







ಪುತ್ತೂರು : 34 ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ನಿವಾಸಿ ಸೀತರಾಮ ಆಚಾರ್ಯ (76ವ) ಸೆ.09 ರಂದು ಹೃದಯಾಘಾತದಿಂದ ನಿಧನ ಹೊಂದಿದರು.


ಪುತ್ತೂರಿನ ಎಸ್ ಕೆ ಜಿ ಗೋಲ್ಡ್ ಸ್ಮಿತ್ ಕಾರ್ಪೊರೇಷನ್ ನಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.ಉಪ್ಪಿನಂಗಡಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅದ್ಯಕ್ಷರಾಗಿ ,ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಕರಸೇವಕರಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ ಸುಜಾತಾ, ಪುತ್ರ ಸುಜಿತ್, ಪುತ್ರಿ ನಿಶಾ, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.













