ಕಾಂಚನದಲ್ಲಿ 29ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಕಾಂಚನ: ವಿಕ್ರಂ ಯುವಕ ಮಂಡಲದ ಆಶ್ರಯದಲ್ಲಿ 29ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾಂಚನ ಪ್ರೌಢ ಶಾಲೆಯ ಮೈದಾನದಲ್ಲಿ ನಡೆಯಿತು.

ಕಾಂಚನ ನಡ್ಪ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಭಜನಾ ಮಂಡಳಿ ವತಿಯಿಂದ ಅಧ್ಯಕ್ಷರಾದ ಬಾಲಕೃಷ್ಣ ಹೊಸಮನೆ, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶ್ರೀಧರ ಗೌಡ ನಡ್ಪ,ಕೇಶವ ಅಗರ್ತಿಮಾರು, ಭದ್ರಪ್ಪ ಅಗರ್ತಿಮಾರು,, ಸುರೇಶ್ ಬಿದಿರಾಡಿ, ಪ್ರಸಾದ್ , ಉಮೇಶ್ ನೆಕ್ಕರೆ, ಗಂಗಾಧರ್, ರಮೇಶ್, ದುಗ್ಗಪ್ಪ ಅಗರ್ತಿಮಾರು, ರಾಜೇಶ್ ನಡ್ಪ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಕಾಂಚನ ವೆಂಕಟ ಸುಬ್ರಮಣ್ಯಂ ಸ್ಮಾರಕ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಪ್ರಸಾದ್ ಅಂಬಟೆಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಪರ್ಧೆಗಳಿಗೆ ರಾಜು ಪೂಜಾರಿ ನಾಯಿಲ ಮಡಿಕೆ ಒಡೆಯುವ ಮೂಲಕ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದ ಅತಿಥಿಗಳಾಗಿ ಕಾಂಚನ ಪ್ರೌಢಶಾಲೆ ಮುಖ್ಯಗುರು ರಾಧಾಕೃಷ್ಣ .ಎಸ್ ಮತ್ತು ಪ್ರಾಥಮಿಕ ಶಾಲಾ ಮುಖ್ಯಗುರು ಲಕ್ಷ್ಮಣ ಗೌಡ,ಭಾಗವಹಿಸಿದ್ದರು. ಅಧ್ಯಕ್ಷತೆ ವಿಕ್ರಂ ಯುವಕ ಮಂಡಲ ಅಧ್ಯಕ್ಷ ರಾಮಚಂದ್ರ ಕಾಂಚನ ವಹಿಸಿದ್ದರು. ವೇದಿಕೆಯಲ್ಲಿ ಅನಿಲ್ ಪಿಂಟೊ ಪುಯಿಲ , ಮೋನಪ್ಪ ಗೌಡ ಪುಯಿಲ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ವಿಕ್ರಂ ಯುವಕ ಮಂಡಲ ಮತ್ತು ದಿವಂಗತ ಎ.ಬಿ.ಪ್ರಕಾಶ್ ಧರ್ಮ ಪತ್ನಿ ಜಲಜಾಕ್ಷಿ ಅವರ ಜಂಟಿ ಸಹಭಾಗಿತ್ವದಲ್ಲಿ ಸ್ಥಳೀಯ ಕಾಂಚನ ಶಿಕ್ಷಣ ಸಂಸ್ಥೆಗಳ 6 ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹನ್ನೆರಡು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ಹಸ್ತಾಂತರ ನಡೆಯಿತು. ಕಾರ್ಯದರ್ಶಿ ಗಿರೀಶ್ ಮುದ್ಯ ವಂದಿಸಿದರು. ಉಪನ್ಯಾಸಕ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.

ಪುಟಾಣಿ ಮಕ್ಕಳಿಗೆ ಶ್ರೀ ಕೃಷ್ಣ ನ ವೇಶ ಸ್ಪರ್ಧೆ ಹಾಗೂ ಶಾಲಾ ಮಕ್ಕಳಿಗೆ,ಪುರುಷರಿಗೆ , ಮಹಿಳೆಯರಿಗೆ ಶ್ರೀ ಕೃಷ್ಣ ನ ಹಾಡು,ಅದೃಷ್ಟದ ಆಟ, ಹಗ್ಗಜಗ್ಗಾಟ, ವಾಲಿಬಾಲ್, ತ್ರೋಬಾಲ್, ಸಂಗೀತ ಕುರ್ಚಿ, ಬಕೆಟ್ ಗೆ ಬಾಲ್ ಹಾಕುವ ,ಬಾಟಲಿಗೆ ನೀರು ತುಂಬಿಸುವ ಸ್ಪರ್ಧೆಗಳು ನಡೆಯಿತು.

ದೈಹಿಕ ಶಿಕ್ಷಕರಾದ ಸುಭಾಷ್ ಚಂದ್ರ, ರಾಧಾಕೃಷ್ಣ ಮತ್ತು ಹೇಮಂತ್ ನೆಕ್ಕರೆ, ಸಚಿನ್ ಮುದ್ಯ , ಗಿರೀಶ್ ಮುದ್ಯ, ಜಯರಾಮ ಪದಕ, ತ್ಯಾಗ ರಾಜ್ ಕಾಂಚನ, ನವೀನ್ ಪುಯಿಲ, ರಾಮಣ್ಣ ಪುಯಿಲ, ದಯಾನಂದ, ರಾಜೇಶ್, ಧನಂಜಯ, ರಾಮಚಂದ್ರ, ಆಟೋಟ ಸ್ಪರ್ಧೆಗಳ ನಿರ್ವಹಣೆಗೆ ಸಹಕರಿಸಿದರು. ಹೊನ್ನಪ್ಪ ಪುಯಿಲ,ಎಲ್ಯಣ್ಣ ಶಿವಪುರ, ಮನೋಜ್, ಬಾಲಕೃಷ್ಣ, ಜಗದೀಶ್ ಮಣಿಕ್ಕೆ, ತಾರಾನಾಥ್,ಗಿರಿಯಪ್ಪ ಪದಕ, ಪುರಂದರ ಮಧ್ಯಾಹ್ನದ ಭೋಜನದ ವ್ಯವಸ್ಥೆಗೆ ಸಹಕರಿಸಿದರು.

ಉಪ್ಪಿನಂಗಡಿ ಆರಕ್ಷಕ ಠಾಣೆಯ ಸಿಬ್ಬಂದಿಗಳು, ಭಧ್ರಪ್ಪ ಗೌಡ, ಸೇಸಪ್ಪ ಗೌಡ ಓಪಾತಿಪಾಲು, ಶಿವರಾಂ ಕಾರಂತ, ಹರೀಶ್ಚಂದ್ರ ಮುದ್ಯ, ಚಂದ್ರಶೇಖರ , ಮುಕುಂದ ಬಜತ್ತೂರು, ಗೋಪಾಲ ದಡ್ಡು, ನಿವೃತ್ತ ಪೊಲೀಸ್ ಅಧಿಕಾರಿ ಪದ್ಮಯ ಗೌಡ ಡೆಂಬಲೆ, ಯಾದವ ಗೌಡ ನೆಕ್ಕರೆ, ನಾರಾಯಣ ಪೂಜಾರಿ ನೀರಕಟ್ಟೆ, ಹರೀಶ್ ಉರಾಬೆ, ದಿನೇಶ್ ನಡ್ಪ, ರುಕ್ಮಯ ಪುಯಿಲ, ಮಧುಶ್ರೀ ನೆಕ್ಕರೆ,ನಯನಾ ಊರಾಬೆ, ಸ್ಮಿತಾ ಫುಯಿಲ, ಸ್ಥಳೀಯ ಶಾಲಾ ಮಕ್ಕಳು,ಶಿಕ್ಷಕ ವರ್ಗ, ಪೋಷಕರು ಸೇರಿದಂತೆ 500 ಮಿಕ್ಕಿ ಜನರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here