ಕೂರ್ನಡ್ಕ ವಾಫಿಯಾ ಕಾಲೇಜಿನಲ್ಲಿ ಪೋಷಕರ ಸಭೆ, ಮೌಲಿದ್ ಮಜ್ಲಿಸ್

0

ಪುತ್ತೂರು: ಕೂರ್ನಡ್ಕ ವಾಫಿಯಾ ಕಾಲೇಜಿನ ಪೋಷಕರ ಸಭೆ ಹಾಗೂ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಸೆ.೮ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಉಪಪ್ರಾಂಶುಪಾಲರೂ, ಕೂರ್ನಡ್ಕ ಮುದರ್ರಿಸ್ ಆದ ಅಬ್ದುಲ್ ಬಸಿತ್ ಹುದವಿ ಅವರು ದುವಾ ನೆರವೇರಿಸುವ ಮೂಲಕ ಉದ್ಘಾಟಿಸಿದರು. ಜಮಾಅತ್ ಅಧ್ಯಕ್ಷ ರಿಯಾಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಮ್ಯಾನೇಜರ್ ಇಸ್ಮಾಯಿಲ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಸಮಿತಿಯ ಅಧ್ಯಕ್ಷ ಕೆ.ಎಂ. ಅಬ್ದುಲ್ ಖಾದರ್ ಅವರು ಕಾಲೇಜಿನಲ್ಲಿ ಕಲ್ಪಿಸಲಾಗಿರುವ ವಿವಿಧ ವ್ಯವಸ್ಥೆಗಳು ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಲಾಗಿರುವ ಸೌಲಭ್ಯಗಳ ಕುರಿತು ವಿವರಿಸಿದರು.

ವೇದಿಕೆಯಲ್ಲಿ ಕಾಲೇಜಿನ ಉಪಾಧ್ಯಕ್ಷ ಹನೀಫ್ ಮಧುರಾ, ಸಮಿತಿ ಸದಸ್ಯ ಆದಂ ಮುಕ್ರಂಪಾಡಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಾಲೇಜಿನ ಅಧ್ಯಾಪಕ ವೃಂದದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಪೋಷಕರು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ವ್ಯಕ್ತಪಡಿಸಿದರು. ಪೋಷಕರ ಸಭೆಯ ಮೊದಲು ಕಾಲೇಜಿನಲ್ಲಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ನಡೆಯಿತು. ಸಲಾಂ ಫೈಝಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here