದ ಕೈಬರಹ ಸ್ಟೇಜ್ ಫ್ಲೆಕ್ಸ್ ಪ್ರಶಂಸೆ ಗಳಿಸಿತು.ಪದವಿಪೂರ್ವ ಹಾಗೂ ಪದವಿ, ಥಿಯೋಲಜಿ, ಹೈಸ್ಕೂಲ್ ವಿಭಾಗಗಳ ಉಪನ್ಯಾಸಕರಿಗೆ ಕ್ಯಾಂಪಸ್ ಆಗಮಿಸುವಾಗ ಹೂಗುಚ್ಚ ನೀಡಿ ಗೌರವಿಸಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಹಳೇ ಕಾಲದ ತಿಂಡಿತಿನಿಸುಗಳನ್ನು ಹಾಗೂ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.
ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂಧ್ಯಾ ಪಿ ಹಾಗೂ ಎಲ್ಲಾ ಶಿಕ್ಷಕಿಯರು ವಿದ್ಯಾರ್ಥಿನಿಯರ ಈ ಅಪೂರ್ವ ಶೈಲಿಯ ಕಾರ್ಯಕ್ರಮಕ್ಕೆ ಅಭಿನಂಧನೆಗಳನ್ನು ಅರ್ಪಿಸಿದರು.










