







75ರ ಸಂಭ್ರಮಾಚರಣೆ ಉದ್ಘಾಟನೆ | ಪೂರ್ವ ವಿದ್ಯಾರ್ಥಿ ಸಮಾಗಮ


ನೆಲ್ಯಾಡಿ: ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 75ರ ಸಂಭ್ರಮಾಚರಣೆ ಉದ್ಘಾಟನೆ ಹಾಗೂ ಪೂರ್ವ ವಿದ್ಯಾರ್ಥಿ ಸಮಾಗಮ ಸಂಕಲ್ಪ @ 75 ಕಾರ್ಯಕ್ರಮ ಸೆ.6ರಂದು ನಡೆಯಿತು.



ಆರಂಭದಲ್ಲಿ ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ವೇದಿಕೆಗೆ ಸ್ವಾಗತಿಸಿ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪೂರ್ವ ವಿದ್ಯಾರ್ಥಿಗಳಾದ ಡಾ.ಅಭಯಕುಮಾರ್, ಜಾನ್ ಪಿ.ಎಸ್., ಶೇಖ್ ಆದಂ ಸಾಹೇಬ್, ಡಾ.ವಾಸಪ್ಪ ಗೌಡ, ಜಯರಾಮ ಗೌಡ ನಾಲ್ಗುತ್ತು, ಗಂಗಾಧರ ಶೆಟ್ಟಿ, ರಾಜೇಶ್, ಮಹಮ್ಮದ್ ಹನೀಫ್ ಸಿಟಿ, ರವಿಚಂದ್ರ ಹೊಸವಕ್ಲು ಅವರು ಚೀಟಿ ಎತ್ತುವಿಕೆಯಲ್ಲಿ ತಮಗೆ ಸಿಕ್ಕ ವಿಷಯದ ಕುರಿತು ಮಾತನಾಡಿ ಶಾಲೆಯಲ್ಲಿ ಕಲಿತ ಅನುಭವ ಹಂಚಿಕೊಂಡರು. ಪೂರ್ವ ವಿದ್ಯಾರ್ಥಿಗಳಿಗಾಗಿ ವಿವಿಧ ಮನರಂಜನೆ ಕಾರ್ಯಕ್ರಮ ನಡೆಯಿತು.
ಗುರುವಂದನೆ:
ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೆ ಶಾಲು, ಹಾರಾರ್ಪಣೆ, ಸ್ಮರಣಿಕೆ ನೀಡಿ ಗುರುವಂದನೆ ಸಲ್ಲಿಸಲಾಯಿತು. ಶಿಕ್ಷಕರಾದ ರಾಧಾಕೃಷ್ಣ, ಪುಷ್ಪಲತಾ, ಹೇಮಾಲತಾ, ಧರ್ಣಪ್ಪ ಗೌಡ, ದಿನಕರ ರಾವ್, ವಸಂತಿ, ಸಾರಮ್ಮ, ಅನ್ನಮ್ಮ, ಜಗನ್ನಾಥ, ಕೇಶವ ಗೌಡ, ಮೇರಿ, ಸೀತಮ್ಮ, ಜೆಸ್ಸಿ, ಗಿರಿಜಾ, ಚಿನ್ನಮ್ಮ, ತಾರ, ಉಮಾವತಿ, ವೀಣಾ, ಭಾರತಿ ಉಳ್ಳಾಲ, ಯಮುನಾ, ಮಮತಾ, ಸುನಂದ, ಶಾಂತಿ, ಜಯಂತಿ, ಒ.ಜೆ.ಅನ್ನಮ್ಮ, ಗುಡ್ಡಪ್ಪ ಗೌಡ ಬಲ್ಯ, ಜನಾರ್ದನ ಟಿ., ಶಿವಕುಮಾರ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ನಿವೃತ್ತ ಶಿಕ್ಷಕರಾದ ದಿನಕರ, ಜಗನ್ನಾಥ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ದ.ಕ.ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಂತಜಾರ್ಜ್ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ತೋಮಸ್ ಎಂ.ಐ. ಹಾಗೂ ಶಾಲೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನೂ ಸನ್ಮಾನಿಸಿ ಗೌರವಿಸಲಾಯಿತು.
75ರ ಸಂಭ್ರಮಾಚರಣೆ ಸಮಿತಿ ಅಧ್ಯಕ್ಷ ಶಾಜಿ ವರ್ಗೀಸ್ ಮಾತನಾಡಿ, ೫ ವರ್ಷದ ಹಿಂದೆ ತಂದೆ ಯು.ಪಿ.ವರ್ಗೀಸ್ ಅವರು ಈ ಶಾಲೆಗೆ ಕಟ್ಟಡ ನಿರ್ಮಾಣಕ್ಕೆ ೫ ಲಕ್ಷ ರೂ.ಕೊಡುವುದಾಗಿ ಭರವಸೆ ನೀಡಿದ್ದರು. ಅದನ್ನು ಈಡೇರಿಸುವ ಕಾಲ ಈಗ ಬಂದಿದೆ. ಹಲವು ಶಿಕ್ಷಕರು ಈ ಶಾಲೆಗೆ ಅಡಿಪಾಯ ಹಾಕಿಕೊಟ್ಟು ನಿವೃತ್ತರಾಗಿದ್ದಾರೆ. ಅವರ ಆಶೀರ್ವಾದದಿಂದ ಕಟ್ಟಡ ನಿರ್ಮಾಣಕ್ಕೆ ಪೂರ್ವ ವಿದ್ಯಾರ್ಥಿಗಳು ಸಹಕಾರ ನೀಡಬೇಕಾಗಿದೆ ಎಂದರು.
ಗೌರವಾಧ್ಯಕ್ಷ ಸರ್ವೋತ್ತಮ ಗೌಡ ಅವರು ಮಾತನಾಡಿ, ಈ ಶಾಲೆಯಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೊಠಡಿ ಕೊರತೆ ಇರುವುದರಿಂದ ಒಳ್ಳೆಯ ಕಟ್ಟಡ ನಿರ್ಮಾಣ ಮಾಡಿ 75ನೇ ವರ್ಷಾಚರಣೆ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಬೇಕೆಂಬ ಚಿಂತನೆ ಇದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಹೇಳಿದರು. ಕಾರ್ಯಾಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಸಂಸದರ 10 ಲಕ್ಷ ರೂ. ಹಾಗೂ 75ರ ಸಂಭ್ರಮಾಚರಣೆ ಸಮಿತಿಯ ಸಹಕಾರದಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಮುಂದೆ ಶಾಲಾ ಬಸ್ಸು, ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಬೇಕೆಂದು ಹೇಳಿದರು.
ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಸ್ಮಾಯಿಲ್ ಎನ್.ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಶ್ರೀಧರ ಕೆ.ಎಸ್.ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ದಿನಕರ ಕೆ.ಹೆಚ್.ವಂದಿಸಿದರು. ಶಿಕ್ಷಕ ವಿಮಲ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ವಿಶ್ವನಾಥ ಶೆಟ್ಟಿ ಹಾಗೂ ಎಸ್‌ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.










