







ಪುತ್ತೂರು: ವಿಟ್ಲದ ಪಿಎಂ ಶ್ರೀ ಕೆಪಿಎಸ್ ಹೈಯರ್ ಪ್ರೈಮರಿ ಸ್ಕೂಲ್ ನಲ್ಲಿ ನಡೆದ ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದ 14 ಮತ್ತು 17 ವರ್ಷ ವಯೋಮಿತಿಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ.


ಸ್ಪರ್ಧೆಯಲ್ಲಿ ಭಾಗವಹಿಸಿದ ಶಾಲೆಯ ಎಲ್ಲಾ 9 ವಿದ್ಯಾರ್ಥಿಗಳು ತಮ್ಮ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು, ಯಾದಗಿರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.



ಸಾಧನೆಗೈದ ವಿದ್ಯಾರ್ಥಿಗಳು:
ಫಾತಿಮಾ ಅಶ್ಬಾ (6ನೇ), ಮೊಹಮ್ಮದ್ ಶಮೀಮ್ (6ನೇ), ಮೊಹಮ್ಮದ್ ಶಿಯಾಮ್ (7ನೇ), ಝೈನಬತ್ ರಶೀದಾ (6ನೇ), ಇಬ್ರಾಹಿಂ ಸುಲ್ತಾನ್ ಶಾಹಿಕ್ (6ನೇ), ಮೊಹಮ್ಮದ್ ರಶೀದ್ (7ನೇ), ಮೊಹಮ್ಮದ್ ಸುಲೈಮಾನ್ ಸಹಲ್ (7ನೇ), ಮೊಹಮ್ಮದ್ ಮಾಜಿನ್ (8ನೇ), ಮೊಹಮ್ಮದ್ ಝೈದ್ (10ನೇ).ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಮತ್ತು ಪೋಷಕರು ಅಭಿನಂದಿಸಿದ್ದಾರೆ. ತರಬೇತಿ ನೀಡಿದ ಟೇಕ್ವಾಂಡೋ ತರಬೇತುದಾರ ಶಿಹಾಬ್ ಅವರಿಗೂ ಅಭಿನಂದನೆ ಸಲ್ಲಿಸಲಾಗಿದೆ.










