







ಪೂಜ್ಯರ ದೀಮಂತ ಚಿಂತನೆ ಮತ್ತು ದೂರದೃಷ್ಟಿಯಿಂದ ಯೋಜನೆ ಪ್ರಾರಂಭಗೊಂಡಿದೆ – ದ. ಕ. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ


ಬಡಗನ್ನೂರು: ಪೂಜ್ಯರ ದೀಮಂತ ಚಿಂತನೆ ದೂರದೃಷ್ಟಿಯಿಂದ ಯೋಜನೆ ಪ್ರಾರಂಭವಾಗಿದೆ ಎಂದು ದ.ಕ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಹೇಳಿದರು.



ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಕರ್ನೂರು ಇದರ ವತಿಯಿಂದ ನಡೆಯುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪದಗ್ರಹಣ ಸಮಾರಂಭವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮವು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸೆ. 6 ರಂದು ನಡೆಯಿತು. ಮಹಾನ್ ವ್ಯಕ್ತಿ ಮತ್ತು ಶಕ್ತಿಯಾದ ಯೋಜನೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಸ್ವಾಭಿಮಾನದಿಂದ ಸ್ವಾವಲಂಬಿಯಾಗಿ ಬದುಕಬೇಕು, ಬಡವರ ಕಣ್ಣೀರು ಒರೆಸುವ ಕೆಲಸ ಆಗಬೇಕು. ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ಹೀಗೆ ಹತ್ತು ಹಲವು ಉದ್ದೇಶ ಇಟ್ಟು ಆರಂಭವಾದ ಯೋಜನೆಯೇ ಧರ್ಮಸ್ಥಳ ಗ್ರಾಮೀಣ ಯೋಜನೆ. ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ವಿಸ್ತರಣೆಯಾಗಿದೆ. 22 ಸಾವಿರ ಹಳ್ಳಿಗಳಲ್ಲಿ ಯೋಜನೆ ವಿಸ್ತರಣೆಯಾಗಿ 6 ಲಕ್ಷ 15 ಸಾವಿರ ಸಂಘಗಳಲ್ಲಿ 56 ಲಕ್ಷ ಸದಸ್ಯರನ್ನು ಹೊಂದಿದೆ. ಈಗಿರುವಾಗ 44 ವರ್ಷದ ಹಿಂದೆ ಎಷ್ಟು ಬಡತನ ಇತ್ತು ಎಂಬುದನ್ನು ಆತ್ಮಾವಲೋಕನ ಮಾಡಬೇಕಾಗಿದೆ.
ಇವತ್ತು ಕರ್ನೂರು ಒಂದು ಚಿಕ್ಕ ಒಕ್ಕೂಟ 20 ರೂಪಾಯಿಯಿಂದ ಉಳಿತಾಯ ಮಾಡುವ ಮೂಲಕ 2 ಕೋಟಿ ಉಳಿತಾಯ ಸಂಗ್ರಹಣೆ ಮಾಡಿದೆ. ಪ್ರಾರಂಭದಲ್ಲಿ ಉಳಿತಾಯ ಮಾಡುವ ಪ್ರವೃತ್ತಿ ಬೆಳೆಸಿದೆವು, ಎರಡು ರೂಪಾಯಿ, ಐದು ರೂಪಾಯಿ, 10 ರೂಪಾಯಿಯಾಗಿ ಉಳಿತಾಯ ಮಾಡಿದ ಉಳಿತಾಯ ಇಂದು 4,500 ಕೋಟಿ ಆಗಿದೆ. ಎಂದು ಅವರು ಶ್ರಮ ವಿನಿಮಯದ ಕಲ್ಪನೆಯನ್ನು ಕೊಟ್ಟು ಪ್ರಾರಂಭ ಮಾಡಿದ್ದೇವು, ಇದರಿಂದ ಕುಟುಂಬದ ಅಭಿವೃದ್ಧಿಯಾಗಿ ಹಸಿರು ಕ್ರಾಂತಿಯಾಗಿದೆ.
ಪೂಜ್ಯರ ದೀಮಂತ ಚಿಂತನೆ ದೂರದೃಷ್ಟಿಯಿಂದ ಯೋಜನೆ ಪ್ರಾರಂಭವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿ ನಡೆದು ಪೂಜ್ಯ ಕಾವೊಂದರು ಯೋಜನೆಯ ಹರಿಕಾರರಾಗಿದ್ದಾರೆ. ಇಡೀ ಕರ್ನಾಟಕದಲ್ಲಿ ಅಭಿವೃದ್ಧಿ ಮಾಡುವ ಸಂಸ್ಥೆ ಇದ್ದರೆ ಅದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾತ್ರ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕೊಡುವ ಸಾಲಕ್ಕೆ ಬಡ್ಡಿ ಜಾಸ್ತಿ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲ ಕೊಡುವ ಸಂಸ್ಥೆ ಅಲ್ಲ, ಅದು ಸಾಲ ಕೊಡಿಸುವ ಸಂಸ್ಥೆ, ಅಭಿವೃದ್ಧಿ ಪಡಿಸುವ ಸಂಸ್ಥೆ, ದಾರಿ ತೋರಿಸುವ ಸಂಸ್ಥೆ.
ಬಡವರ ಅಭಿವೃದ್ಧಿ ಆಗುವುದಿದ್ದರೆ ನಾನು ಬ್ಯಾಂಕ್ ಶೂರಿಟಿ ನೀಡುತ್ತೇನೆ ಎಂದು ಪೂಜ್ಯರು ಹೇಳಿ ಪೂಜ್ಯ ಕಾವೊಂದರ ಮತ್ತು ಧರ್ಮಸ್ಥಳ ನಂಬಿಕೆ ಆಧಾರದಲ್ಲಿ 6 ರಾಷ್ಟ್ರೀಕೃತ ಬ್ಯಾಂಕ್ನಿಂದ 156 ಲಕ್ಷ ಕೋಟಿ ರೂಪಾಯಿ ನೇರವಾಗಿ ಸಂಘದ ಸದಸ್ಯರಿಗೆ ಖಾತೆಗೆ ಜಮೆಯಾಗುತ್ತಿದೆ. ಅತೀ ಕಡಿಮೆ ಬಡ್ಡಿಯಲ್ಲಿ ತ್ವರಿತ ಗತಿಯಲ್ಲಿ ಸಾಲ ಕೊಡುವ ಸಂಸ್ಥೆ ಇದ್ದರೆ ಅದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಆದ್ದರಿಂದ ಆಡು ಮುಟ್ಟದ ಸೊಪ್ಪಿಲ್ಲ, ಗ್ರಾಮಾಭಿವೃದ್ಧಿ ಮಾಡದ ಕೆಲಸವಿಲ್ಲ.
ಕರ್ನೂರು ಒಕ್ಕೂಟದ ಸದಸ್ಯರು ಒಂದು ಉದ್ದೇಶ ಇಟ್ಟುಕೊಂಡು ಸಾಲ ಪಡೆದು ಅದೇ ಉದ್ದೇಶಕ್ಕೆ ವಿನಿಯೋಗ ಮಾಡುವುದರಿಂದ ಕಂತು ಬಾಕಿ ಇಲ್ಲದೆ ವಾರದ ಕಂತು ಮರುಪಾವತಿ ಮಾಡುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಯೋಜನೆಯ ಹೆಸರನ್ನು ಉತ್ತುಂಗದ ಶಿಖರಕ್ಕೆ ಏರಿಸುವ ಕೆಲಸ ಆಗಲಿ ಎಂದು ಶುಭ ಹಾರೈಸಿದರು.

ಹೆಗಡೆಯವರ ದೂರದೃಷ್ಟಿತ್ವದ ಚಿಂತನೆಗಳು ಒಂದು ಮನೆ, ಮನ ಮತ್ತು ಸಮಾಜವನ್ನು ಪರಿವರ್ತನೆ ಮಾಡುತ್ತದೆ – ಮಹಮ್ಮದ್ ಬಡಗನ್ನೂರು
ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ, ಸಮಾಜದ ಪ್ರಗತಿ ದೇಶದ ಪ್ರಗತಿ, ಕುಟುಂಬಕ್ಕೆ ಆರ್ಥಿಕ ಶಕ್ತಿ, ಕೌಟುಂಬಿಕ ಪ್ರಗತಿ ಪೂಜ್ಯರ ದೂರದೃಷ್ಟಿ ಯೋಜನೆ. ಮಧ್ಯವರ್ಜನ ಶಿಬಿರದ ಮೂಲಕ ಕುಟುಂಬದ ಒಬ್ಬ ಸದಸ್ಯ ಪರಿವರ್ತನೆಯಾದರೆ ಇಡೀ ಸಮಾಜ ಪರಿವರ್ತನೆಯಾಗುತ್ತದೆ, ದೇಶ ಪರಿವರ್ತನೆಯಾಗುತ್ತದೆ. ಮದ್ಯದಿಂದ ಎಷ್ಟೋ ವರ್ಷ ಬಳಲುತ್ತಿರುವ ಕುಟುಂಬ ನವಜೀವನ ಪಡೆದು ಮತ್ತೆ ಮನೆಗೆ ಸೇರಿದಾಗ ಬಾಳು ಬಂಗಾರವಾಗುವ ಸಂದರ್ಭ, ಎಲ್ಲೋ ಒಂದು ಕಡೆ ನೋವಿನಲ್ಲಿರುವ ತಾಯಿ ಮಾಡುವ ಪ್ರಾರ್ಥನೆ ವೀರೇಂದ್ರ ಹೆಗಡೆ ರವರ ಪಾದಕ್ಕೆ ತಲುಪಿದೆ ಎಂಬುದನ್ನು ಗಮನಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಮಾಡಲು ಸಾಧ್ಯವಾಗದ ಮಾದಕ ವ್ಯಸನಗಳಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟ ಮಾಡುವ ಕೆಲಸ, ಮನುಷ್ಯ ಆರೋಗ್ಯವಂತರಾಗಿ ಜೀವಿಸುವ ವಾತಾವರಣ ಕಲ್ಪಿಸುವ ಕಾರ್ಯ ಮಾಡುವುದು ಅತ್ಯಂತ ಶ್ರೇಷ್ಠವಾದದ್ದು. ಪೂಜ್ಯ ವೀರೇಂದ್ರ ಹೆಗಡೆಯವರ ದೂರದೃಷ್ಟಿತ್ವದ ಚಿಂತನೆಯಲ್ಲಿ ಒಂದು ಮನೆ, ಮನ ಮತ್ತು ಸಮಾಜವನ್ನು ಪರಿವರ್ತನೆ ಮಾಡುತ್ತದೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬದುಕಿನ ದಾರಿ ತೋರಿಸಿ ಕೊಡುತ್ತದೆ. ಧರ್ಮ, ಜಾತಿ, ಪಂಥಗಳನ್ನು ದೂರ ಮಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಇಡೀ ರಾಜ್ಯದಲ್ಲಿ ಉತ್ತುಂಗದಲ್ಲಿ ಬರಲು ಕಾರಣ ತಾಯಂದಿರ ಪ್ರೀತಿ, ವಿಶ್ವಾಸದ ದೃಢತೆಯಿಂದ ಮುನ್ನಡೆಯುವ ಹೆಜ್ಜೆ ಎಂದು ಹೇಳಿ ನೂತನ ಹಾಗೂ ನಿಕಟಪೂರ್ವ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಗ್ರಾಮಾಭಿವೃದ್ಧಿ ಯೋಜನೆ ಬಡವರ ಬಾಳು ಬಂಗಾರ ಮಾಡಿದೆ – ಶ್ರೀರಾಮ್ ಪಕ್ಕಳ
ನೆಟ್ಟಣಿಗೆ ಮೂಡ್ನೂರು ಗ್ರಾ. ಪಂ. ಮಾಜಿ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ ಕರ್ನೂರುಗತ್ತು ಮಾತನಾಡಿ, ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಎಲ್ಲ ಕಾರ್ಯಕ್ರಮಗಳನ್ನು ವೀರೇಂದ್ರ ಹೆಗಡೆ ರವರ ಮೂಲಕ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಜನರಿಗೆ ಉಳಿತಾಯದ ಪ್ರವೃತ್ತಿ ಬೆಳೆಸಿ ಅಭಿವೃದ್ಧಿ ಪರ ಕಾರ್ಯಕ್ರಮ ಅನುಷ್ಠಾನಗೊಳಿಸಿ ಮಾಹಿತಿ, ಮಾರ್ಗದರ್ಶನ ನೀಡುವ ಮೂಲಕ ಬಡ ಕುಟುಂಬದ ಆಸರೆಯಾಗಿ ಬಾಳು ಬಂಗಾರಗೊಳಿಸಿದೆ ಎಂದು ಹೇಳಿದರು.
ಅರಿಯಡ್ಕ ವಲಯ ಜನಜಾಗೃತಿ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಕುಂತು ಬಾಕಿ ಇಲ್ಲದೆ ವಾರದ ಮರುಪಾವತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಕೊಂಡು ಬರುತ್ತಿರುವ ಕರ್ನೂರು ಒಕ್ಕೂಟದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಸಂದರ್ಭೋಚಿತವಾಗಿ ಮಾತನಾಡಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಗ್ರಾಮಾಭಿವೃದ್ಧಿ ಯೋಜನೆ ವೀರೇಂದ್ರ ಹೆಗಡೆ ರವರ ಕನಸಿನ ಕೂಸು – ರವಿಕಿರಣ್ ಶೆಟ್ಟಿ ಬೆದ್ರಾಡಿ
ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರವಿಕಿರಣ್ ಶೆಟ್ಟಿ ಬೆದ್ರಾಡಿ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ವೀರೇಂದ್ರ ಹೆಗಡೆ ರವರ ಕನಸಿನ ಕೂಸು. ಮಂಜುನಾಥ ದೇವರ ಹಾಗೂ ಕಾವೊಂದರ ಕೃಪೆಯಿಂದ ಯೋಜನೆ ಉತ್ತುಂಗದ ಶಿಖರಕ್ಕೆ ಏರಲು ಸಾಧ್ಯವಾಗಿದೆ. ಬಡ ಕುಟುಂಬದ ಸದಸ್ಯರು ತಮ್ಮ ಜಮೀನಿನಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಲ್ಲಿ ಶ್ರಮ ವಿನಿಮಯ ಮಾಡಿಕೊಂಡು ಸ್ವಾವಲಂಬನೆ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಜನಜಾಗೃತಿ ಮುಖಾಂತರ ಮಧ್ಯವರ್ಜನ ಶಿಬಿರದ ಮೂಲಕ ಮದ್ಯವ್ಯಸನದಿಂದ ಮುಕ್ತಗೊಳಿಸಿ ನವಜೀವನಕ್ಕೆ ಅವಕಾಶ ಕಲ್ಪಿಸಿಕೊಟ್ಟು ಆ ಮೂಲಕ ತಮ್ಮ ಕುಟುಂಬದ ಸದಸ್ಯರೊಂದಿಗೆ ಸುಖಕರವಾಗಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಇದಲ್ಲದೆ ಯೋಜನೆಯ ಹತ್ತು ಹಲವು ಅಭಿವೃದ್ಧಿ ಪರ ಕಾರ್ಯಕ್ರಮಗಳು ಬಡವರ ಮನೆ ಮತ್ತು ಮನ ಬೆಳಗಿಸಿದೆ ಎಂದು ಹೇಳಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಪುತ್ತೂರು ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್, ಕೇಂದ್ರ ಒಕ್ಕೂಟ ಅಧ್ಯಕ್ಷ ಉದಯ ಕುಮಾರ್ ಪೆರ್ಲಂಪಾಡಿ, ಕಾವು ವಲಯಾಧ್ಯಕ್ಷ ದಿನೇಶ್ ರೈ ಕುತ್ತಾಳ
ಈಶ್ವರಮಂಗಲ ಪಂಚಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ವಿಕ್ರಮ್ ರೈ ಸಾಂತ್ಯ, ಕರ್ನೂರು ಒಕ್ಕೂಟದ ಅಧ್ಯಕ್ಷೆ ಆಶಾಲತಾ ರೈ, ಕರ್ನೂರು ಉಪಾಧ್ಯಕ್ಷ ಸುಬ್ಬಣ್ಣ ರೈ ಕಲ್ಲಾಜೆ, ಕಾರ್ಯದರ್ಶಿ ಪ್ರಮೀಳಾ ರೈ ಕುಂಟಾರು, ಜೊತೆ ಕಾರ್ಯದರ್ಶಿ ಪುಷ್ಪಾ ಕುಂಟಾರು, ಕೋಶಾಧಿಕಾರಿ ವೀಣಾ ಬೆದ್ರಾಡಿ, ನೂತನ ಅಧ್ಯಕ್ಷ ಕೊರಗಪ್ಪ ನಾಯ್ಕ ಕಲ್ಲಾಜೆ, ಉಪಾಧ್ಯಕ್ಷ ಪ್ರಶಾಂತ್ ರೈ ಕುಂಟಾರು, ಕಾರ್ಯದರ್ಶಿ ಪ್ರೇಮ ಗುತ್ತು, ಜೊತೆ ಕಾರ್ಯದರ್ಶಿ ಸುಮತಿ ನಡುಬೈಲು, ಕೋಶಾಧಿಕಾರಿ ದಿವ್ಯ ಎಂ ಮೈರೋಳು ಉಪಸ್ಥಿತರಿದ್ದರು.
ಕಾವು ವಲಯ ಮೇಲ್ವಿಚಾರಕಿ ಪ್ರಣೀತಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಮೀಳಾ ರೈ ಕುಂಟಾರು ವರದಿ ವಾಚಿಸಿದರು. ಕರ್ನೂರು ಒಕ್ಕೂಟದ ಸೇವಾ ಪ್ರತಿನಿಧಿ ಕುಸುಮ ಮಹೇಂದ್ರ ಶೆಟ್ಟಿ ವಂದಿಸಿದರು.ಉದ್ಯಮಿಗಳು, ಪ್ರಗತಿಪರ ಕೃಷಿಕರಾದ ರಾಜೇಂದ್ರ ಪ್ರಸಾದ್ ರೈ ಮೇನಾಲ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ
ಬೆಂಗಳೂರು ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು ಮುಂದೆ ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಮತ್ತು ಹೈದರಾಬಾದಿನಲ್ಲಿ ನಡೆದ ದಕ್ಷಿಣ ಭಾರತ ವಲಯದ ಅಥ್ಲೆಟಿಕ್ಸ್ನಲ್ಲಿ 3000ಮೀ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲಾ 9ನೇ ತರಗತಿ ವಿದ್ಯಾರ್ಥಿನಿ ಶನ್ಮಿತಾ ಮೇನಾಲ ಹಾಗೂ ಕರಾಟೆ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಚಿನ್ನದ ಪದಕ, ಜಿಲ್ಲಾ ಮಟ್ಟದಲ್ಲಿ ಚಿನ್ನದ ಪದಕ ಹಾಗೂ ರಾಜ್ಯ ಮಟ್ಟದಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಈಶ್ವರಮಂಗಲ ಗಜಾನನ ಆಂಗ್ಲ ಮಾಧ್ಯಮ ಶಾಲಾ 10ನೇ ತರಗತಿ ವಿದ್ಯಾರ್ಥಿ ಧನ್ವಿತ್ ಶೆಟ್ಟಿ ರವರನ್ನು ಹಾಗೂ ಅರಿಯಡ್ಕ ವಲಯ ವಿಪತ್ತು ನಿರ್ವಹಣಾ ತಂಡದ ಸದಸ್ಯರನ್ನು ಶಾಲು ಹಾಕಿ ಫಲಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.










