ಪುತ್ತೂರು ತಾಲೂಕು ಯುವಜನ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಪುತ್ತೂರು ತಾಲೂಕು ಯುವಜನ ಒಕ್ಕೂಟದ ಸರ್ವ ಸದಸ್ಯರ ಸಭೆಯು ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ತಾಲೂಕು ಯುವಜನ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

 ಗೌರವಾಧ್ಯಕ್ಷರಾಗಿ ನರಿಮೊಗರು ಯುವಕ ಮಂಡಲದ ಸುಧಾಕರ ಕುಲಾಲ್ ನಡುವಾಳ್,ಅಧ್ಯಕ್ಷರಾಗಿ  ಶ್ರೀ ವಿಷ್ಣು ಯುವಶಕ್ತಿ ಮಜ್ಜಾರಡ್ಕದ ರಾಜೇಶ್ ಮಯೂರ ,ಪ್ರಧಾನ ಕಾರ್ಯದರ್ಶಿಯಾಗಿ ಸಹ್ಯಾದ್ರಿ ಫ್ರೆಂಡ್ಸ್  ನ ಪ್ರಜ್ವಲ್ ರೈ ತೋಟ್ಲ ಚಿಪ್ಪಾರುಗುತ್ತು,ಕೋಶಾಧಿಕಾರಿಯಾಗಿ ಸೌಜನ್ಯ ಸಾಜ ಸಂಘದ  ಹಮೀದ್ ಸಾಜ ಅವರು ಸರ್ವಾನುಮತದಿಂದ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಆರ್ಯಾಪು ಸುಬ್ರಹ್ಮಣ್ಯ ಯುವಕ ಮಂಡಲದ ಸಂದೀಪ್ ಆರ್ಯಾಪು,ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ದಿವ್ಯಾ ,ನಿರ್ದೇಶಕರಾಗಿ ಸರ್ವೆ ಷಣ್ಮುಖ ಯುವಕ ಮಂಡಲದ ಗೌತಮ್‌ರಾಜ್ ಕರುಂಬಾರು, ಪಾಂಬಾರು ಷಣ್ಮುಖ ಫ್ರೆಂಡ್ಸ್ ನ ಕಿಶೋರ್ ಕುಮಾರ್ ಎಂ.,ದರ್ಬೆತಡ್ಕ ಸರ್ವೋದಯ ಫ್ರೆಂಡ್ಸ್ ಕ್ಲಬ್‌ನ ರವೀಂದ್ರ ದರ್ಬೆತಡ್ಕ ,ಪಾಲ್ತಾಡು ಶ್ರೀ ವಿಷ್ಣು ಮಿತ್ರವೃಂದದ ಪುರಂದರ ಕೆ‌.ಪಾಲ್ತಾಡು ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು ಹಾಗೂ ಪುತ್ತೂರು ತಾಲೂಕಿನ ವಿವಿಧ ಯುವ ಸಂಘಗಳ  ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here