







ಗಣೇಶ ಜ್ಞಾನ ಮತ್ತು ಬುದ್ಧಿಯ ಅಧಿದೇವತೆ -ಗಣೇಶ್ ಏತಡ್ಕ


ಅರಿಯಡ್ಕ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೌಡಿಚ್ಚಾರು -ಅರಿಯಡ್ಕ ಇದರ ವತಿಯಿಂದ 32 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ.14 ರಂದು ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು -ಅರಿಯಡ್ಕ ಇದರ ವಾಸುದೇವ ಸಭಾಭವನದಲ್ಲಿ ನಡೆಯಿತು.




ಕಾವು ಶಿವಪ್ರಸಾದ ಕಡಮಣ್ಣಾಯರವರ ಪೌರೋಹಿತ್ಯದಲ್ಲಿ ಗಣೇಶ ವಿಗ್ರಹ ಪ್ರತಿಷ್ಠೆ, ಗಣಪತಿ ಹೋಮ, ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಮತ್ತು ಸಾಂದೀಪನಿ ವಿದ್ಯಾಸಂಸ್ಥೆ ನರಿಮೊಗ್ರು ಇವರಿಂದ ಭಜನಾ ಸಂಕೀರ್ತನೆ,ನಾಗನ ಕಟ್ಟೆಯಲ್ಲಿ ತಂಬಿಲ, ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಭಕ್ತಿ ಗೀತೆ ಸ್ಪರ್ಧೆಗಳು ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ:
ಗಣೇಶ ಜ್ಞಾನ ಮತ್ತು ಬುದ್ಧಿಯ ಅಧಿದೇವತೆ -ಗಣೇಶ್ ಏತಡ್ಕ
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇದರ ಕನ್ನಡ ಶಿಕ್ಷಕ ಗಣೇಶ್ ಏತಡ್ಕ ಮಾತನಾಡಿ, ಪ್ರಥಮ ಪೂಜೆಯನ್ನು ಪಡೆಯುವ ಗಣೇಶ,ಜ್ಞಾನ ಮತ್ತು ಬುದ್ಧಿಯ ಅಧಿದೇವತೆ. ಗಣೇಶೋತ್ಸವ ಕೇವಲ ಪೂಜೆ ಮತ್ತು ಉತ್ಸವಗಳಿಗೆ ಸೀಮಿತವಾಗಿರದೆ, ಹಿಂದೂ ಧರ್ಮದ ಸಂಸ್ಕೃತಿ,ಸಂಸ್ಕಾರ , ಒಗ್ಗಟ್ಟು , ಮತ್ತು ಸಾಮಾಜಿಕ ಸಂದೇಶವನ್ನು ನೀಡುವ ಹಬ್ಬವಾಗಿದೆ.ಯಾವುದೇ ಶುಭ ಕಾರ್ಯಗಳನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಸ್ಮರಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ವಿಶೇಷತೆ.ಶ್ರೀಗಣೇಶ ದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸರ್ವರ ಇಷ್ಟಾರ್ಥವನ್ನು ನೆರವೇರಿಸಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ರಿ ಕೌಡಿಚ್ಚಾರು ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಗುಂಡ್ಯಡ್ಕ, ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇದರ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಉದ್ಯಮಿ ಗೊವಿಂದ ರಾಜು ಸಿಂಗ ನಾಯಕ ಹಳ್ಳಿ ಬೆಂಗಳೂರು ಬಹುಮಾನ ವಿತರಣೆ ಮಾಡಿದರು.ಶ್ರೀಕೃಷ್ಣ ಭಜನಾ ಮಂದಿರದ ಗೌರವಾಧ್ಯಕ್ಷ ರಾಮ ದಾಸ ರೈ ಮದ್ಲ ಸಭಾಧ್ಯಕ್ಷತೆ ವಹಿಸಿದ್ದರು.

ಸನ್ಮಾನ:
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸದಸ್ಯ, ಗಣೇಶ ವಿಗ್ರಹ ಮತ್ತು ಅನ್ನದಾನದ ಸೇವಾರ್ಥಿ ಸುಶಾಂತ್ ರೈ ಕುತ್ಯಾಡಿ ದಂಪತಿಗಳಿಗೆ ಮತ್ತು ಸಹಕಾರ ನೀಡಿದ ಉದ್ಯಮಿ ಗೋವಿಂದರಾಜು ಸಿಂಗನಾಯಕ ಹಳ್ಳಿ ಇವರನ್ನು ಸನ್ಮಾನಿಸಲಾಯಿತು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ಕನ್ನಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ರೈ ಕುತ್ಯಾಡಿ, ಕೋಶಾಧಿಕಾರಿ ಕೊರಗಪ್ಪ ಗೌಡ ಮಡ್ಯಂಗಳ, ಉಪಾಧ್ಯಕ್ಷ ದಿವಾಕರ ಮಣಿಯಾಣಿ ಪೊನ್ನೆತ್ತಳ್ಕ, ಶೇಷಪ್ಪ ನಾಯ್ಕ ಮಾಯಿಲ ಕೊಚ್ಚಿ, ಮತ್ತು ಹರೀಶ್ ರೈ ಬಳ್ಳಿಕಾನ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು.ದೀಪಕ್ ಕುಲಾಲ್ ಆಕಾಯಿ ಪ್ರಾರ್ಥಿಸಿ, ಸಂತೋಷ್ ಮಣಿಯಾಣಿ ಕುತ್ಯಾಡಿ ಸ್ವಾಗತಿಸಿದರು.ಪ್ರಮೋದ್ ರೈ ಪನೆಕ್ಕಳ ವಂದಿಸಿ, ಹರೀಶ್ ರೈ ಜಾರತ್ತಾರು ಕಾರ್ಯಕ್ರಮ ನಿರೂಪಿಸಿದರು.
ಶೋಭಾಯಾತ್ರೆ:
ಸಂಜೆ ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು -ಅರಿಯಡ್ಕ ದಿಂದ ಅಯ್ಯಪ್ಪ ಭಜನಾ ಮಂದಿರ ಪೆರಿಗೇರಿ ತನಕ ಶ್ರೀ ಕೃಷ್ಣ ಭಜನಾ ಸಂಕೀರ್ತನಾ ಸಮಿತಿಯಿಂದ ಭಜನಾ ಸಂಕೀರ್ತನೆ, ಶ್ರೀ ವನಶಾಸ್ತರ ಚಿಣ್ಣರ ಭಜನಾ ತಂಡ ಆಲಂತ್ತಡ್ಕ ಮತ್ತು ಶ್ರೀ ಅಯ್ಯಪ್ಪ ಕುಣಿತ ಭಜನಾ ತಂಡ ಪೆರಿಗೇರಿ ಇವರಿಂದ ಕುಣಿತ ಭಜನೆ,ಕರಡಿ ವೇಷ, ನಾಸಿಕ್ ಬ್ಯಾಂಡ್,ಅನಿಲ್ ಕೌಡಿಚ್ಚಾರು ಮತ್ತು ಬಳಗದವರಿಂದ ಭಾರತಾಂಬೆಯ ಟ್ಯಾಬ್ಲ್ ವಿಜೃಂಭಣೆಯ ಶೋಭಾಯಾತ್ರೆ ಗೆ ಮೆರುಗು ತಂದಿತು.ದಾರಿಯುದ್ದಕ್ಕೂತಳಿರುತೋರಣ,ಪನಿಯ ವ್ಯವಸ್ಥೆಗಳಿಗೆ ಭಕ್ತಾದಿಗಳು ಸಹಕರಿಸಿದರು. ಉದ್ಯಮಿ ಅಜಿತ್ ಭಂಡಾರಿ ” ಶ್ರೀ ಕಾರಂ”ಕುತ್ಯಾಡಿ ಪ್ರಯೊಜಕತ್ವದಲ್ಲಿ ಆಕರ್ಷಕ ಸಿಡಿಮದ್ದು ಮತ್ತು ನಾಸಿಕ್ ಬ್ಯಾಂಡ್ ಪ್ರದರ್ಶನ ನಡೆಯಿತು.ಪೆರಿಗೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ಗಣೇಶನನ್ನು ಬರಮಾಡಿಕೊಳ್ಳಲಾಯಿತು.ಮಂದಿರದಲ್ಲಿ ಪೂಜೆ ಗೊಂಡು, ಅಯ್ಯಪ್ಪ ಭಜನಾ ಮಂದಿರ ಸಹಕಾರದೊಂದಿಗೆ ಕ್ಷೀರ ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು.

ಅನ್ನದಾನ:
ಕನ್ನಯ ದಿ.ಸುಬ್ರಾಯಗೌಡ ಸ್ಮರಣಾರ್ಥ ಶ್ರೀನಿವಾಸ ಗೌಡ ಕನ್ನಯ ಮತ್ತು ಮನೆಯವರಿಂದ ಅನ್ನು ಪ್ರಸಾದ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಮತ್ತು ಭಜನಾ ಸಂಕೀರ್ತನೆ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ,ನಾಗನ ಕಟ್ಟೆ ಸಮಿತಿ, ಕೋಟಿ ಚೆನ್ನಯ ಗೆಳಯರ ಬಳಗ ರಿ’ಪಾಪೆಮಜಲು, ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು,ಆಯುಧ ಪೂಜಾ ಸಮಿತಿ ಕೌಡಿಚ್ಚಾರು ಮುಂತಾದ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು,ಸಾರ್ವಜನಿಕ ಭಕ್ತಾದಿಗಳು ಸಹಕರಿಸಿದರು.










