ಗೋಳಿತ್ತೊಟ್ಟು: ಬೈಕ್‌ಗಳ ಡಿಕ್ಕಿ-ಸವಾರರಿಗೆ ಗಾಯ

0

ನೆಲ್ಯಾಡಿ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೆ.10ರಂದು ಮಧ್ಯಾಹ್ನ ಗೋಳಿತ್ತೊಟ್ಟು-ಕೊಕ್ಕಡ ರಸ್ತೆಯ ಗೋಳಿತ್ತೊಟ್ಟು ಗ್ರಾಮದ ಕುದ್ಕೋಳಿ ಎಂಬಲ್ಲಿ ನಡೆದಿದೆ.


ಕೊಕ್ಕಡದಿಂದ ಗೋಳಿತ್ತೊಟ್ಟುಗೆ ಸಿರಾಜುದ್ದೀನ್ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್ (ಕೆಎ 21, ಇಎ 8326) ಹಾಗೂ ಗೋಳಿತ್ತೊಟ್ಟಿನಿಂದ ಕೊಕ್ಕಡ ಕಡೆಗೆ ಇಬ್ರಾಹಿಂ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಬೈಕ್ (ಕೆಎ 21, ಇಎ 0619) ನಡುವೆ ಕುದ್ಕೋಳಿ ಎಂಬಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ಬೈಕ್ ಸವಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಇಬ್ಬರನ್ನೂ ಚಿಕಿತ್ಸೆಗಾಗಿ ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸಿರಾಜುದ್ದಿನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಕೊಕ್ಕಡ ನಿವಾಸಿ ಸಿದ್ದೀಕ್ ಎಂಬವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here