ಜೇಸಿಐ ಆಲಂಕಾರಿನಲ್ಲಿ ಜೇಸಿಐ ಸಪ್ತಾಹ ಉದ್ಘಾಟನೆ – ಕುಂತೂರುಪದವು ಶಾಲೆಗೆ ಕಲರ್ ಪ್ರಿಂಟರ್ ಕೊಡುಗೆ

0

ನೆಲ್ಯಾಡಿ : ಜೇಸಿಐ ಆಲಂಕಾರು ಘಟಕದಲ್ಲಿ 2026ನೇ ಸಾಲಿನ ಜೇಸಿಐ ಸಪ್ತಾಹ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಕುಂತೂರುಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಜೇಸಿ ಮಹೇಶ್ ಪಾಟಾಳಿ ವಹಿಸಿದ್ದರು.ಜೇಸಿಐ ಭಾರತದ ವಲಯ 15ರ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ ವಿಭಾಗದ ಸಂಯೋಜಕ ಜೇಸಿ ಲೋಕೇಶ್ ಆಕ್ರಿಕಟ್ಟೆ ಸಪ್ತಾಹ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮುಖ್ಯ ಅತಿಥಿಗಳಾಗಿ ಕುಂತೂರುಪದವು ಶಾಲೆಯ ಹಿರಿಯ ಶಿಕ್ಷಕ ಕೇಶವ ಕೆ ಹಾಗೂ ಜೇಸಿಐ ಆಲಂಕಾರು ಘಟಕದ ಪೂರ್ವಾಧ್ಯಕ್ಷ ಜೇಸಿ ಪ್ರದೀಪ್ ರೈ ಮನವಳಿಕೆ ಭಾಗವಹಿಸಿದ್ದರು.


ಶಾಲೆಗೆ ಕಲರ್ ಪ್ರಿಂಟರ್ ಹಸ್ತಾಂತರ
ಕಾರ್ಯಕ್ರಮದಲ್ಲಿ ಜೇಸಿಐ ಆಲಂಕಾರು ಘಟಕದಿಂದ ಕೊಡಲ್ಪಟ್ಟ ಶಾಶ್ವತ ಯೋಜನೆ ಕಲರ್ ಪ್ರಿಂಟರನ್ನು ಶಾಲೆಗೆ ಹಸ್ತಾಂತರ ಮಾಡಲಾಯಿತು.ಈ ಸಂದರ್ಭದಲ್ಲಿ ಜೇಸಿಐ ಆಲಂಕಾರು ಘಟಕದ ನಿಕಟಪೂರ್ವಾಧ್ಯಕ್ಷ ಜೇಸಿ ಗುರುರಾಜ್ ರೈ,ಪೂರ್ವಾಧ್ಯಕ್ಷ ಜೇಸಿ ಗಣೇಶ್ ಕಟ್ಟಪುಣಿ ,ಕುಂತೂರುಪದವು ಶಾಲೆಯ ಶಿಕ್ಷಕಿಯರಾದ ಗಾಯತ್ರಿ,ಸುಮಲತಾ,ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ರಮ್ಯ ಕಂಡತ್ತಡ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಅಧ್ಯಕ್ಷ ಮಹೇಶ್ ಪಾಟಾಳಿ ಸ್ವಾಗತಿಸಿ, ಕಾರ್ಯಕ್ರಮ ನಿರ್ದೇಶಕ ಜೇಸಿ ಹರಿಶ್ಚಂದ್ರ ಕೆ ವಂದಿಸಿದರು.

LEAVE A REPLY

Please enter your comment!
Please enter your name here