






ಪುತ್ತೂರು: ನರಿಮೊಗರು ಮುಕ್ವೆಯಲ್ಲಿ ವ್ಯವಹರಿಸುತ್ತಿರುವ ವರಸಿದ್ಧಿ ಶ್ರೀಮಹಾಲಿಂಗೇಶ್ವರ ಕ್ರೆಡಿಟ್ ಸೌಹಾರ್ದ ಸಂಘದ 2025-26ನೇ ಸಾಲಿನ ಸಾಮಾನ್ಯ ಸಭೆ ಸಂಘದ ಕಛೇರಿ ವಠಾರದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಪಿ. ಅಧ್ಯಕ್ಷತೆ ವಹಿಸಿದ್ದರು.
ಸದಸ್ಯರಾದ ಈಶ್ವರ ಭಟ್ ಪಿ. ವೆಂಕಟ್ರಮಣ ಭಟ್ ಯಂ, ವೆಂಕಟ್ರಮಣ ಭಟ್ ಗಡಿಪ್ಪಿಲ, ನಾಗರಾಜ ಭಟ್ ಪಿ., ಲೆಕ್ಕಪರಿಶೋಧನಾ ಸಲಹೆಗಾರ ತಿಮ್ಮಪ್ಪಯ್ಯ ಪೆರ್ಲಂಪಾಡಿರವರನ್ನು ಶಾಲು ಹೊದೆಸಿ ಗೌರವಿಸಲಾಯಿತು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುನೀತ್ 2025-26 ನೇ ಸಾಲಿನ ಲೆಕ್ಕ ಪತ್ರ ತಿಳಿಸಿ, ಮುಂದಿನ ವರ್ಷದ ಬಜೆಟ್ ಮತ್ತು ಆಯವ್ಯಯ ಮಂಡಿಸಿದರು. ಹಿರಿಯ ಸಹಾಯಕಿ ಶೋಭಾ ಪ್ರಾರ್ಥಿಸಿ ವಂದಿಸಿದರು. ಸವಣೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಕುಕ್ಕುಜೆ ಕೃಷ್ಣ ಭಟ್, ಮೂಸೆಕುಞಿ, ಶಾಫಿ, ವಲ್ಲಿ ಡಿ ಸೋಜಾ, ಡಾ.ಬಾಲಸುಬ್ರಹ್ಮಣ್ಯ ಬಿ.ಯನ್, ಡಾ.ಅಶ್ವಿನಿ ಬಾಲಸುಬ್ರಹ್ಮಣ್ಯ, ರೀವನ್ ಡಿಸೋಜಾ, ಕ್ಲೆವೆನ್, ರಘುನಾಥ್ ಯಂ, ಧನಂಜಯ ಮತ್ತು ಇನ್ನಿತರ ಸದಸ್ಯರು ಹಾಜರಿದ್ದರು.















