






ಪುತ್ತೂರು : ವಿಟ್ಲ ಪಿಎಂಶ್ರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ Taekwondo ಪಂದ್ಯಾಟದಲ್ಲಿ ರಿಯೋನ್ ಲಸ್ರಾದೋ 41ನೇ ಕೆಟಗರಿಯಲ್ಲಿ ಪ್ರಥಮ ಸ್ಥಾನ ಪಡೆದು ಯಾದಗಿರಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಮಾಧವ ಅಳಿಕೆ ಇವರ ಮಾರ್ಗದರ್ಶನದಲ್ಲಿ ರೋಹಿತ್ ಎಸ್ ಎನ್ ತರಬೇತಿ ನೀಡಿರುತ್ತಾರೆ.
ಪುತ್ತೂರು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿಯಾಗಿರುವ ಇವರು ರೋಶನ್ ಲಸ್ರಾದೋ ಮತ್ತು ಸುಶಾಂತಿ ಸುಪ್ರೀಯ ದಂಪತಿಯ ಪುತ್ರರಾಗಿರುತ್ತಾರೆ. ಇವನರಿಗೆ ಶಾಲಾ ಪ್ರಾಂಶುಪಾಲೆ ಭಗಿನಿ ಅನಿತಾರವರು ಮಾರ್ಗದರ್ಶನ ನೀಡಿರುತ್ತಾರೆ.












