







ಕೆಯ್ಯೂರು: ಶತಮಾನೋತ್ಸವದತ್ತ ಸಾಗುತ್ತಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇದರ ಹಿರಿಯ ವಿದ್ಯಾರ್ಥಿಗಳ ಟ್ರಸ್ಟ್ ವತಿಯಿಂದ ವಿಶೇಷ ಸಭೆ, ಶಾಲೆಯ ಡಾಕ್ಯುಮೆಂಟರಿ ನಿರ್ಮಾಣಕ್ಕೆ ಎಲ್ಕೆಜಿಯಿಂದ ಪದವಿ ಪೂರ್ವದವರೆಗಿನ ವಿದ್ಯಾರ್ಥಿಗಳ ವಿಡಿಯೋ, ಫೋಟೋಗ್ರಫಿ ನಡೆಯಿತು.


ಶಾಲಾ ಅಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿ ಟ್ರಸ್ಟ್, ಶಿಕ್ಷಕರು, ಮುಖ್ಯಗುರುಗಳು, ಪ್ರಾಂಶುಪಾಲರು, ಪೋಷಕರು, ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಸರ್ವತೋಮುಖ ಅಭಿವೃದ್ಧಿಗೆ ಅಡಿಗಲ್ಲು ಹಾಕುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.



ಈ ಸಂದರ್ಭದಲ್ಲಿ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಸಾಧಕ ದ್ವಾರಕಾ ಕನ್ಸ್ಟ್ರಕ್ಷನ್ ಮಾಲಕ ಗೋಪಾಲಕೃಷ್ಣ ಭಟ್, ಡಿಜಿ, ಐಜಿಪಿ ಪ್ರಶಂಸನಾ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ರಂಜಿತ್ ಕುಮಾರ್ ರೈ ನೂಜಿ ಬರಮೇಲು ಹಾಗೂ ಎಂ.ಎ. ರ್ಯಾಂಕ್ ವಿಜೇತೆ ಸೌಜನ್ಯ ಬಿ.ಎಂ. ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಭಾಗೇಶ್ ರೈ ಕೆಯ್ಯೂರು ನೇತೃತ್ವದಲ್ಲಿ ಸಭೆ ನಡೆಯಿತು.


ಸದಸ್ಯತ್ವ ನೋಂದಣಿ ಅಭಿಯಾನದ ಭಾಗವಾಗಿ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎ.ಕೆ.ಜಯರಾಮ ರೈ ವೆಬ್ಸೈಟ್ ಬಿಡುಗಡೆ ಮಾಡಿದರು. ವೆಬ್ಸೈಟ್ ವಿನ್ಯಾಸಗೊಳಿಸಿದ ಕಾರ್ಯದರ್ಶಿ ಪ್ರಮಿತ್ ರಾಜ್ ಅವರನ್ನು ಅಭಿನಂದಿಸಲಾಯಿತು. ಕೋಶಾಧಿಕಾರಿ ಆನಂದ ರೈ ಪಿ. ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಹಸೀನಾ ಬಾನು ಎಸ್., ಉಪ ಪ್ರಾಂಶುಪಾಲ ಅರುಣ್ ಕುಮಾರ್, ಮುಖ್ಯಗುರು ಬಾಬು ಬಿ., ಎಸ್ಡಿಎಂಸಿ ಉಪಾಧ್ಯಕ್ಷ ಆಯುಬ್, ಟ್ರಸ್ಟ್ ಉಪಾಧ್ಯಕ್ಷ ಹಸೈನಾರ್ ಮತ್ತಿತರರು ಉಪಸ್ಥಿತರಿದ್ದರು.










