







ರೂ.2 ಲಕ್ಷದ 59 ಸಾವಿರದ 155 ನಿವ್ವಳ ಲಾಭ, ಲೀಟರ್ಗೆ ರೂ. 75 ಪೈಸೆ ಬೋನಸ್, .12 ಡಿವಿಡೆಂಡ್


ಬಡಗನ್ನೂರು: ಬಡಗನ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸೀತಾರಾಮ ಗೌಡ ಉಳಯರವರ ಅಧ್ಯಕ್ಷತೆಯಲ್ಲಿ ಸೆ.16ರಂದು ಬಡಗನ್ನೂರು ಗ್ರಾ. ಪಂ ಸಭಾಭವನದಲ್ಲಿ ನಡೆಯಿತು.



ಸಂಘದ ಕಾರ್ಯದರ್ಶಿ ಮೋಹನ ಎಂ 2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘವು ವರದಿ ಸಾಲಿನಲ್ಲಿ ಹಾಲು ಉತ್ಪಾದಕರಿಂದ 1, 68,680.3 ಲೀಟರ್ ಹಾಲನ್ನು 67,95750.13 ರೂಗೆ ಖರೀದಿಸಿ ಅದರಲ್ಲಿ 9, 670. 5 ಹಾಲನ್ನು 5,22,207 ರೂ ಗೆ ಮಾರಾಟ ಮಾಡಲಾಗಿದೆ ಉಳಿಕೆ 1,59,009.8 ಲೀಟರ್ ಹಾಲನ್ನು 68, 91,877.73 ರೂ ಗೆ ಒಕ್ಕೂಟಕ್ಕೆ ಮಾರಾಟ ಮಾಡಿರುತ್ತದೆ ಮತ್ತು ವರದಿ ಸಾಲಿನಲ್ಲಿ ರೂಪಾಯಿ 11,01,100, ಪಶು ಆಹಾರ, ರೂ 10750 ಸಮೃದ್ಧಿ,, ರೂ 39,500 ಲವಣ ಮಿಶ್ರಣ ಮತ್ತು ರೂ 1,22,914 ಸೈಲೇಜ್ ಖರೀದಿಸಿ ಅದನ್ನು ಮಾರಾಟ ಮಾಡಿ 31811.50 ಲಾಭ ಗಳಿಸಿ, ಸಂಘವು ವರದಿ ವರ್ಷದಲ್ಲಿ ರೂ.2 ಲಕ್ಷದ 59 ಸಾವಿರದ 155 ನಿವ್ವಳ ಲಾಭ ಗಳಿಸಿದ್ದು ಇದರಲ್ಲಿ ಸದಸ್ಯರಿಗೆ ಲೀಟರ್ಗೆ ರೂ. 75 ಪೈಸೆ ಬೋನಸ್ ನೀಡಲಾಗುವುದು ಇದಲ್ಲದೆ ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಣೆ ಮಾಡಿದರು.
ಸಂಘದ ಅಧ್ಯಕ್ಷ ಸೀತಾರಾಮ ಗೌಡ ಉಳಯರವರು ಮಾತನಾಡಿ, ಸರ್ವ ಸದಸ್ಯರ ಸಂಪೂರ್ಣ ಬೆಂಬಲದೊಂದಿಗೆ ಸಂಘವು ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಸಂಘದ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿ ಮುಂದೆಯೂ ಸಂಘಕ್ಕೆ ಗುಣಮಟ್ಟದ ಹಾಲನ್ನು ನೀಡಿ ಸಂಘದ ಅಭಿವೃದ್ಧಿಯಲ್ಲಿ ಪಾಲುದಾರರಾಗುವಂತೆ ಹೇಳಿದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ,ಸಂಘವು ಎರಡು ವರ್ಷಗಳಿಂದ ಎ ಗ್ರೇಡ್ ನ್ನು ಉಳಿಸಿ ಕೊಂಡು ಬರುತ್ತಿರುವ ಬಗ್ಗೆ ಕೃತಜ್ಞತೆ ಸಲ್ಲಿಸಿ ಅವರು ಗುಣಮಟ್ಟದ ಹಾಲನ್ನು ನೀಡುವ ಮೂಲಕ ಸಂಘದ ಅಭಿವೃದ್ಧಿ ಜತೆ ಒಕ್ಕೂಟವನ್ನು ಅಭಿವೃದ್ಧಿ ಸಹಕರಿಸುವಂತೆ ಹೇಳಿದ ಅವರು ಜಾನುವಾರುಗಳ ಸಾಕಾಣಿಕೆ ಹಾಗೂ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಬಡಗನ್ನೂರು ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಗೀತಾ ಮಾತನಾಡಿ ಹೖೆನುಗಾರಿಕೆ ಮಹಿಳೆಯರನ್ನು ಸ್ವಾವಲಂಬಿಯಾಗಿ ಬದುಕು ಕೊಟ್ಟಿದೆ. ಪರಿಶುದ್ಧ ಹಾಲು ,ಮತ್ತು ಅದರ ಇತರ ಉಪಯೋಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಅವರು ವಿವಿಜೀ ರಾಮ್ ಜೀ ಯೋಜನೆ ಮತ್ತು ಗ್ರಾ. ಪಂ ಇತರ ಸೌಲಭ್ಯಗಳ ಮಾಹಿತಿ ನೀಡಿದರು.
ಅತೀ ಹೆಚ್ಚು ಹಾಲು ನೀಡಿದವರಿಗೆ ಬಹುಮಾನ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕುತ್ತಿರುವ ಹೈನುಗಾರ ರೈತರನ್ನು ಈ ಸಂದರ್ಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು. ಇದರಲ್ಲಿ ಪ್ರಥಮ ಬಹುಮಾನವನ್ನು ವಿಲ್ಲಮ್ಮ ಮರಿಯ, ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಶಶಿಧರ್ ಭಟ್ ಕೆ ಹಾಗೂ ತೃತೀಯ ಬಹುಮಾನವನ್ನು ಅಕ್ಷಿತಾ ರೖೆ ಕೖೆೊಲ ರವರು ಪಡೆದುಕೊಂಡರು. ಉಳಿದಂತೆ ಹಾಲು ಹಾಕುತ್ತಿರುವ ಸದಸ್ಯರಿಗೆ ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಹೇಮಲತಾ ಗೌಡ ಸಂಪಿಗೆ ಮಜಲು ನಿರ್ದೇಶಕರುಗಳಾದ ನಾರಾಯಣ ನಾಯ್ಕ ನೇರ್ಲಂಪಾಡಿ, ಸುಬ್ರಾಯ ನಾಯಕ್ ಮೇಗಿನ ಮನೆ, ರವಿರಾಜ ರೈ ಕೇಳಗಿನ ಪೇರಾಲು, ಶಿವಚಂದ್ರ ಕುಲಾಲ್ ಪೖೆರುಪುಣಿ, ಪದ್ಮಶ್ರಿ ರೖೆ ಬಡಕ್ಕಾಯೂರು, ಸುಧಾ ಯಂ. ಯಶೋಧ ಕೖೆೊಲ, ಲೀಲಾವತಿ ಕಟ್ಟಾವು ಉಪಸ್ಥಿತರಿದ್ದರು.

ಸಭೆಯಲ್ಲಿ ಹೖೆನುಗಾರ ರೖೆತರು ಭಾಗವಹಿಸಿದರು.ಸಹಾಯಕಿ ಸುಜಾತ ಮೖೆಂದನಡ್ಕ ಪ್ರಾರ್ಥಿಸಿದರು.ಕಾರ್ಯದರ್ಶಿ ಮೋಹನ ಎಂ ಸ್ವಾಗತಿಸಿ ವಂದಿಸಿದರು.










