ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ವಿನಿಯೋಗ (ಹೊಸತೆನೆ) ವಿತರಣೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವ ಸಂಪ್ರದಾಯದಂತೆ ಹೊಸತೆನೆ( ಕದಿರು ) ಕಟ್ಟುವ ಕಾರ್ಯಕ್ರಮವು ಸೆ.13 ರಂದು ನಡೆಯಿತು.



ಬೆಳಿಗ್ಗೆ ದೇವಳದ ಪ್ರಧಾನ ಅರ್ಚಕ ವಿ.ಎಸ್ ಭಟ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆದ ಬಳಿಕ ಪಶ್ಚಿಮ ಭಾಗದ ಪುಷ್ಕರಣಿಯ ಬಳಿಯ ಅಶ್ವತ್ಥಕಟ್ಟೆಯವರೆಗೆ ಉತ್ಸವಮೂರ್ತಿಯೊಂದಿಗೆ ವಾದ್ಯಘೋಷದೊಂದಿಗೆ ಸಾಗಿ, ಅಲ್ಲಿ ಸಂಗ್ರಹಿಸಿಟ್ಟ ತೆನೆ ಗಳನ್ನು ತಂದು, ಪೂಜೆ ನಡೆದು ದೇಗುಲದ ಗರ್ಭಗುಡಿ, ಪರಿವಾರ ದೇವರ ಗುಡಿಗಳು, ತೀರ್ಥಬಾವಿ, ಉಗ್ರಾಣ, ತುಳಸೀಕಟ್ಟೆ ಇತ್ಯಾದಿಗಳಿಗೆ ಕದಿರನ್ನು ಕಟ್ಟಿದ ಬಳಿಕ ನೆರೆದ ಭಕ್ತರಿಗೆ ಕದಿರನ್ನು ವಿತರಿಸಲಾಯಿತು.



ಪ್ರಥಮವಾಗಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸದಸ್ಯರಿಗೆ ತೆನೆ ವಿತರಣೆ ನಡೆಯಿತು. ಬಳಿಕ ಹೊರಾಂಗಣದಲ್ಲಿ ಕಟ್ಟೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸದಸ್ಯರು ಭಕ್ತರಿಗೆ ತೆನೆ ವಿತರಣೆಗೆ ಚಾಲನೆ ನೀಡಿದರು.



ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ನಳಿನಿ ಎಸ್ ರೈ, ಕೃಷ್ಣವೇಣಿ, ವಿನಯ ಸುವರ್ಣ, ಈಶ್ವರ ಬೆಡೇಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ, ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಹಿತ ಭಕ್ತರು ಉಪಸ್ಥಿತರಿದ್ದರು. ದೇವಳದ ಹೊರಾಂಗಣದ ಕಟ್ಟೆಯಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ತೆನೆ ಪಡೆದು ಕೊಂಡರು.


LEAVE A REPLY

Please enter your comment!
Please enter your name here