ಡಾ.ನಝೀರ್ ಅಹಮದ್ ಕ್ಲಿನಿಕ್ ನಲ್ಲಿ ಉಚಿತ/ರಿಯಾಯಿತಿ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು: ಕಲ್ಲಾರೆ ಕೃಷ್ಣ ಆರ್ಕೇಡ್ ನಲ್ಲಿ ವೈದ್ಯಕೀಯ ತಜ್ಞ ಡಾ|ನಝೀರ್ ಅಹಮದ್, ರೋಟರಿ ಕ್ಲಬ್ ಪುತ್ತೂರು ಮತ್ತು ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಮಾಸಿಕ ತಪಾಸಣಾ ಶಿಬಿರದಲ್ಲಿ ಉಚಿತ ಥೈರಾಯಿಡ್ (TSH), ಶುಗರ್, HBA1C ಮತ್ತು BMD ಟೆಸ್ಟ್  ಹಾಗೂ ರಿಯಾಯಿತಿ ದರದಲ್ಲಿ ಕೊಲೆಸ್ಟರಾಲ್ ಟೆಸ್ಟ್ ಜು.9 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

ವೈದ್ಯಕೀಯ ಹಾಗೂ ಮಧುಮೇಹ ತಜ್ಞ ಡಾ.ನಝೀರ್ ಅಹಮದ್ ರವರು ಆಗಮಿಸಿದ ಫಲಾನುಭವಿಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ದತ್ತಾತ್ರೇಯ ರಾವ್, ಸಮುದಾಯ ಸೇವಾ ವಿಭಾಗದ ನಿರ್ದೇಶಕ ಶ್ರೀಧರ ಕಣಜಾಲು ಉಪಸ್ಥಿತರಿದ್ದರು. ಮ್ಯಾನ್ ಕೈಂಡ್ ನ ರಕ್ಷಿತ್, ಚಂದು ಹಾಗೂ ತೌಸೀಫ್, ಲೈನಕ್ಸ್ ಲ್ಯಾಬೋರೇಟರಿಯ ಕೃಷ್ಣ, ಮೈಕ್ರೋ ಲ್ಯಾಬ್ಸ್ ನ ಅಭಿಷೇಕ್ ಮತ್ತು ಪ್ರಶಾಂತ್, ಎರಿಸ್ ಲೈಫ್ ಸೈನ್ಸ್ ನ ರಾಜೇಶ್, ಇಂಟಾಸ್ ಫಾರ್ಮ್ ನ ರಕ್ಷಿತ್, ಸನ್ ಫಾರ್ಮಾದ ಬೃಜೇಶ್, ಡಾ.ನಝೀರ್ ಅಹಮದ್ ಕ್ಲಿನಿಕ್ ಸಿಬ್ಬಂದಿ ಸಹಕರಿಸಿದರು.

 

286 ಫಲಾನುಭವಿಗಳು..

*ಮಧುಮೇಹ-65 ಮಂದಿ *ಥೈರಾಯಿಡ್-50 ಮಂದಿ *HBA1C-47 ಮಂದಿ *ಲಿಪಿಡ್ ಪ್ರೊಫೈಲ್-30 ಮಂದಿ *ಬಿಎಂಡಿ-49 ಮಂದಿ *ವಿಟಮಿನ್ ಡಿ-45 ಮಂದಿ

ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯ. ಕಾಲಕಾಲಕ್ಕೆ ತಜ್ಞ ವೈದ್ಯರಿಂದ ತಪಾಸಣೆ ಮಾಡುವ ಮೂಲಕ ಆರೋಗ್ಯವನ್ನು ರಕ್ಷಿಸಿಕೊಳ್ಳಿ.ಕಳೆದ ಹನ್ನೆರಡು ವರ್ಷಗಳಿಂದ ನಮ್ಮ ಈ ಕ್ಲಿನಿಕ್ ನಲ್ಲಿ ರೋಟರಿ ಪುತ್ತೂರು ಸಹಯೋಗದೊಂದಿಗೆ ಆರೋಗ್ಯ ಶಿಬಿರಗಳು ನಡೆಯುತ್ತಾ ಬಂದಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. -ಡಾ.ನಝೀರ್ ಅಹಮದ್, ವೈದ್ಯಕೀಯ ಹಾಗೂ ಮಧುಮೇಹ ತಜ್ಞರು

LEAVE A REPLY

Please enter your comment!
Please enter your name here