







ಉತ್ತಮ ಸೇವೆಯೊಂದಿಗೆ 200 ಗ್ರಾಹಕರನ್ನು ಹೊಂದಲಿ- ಜಿ.ಕೆ.ಮಹಾಬಲೇಶ್ವರ ಭಟ್ ಮಾಂಡೋವಿ ಮೋಟರ್ಸ್ ಈಶ್ವರಮಂಗಲದ ಘನತೆ ಹೆಚ್ಚಿಸಿದೆ- ಶಿವರಾಮ ಪಿ.
ಶಾಖೆ ಈಶ್ವರಮಂಗಲಕ್ಕೆ ಬಂದಿರುವುದು ನಮ್ಮ ಹೆಮ್ಮೆ- ರಘುನಾಥ ರೈ
ಕಾರು ಖರೀದಿಗೆ ನಮ್ಮ ಬ್ಯಾಂಕ್ನಿಂದ ಸಾಲ ಸೌಲಭ್ಯ- ವಿಶ್ವನಾಥ್
ಸಂಸ್ಥೆಯ ಮೇಲಿನ ವಿಶ್ವಾಸದಿಂದ ಕಾರು ಖರೀದಿ- ಶಶಿಧರ್ ಕಾರಂತ್


ಪುತ್ತೂರು: ಮಾರುತಿ ಸುಜುಕಿ ಸಂಸ್ಥೆಯ ಅಧಿಕೃತ ಮಾರಾಟಗಾರ ಸಂಸ್ಥೆಯಾದ ಮಾಂಡೋವಿ ಮೋಟರ್ಸ್ ನ ಈಶ್ವರಮಂಗಲ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ 100 ಯಶಸ್ವಿ ಗ್ರಾಹಕರ ಸಂಭ್ರಮಾಚರಣೆ ಸೆ.16ರಂದು ಬೆಳಿಗ್ಗೆ 10 ಗಂಟೆಗೆ ಶಾಖಾ ಕಛೇರಿಯಲ್ಲಿ ನಡೆಯಿತು.



ಉತ್ತಮ ಸೇವೆಯೊಂದಿಗೆ 200 ಗ್ರಾಹಕರನ್ನು ಹೊಂದಲಿ:
ಹನುಮಗಿರಿ ಕ್ಷೇತ್ರದ ಮಹಾಪೋಷಕರಾದ ಜಿ.ಕೆ.ಮಹಾಬಲೇಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಈಶ್ವರಮಂಗಲದಲ್ಲಿ ಮಾಂಡೋವಿ ಮೋಟರ್ಸ್ ಒಂದು ವರ್ಷದಿಂದ ಯಶಸ್ವಿಯಾಗಿ ನಡೆದಿದೆ. ಉತ್ತಮ ಸೇವೆ ನೀಡುತ್ತಿರುವ ಶಾಖೆ ಮುಂದೆಯೂ ಉತ್ತಮ ಸೇವೆಯೊಂದಿಗೆ 200 ಗ್ರಾಹಕರನ್ನು ಹೊಂದಲಿ ಎಂದು ಹೇಳಿ ಶುಭ ಹಾರೈಸಿದರು.

ಮಾಂಡೋವಿ ಮೋಟರ್ಸ್ ಈಶ್ವರಮಂಗಲದ ಘನತೆ ಹೆಚ್ಚಿಸಿದೆ:
ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ. ಮಾತನಾಡಿ ಇಂದು ಅತ್ಯಂತ ಸಂತೋಷದ ದಿನ. ಒಂದು ವರ್ಷದಲ್ಲಿ ನೂರು ಗ್ರಾಹಕರನ್ನು ಹೊಂದಿರುವುದು ಸಂತೋಷವಾಗಿದೆ. ಕೊನೆತೋಟ ಮನೆತನದವರು ಹೊಸತನ ಕಾಣುವ ಎಲ್ಲಾ ವ್ಯವಸ್ಥೆಯನ್ನು ಈಶ್ವರಮಂಗಲಕ್ಕೆ ಕಲ್ಪಿಸಿಕೊಟ್ಟಿದ್ದಾರೆ. ನಮ್ಮಲ್ಲಿರುವ ಮಾಂಡೋವಿ ಮೋಟರ್ಸ್ ಈಶ್ವರಮಂಗಲದ ಘನತೆ ಹೆಚ್ಚಿಸಿದೆ. ಸಿಬ್ಬಂದಿಗಳು ಉತ್ತಮ ಸೇವೆ ನೀಡಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿ ಶಾಖೆ ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.
ಶಾಖೆ ಈಶ್ವರಮಂಗಲಕ್ಕೆ ಬಂದಿರುವುದು ನಮ್ಮ ಹೆಮ್ಮೆ:
ಪಂಚಲಿಂಗೇಶ್ವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಘುನಾಥ ರೈ ಮಾತನಾಡಿ 2007ರಿಂದ ನಾನೂ ಕೂಡ ಮಾಂಡೋವಿ ಮೋಟರ್ಸ್ನ ಗ್ರಾಹಕ. ಮಾಂಡೋವಿ ಮೋಟರ್ಸ್ ನ ಸೇವೆ ಎಲ್ಲರೂ ಮೆಚ್ಚುವಂತಹದ್ದು. ಅವರ ಸೇವೆಯನ್ನು ನಾನು ಮರೆಯುವುದಿಲ್ಲ. ನೂರು ಗ್ರಾಹಕರನ್ನು ಹೊಂದಿದ ಶಾಖೆ ಈಶ್ವರಮಂಗಲಕ್ಕೆ ಬಂದಿರುವುದು ನಮ್ಮ ಹೆಮ್ಮೆ. ಸರ್ವಿಸ್ ಸೆಂಟರ್ ಕೂಡ ಆಗಿ ಗ್ರಾಹಕರಿಗೆ ಸಿಗಲಿ ಎಂದು ಹೇಳಿ ಇನ್ನಷ್ಟು ಹೆಚ್ಚು ಗ್ರಾಹಕರನ್ನು ಹೊಂದಿ ಸಂಸ್ಥೆ ಬೆಳೆಯಲಿ ಎಂದರು.
ಕಾರ್ ಖರೀದಿಗೆ ನಮ್ಮ ಬ್ಯಾಂಕ್ನಿಂದ ಸಾಲ ಸೌಲಭ್ಯ:
ಕರ್ನಾಟಕ ಬ್ಯಾಂಕ್ನ ಜಿಎಮ್ ವಿಶ್ವನಾಥ್ ಮಾತನಾಡಿ ಮಾಂಡೋವಿ ಮೋಟರ್ಸ್ ಸ್ಥಾಪಕರು ಕರ್ನಾಟಕ ಬ್ಯಾಂಕ್ನ ನಿರ್ದೇಶಕರೂ ಆಗಿದ್ದರು. ಕಾರ್ ಖರೀದಿಗೆ ನಮ್ಮ ಬ್ಯಾಂಕ್ನಿಂದ ಸಾಲ ಸೌಲಭ್ಯ ಇದೆ. ಮಾಂಡೋವಿ ಮೋಟರ್ಸ್ ಬೆಳೆಯಲಿ ಅದರೊಂದಿಗೆ ನಮ್ಮ ಬ್ಯಾಂಕ್ನ್ನು ಕೂಡ ಬೆಳೆಸಿ ಎಂದರು.
ಸಂಸ್ಥೆಯ ಮೇಲಿನ ವಿಶ್ವಾಸದಿಂದ ಕಾರು ಖರೀದಿ:
ಮಾಂಡೋವಿ ಮೋಟರ್ಸ್ನ ಸೇಲ್ಸ್ ಮತ್ತು ಮಾರ್ಕೆಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ಶಶಿಧರ್ ಕಾರಂತ್ ಮಾತನಾಡಿ ದ.ಕ.ಜಿಲ್ಲೆಯಾದ್ಯಂತ ಅಭಿವೃದ್ಧಿ ಹೊಂದಲಿರುವ ಗ್ರಾಮೀಣ ಪ್ರದೇಶದಲ್ಲಿ ಶಾಖೆ ಮಾಡುವ ಉದ್ಧೇಶದಿಂದ ಈಶ್ವರಮಂಗಲದಲ್ಲಿ ಶಾಖೆ ಆರಂಭಿಸಿದ್ದೇವೆ. ಕಂಪೆನಿಯ ಅಧಿಕೃತ ಆದೇಶ ಬರುವ ಮೊದಲೇ ನಾವು ಕಳೆದ ವರ್ಷ ಸಂಸ್ಥೆ ಆರಂಭಿಸಿದ್ದೆವು. ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ನೂರು ಗ್ರಾಹಕರು ಕಾರ್ ಖರೀದಿ ಮಾಡಿದ್ದಾರೆ. ಮುಂದೆಯೂ ಗ್ರಾಮೀಣ ಭಾಗದಲ್ಲಿ ನಮ್ಮ ಶಾಖೆ ವಿಸ್ತರಿಸುವ ಯೋಚನೆ ಇದೆ. ನಮ್ಮ ಬಿಲ್ಡಿಂಗ್ನಲ್ಲಿ ಕರ್ನಾಟಕ ಬ್ಯಾಂಕ್ ಕೂಡ ಇರುವುದು ನಮಗೆ ಪ್ಲಸ್ ಪಾಯಿಂಟ್ ಆಗಿದ್ದು ಬ್ಯಾಂಕ್ನ ಸಾಲ ಸೌಲಭ್ಯದಲ್ಲಿ ಕಾರ್ ಖರೀದಿಗೆ ಅವಕಾಶವಿದೆ ಎಂದು ಹೇಳಿ ಶಾಖೆ ಆರಂಭಿಸಲು ಸಹಕಾರ ನೀಡಿದ ಮಹಾಬಲೇಶ್ವರ ಭಟ್ರವರಿಗೆ ಕೃತಜ್ಞತೆ ಸಲ್ಲಿಸಿದರು.
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮಹಮ್ಮದ್ ರಿಯಾಜ್ ಶುಭಹಾರೈಸಿದರು. ಮಾಂಡೋವಿ ಮೋಟರ್ಸ್ನ ಸಹಾಯಕ ಪ್ರಬಂಧಕ ಸುರೇಶ್ ಬಿ.ಜಿ., ಸಿಬ್ಬಂದಿಗಳಾದ ಅವಿನಾಶ್ ಜೈನ್, ಅಶ್ವಿತ್ ರೈ, ಸುದೇಶ್ ಜೈನ್, ಹರಿಕಿರಣ್ ಕರ್ಣಾಟಕ ಬ್ಯಾಂಕ್ ಈಶ್ವರಮಂಗಲ ಶಾಖಾ ಮ್ಯಾನೇಜರ್ ಶ್ರೀಕೃಷ್ಣ ಭಟ್, ಕ್ಲಸ್ಟರ್ ಹೆಡ್ ಪೂರ್ಣಚಂದ್ರ, ಚಂದ್ರಶೇಖರ್ ಅತಿಥಿಗಳನ್ನು ಗೌರವಿಸಿದರು. ಮಾಂಡೋವಿ ಮೋಟರ್ಸ್ನ ಸುಜಿತ್ ಸ್ವಾಗತಿಸಿ ಸಂದೀಪ್ ಸಾರಕೂಟೇಲ್ ಕಾರ್ಯಕ್ರಮ ನಿರೂಪಿಸಿ ಸೇಲ್ಸ್ ಮ್ಯಾನೇಜರ್ ಅಕ್ಷಯ್ ವಂದಿಸಿದರು.
ನೂತನ ಕಾರ್ ಖರೀದಿ ಮಾಡಿದ ಗ್ರಾಹಕರಿಗೆ ಕೀ ಹಸ್ತಾಂತರ ಕಾರು ಖರೀದಿ ಮಾಡಿದ ಗ್ರಾಹಕರಿಗೆ ಕೀ ಹಸ್ತಾಂತರ ಮಾಡಲಾಯಿತು. ಗ್ರಾಹಕರಾದ ಶಿವರಾಮ ಭಟ್ ಬೀರ್ಣಕಜೆ, ರಫೀಕ್, ರಮೇಶ್, ಇಮಾಮುದ್ದೀನ್ರವರು ಕಾರು ಖರೀದಿ ಮಾಡಿದ್ದು ಅವರಿಗೆ ಕೀ ಹಸ್ತಾಂತರಿಸಿದರು.














