







ಪುತ್ತೂರು : ಜೇಸಿಐ ಆಲಂಕಾರು ಘಟಕದಿಂದ 2026ನೇ ಸಾಲಿನ ಜೇಸಿಐ ಸಪ್ತಾಹದ ಮೊದಲನೇ ದಿನದ ಕಾರ್ಯಕ್ರಮದಲ್ಲಿ ‘ ಸಸ್ಟೈನೇಬಲ್ ಸಿಪ್ಪಿಂಗ್’ ಎಂಬ ಆಶಯದೊಂದಿಗೆ ಇಡಾಳ ಶಾಲೆಯ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸ್ಟೀಲ್ ಬಾಟಲ್ ಗಳ ವಿತರಣೆಯನ್ನು ಮಾಡಲಾಯಿತು. ಏಕ ಬಳಕೆಯ ಪ್ಲಾಸ್ಟಿಕ್ ಬಾಟಲ್ ಗಳ ಮರು ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ಉಂಟುಮಾಡುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಜೇಸಿಐ ಭಾರತ ದೇಶದಾದ್ಯಂತ ಈ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿದೆ.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರಶೇಖರ ಐ ಮಾತನಾಡುತ್ತಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆಲಂಕಾರು ಜೇಸಿಐ ಗೆ ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜೇಸಿಐ ಆಲಂಕಾರು ಘಟಕದ ಪೂರ್ವಾಧ್ಯಕ್ಷ ಜೇಸಿ ಗಣೇಶ್ ಕಟ್ಟಪುಣಿ ಸ್ಟೀಲ್ ಬಾಟಲ್ ವಿತರಣೆಯ ಹಿಂದಿರುವ ಸದುದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.



ಈ ಸಂದರ್ಭದಲ್ಲಿ ವಲಯ ಸಂಯೋಜಕ ಜೇಸಿ ಲೋಕೇಶ್ ಆಕ್ರಿಕಟ್ಟೆ ,ಜೇಸಿಐ ಆಲಂಕಾರು ಘಟಕದ ನಿಕಟಪೂರ್ವಾಧ್ಯಕ್ಷ ಜೇಸಿ ಗುರುರಾಜ್ ರೈ,ಎಸ್.ಡಿ.ಎಂ.ಸಿ ಸದಸ್ಯ ರಾಧಾಕೃಷ್ಣ,ಶಾಲೆಯ ಗೌರವ ಶಿಕ್ಷಕಿ ಪುಲಕಿತಾ,ಅಕ್ಷರ ದಾಸೋಹ ಸಿಬ್ಬಂದಿ ವಿನೋದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೇಸಿ ಮಹೇಶ್ ಪಾಟಾಳಿ ಸ್ವಾಗತಿಸಿ,ಪೂರ್ವಾಧ್ಯಕ್ಷ ಜೇಸಿ ಪ್ರದೀಪ್ ರೈ ಮನವಳಿಕೆ ವಂದಿಸಿದರು.










