








ಪುತ್ತೂರು: ಹೈಕೋರ್ಟ್ ನ್ಯಾಯಮೂರ್ತಿ ಎಂ. ವಿಶ್ವಜಿತ್ ಶೆಟ್ಟಿ ಅವರ ಕಾರು ಚಾಲಕ, ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಮಾಲೆತ್ತೋಡಿಯ ಕಮಲ ಮತ್ತು ಚೋಮ ನಾಯ್ಕ ಅವರ ಪುತ್ರ ಶ್ರೀಧರ ಹಾಗೂ ಕೆಯ್ಯೂರು ಗ್ರಾಮದ ದಟ್ಟ ನಿವಾಸಿ ವಿಜಯ ಮತ್ತು ಐತ್ತಪ್ಪ ನಾಯ್ಕ ಅವರ ಪುತ್ರಿ ಪದ್ಮಲ ಕುಮಾರಿ ಅವರ ವಿವಾಹ ಸೆ.13ರಂದು ಬನ್ನೂರು ಭಾರತೀ ನಗರದ ಹವ್ಯಕ ಸಭಾಭವನದಲ್ಲಿ ನಡೆಯಿತು.




ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀಶಾನಂದ, ಮಹಮ್ಮದ್ ನವಾಝ್, ರಾಜೇಶ್ ರೈ ಕೆ, ಮುರಳೀಧರ ಪೈ ಬಿ, ತ್ಯಾಗರಾಜ ನಾರಾಯಣ ಇನವಳ್ಳಿ, ಇ.ಎಸ್.ಇಂದ್ರೇಶ್, ಟಿ.ಎಂ.ನದಾಫ್, ಸುಪ್ರೀಂಕೋರ್ಟ್‌ನ ಅಸಿಸ್ಟೆಂಟ್ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಬೆಂಗಳೂರು ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಶೆಟ್ಟಿ, ಬೆಳಗಾವಿ ನ್ಯಾಯಾಲಯದ ನ್ಯಾಯಾಧೀಶ ಮಂಜುನಾಥ ನಾಯಕ್, ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್, ಪ್ರಕೃತಿ ಕಲ್ಯಾಣಪುರ, ಹರಿಹರನ್, ರಮ್ಯ, ಶ್ವೇತಾ, ಸುಮಂಗಲಾ, ದೇವರಾಜ್, ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಶಾಮ ಭಟ್, ಹೈಕೋರ್ಟ್‌ನ ಮಾಜಿ ಅಡಿಷನಲ್ ಅಡ್ವೋಕೇಟ್ ಜನರಲ್ ಡಾ. ಅರುಣ್‌ಶ್ಯಾಮ್, ಅಖಿಲ ಭಾರತ ಸ್ಟಾಕ್ ವಿಟ್ನೆಸ್ ರೀಫಾರ್ಮ್ ಎಕ್ಸ್‌ಪರ್ಟ್ ಕಮಿಟಿಯ ರಾಜಶೇಖರ ಹಿಲಿಯಾರ್, ಹೈಕೋರ್ಟ್ ಸಿಬ್ಬಂದಿಗಳು, ಪುತ್ತೂರು ನ್ಯಾಯಾಲಯದ ಸಿಬ್ಬಂದಿಗಳು, ಹಿರಿಯ, ಕಿರಿಯ ವಕೀಲರು ಸೇರಿದಂತೆ ಹಲವರು ಭಾಗಿಯಾಗಿದ್ದರು.













