ಸೆ.20 ರಂದು ಮನವಳಿಕೆ ಗುತ್ತುವಿನ ಕಂಬಳ ಗದ್ದೆಯಲ್ಲಿ ಬಂಟೆರೆ ಕೆಸೆರ್ ಡೊಂಜಿ ಕುಸಲ್ ಕಾರ್ಯಕ್ರಮ

0

ಆಲಂಕಾರು: ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಪುತ್ತೂರು ತಾಲೂಕು ಸಮಿತಿ ಮತ್ತು ಪುತ್ತೂರು ತಾಲೂಕು ಬಂಟರ ಸಂಘ ಇದರ ಮಾರ್ಗದರ್ಶನದಲ್ಲಿ ನೆಲ್ಯಾಡಿ ವಲಯ ಬಂಟರ ಸಂಘದ ಸಹಯೋಗದೊಂದಿಗೆ ಆಲಂಕಾರು ವಲಯ ಬಂಟರ ಸಂಘ ಆಲಂಕಾರು ಇವರ ಆಶ್ರಯದಲ್ಲಿ ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮ ಪೆರಾಬೆ ಗ್ರಾಮದ ಮನವಳಿಕೆಗುತ್ತುವಿನ ಕಂಬಳಗದ್ದೆಯಲ್ಲಿ ಸೆ.20 ಅದಿತ್ಯವಾರ ನಡೆಯಲಿದೆ.

ಬೆಳಿಗ್ಗೆ 9:00 ಗಂಟೆಗೆ ಮನವಳಿಕೆಗುತ್ತುವಿನ ಯಜಮಾನ ರಮಾನಾಥ ರೈ ಮನವಳಿಕೆಗುತ್ತು ಧರ್ಮ ಚಾವಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸಹಕಾರ ರತ್ನ ಕೆ.ಸೀತಾರಾಮ ರೈ ಸವಣೂರು ಮಾಜಿ ಅಧ್ಯಕ್ಷರು ಬಂಟರ ಸಂಘ ಪುತ್ತೂರು ತಾಲೂಕು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆಗುತ್ತು ವಹಿಸಲಿದ್ದು. ಏಷ್ಯನ್ ಚಾಂಪಿಯನ್ ಶಿಫ್ ರನ್ನರ್ ಆಫ್ ಪ್ರಶಸ್ತಿ ಪುರಸ್ಕೃತರಾದ ನಿಖಿಲ್ ಎಲ್.ಶೆಟ್ಟಿ ಕೇವಳ ಪಟ್ಟೆ ಕ್ರೀಡಾ ಜ್ಯೋತಿ ಉದ್ಘಾಟನೆ ಮಾಡಲಿದ್ದು ಬಂಟ ಸಮಾಜದ ಹಿರಿಯರು,ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಪ್ರಮುಖರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ ಸಭಾಕಾರ್ಯಕ್ರಮ ನಡೆಯಲಿದ್ದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ಅಶೋಕ್ ಕುಮಾರ್ ರೈ ಯವರು ದೀಪ ಪ್ರಜ್ವಲನೆ ಮಾಡಲಿದ್ದು , ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರಿನ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಸಭಾ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಯವರು ಸಭಾಧ್ಯಕ್ಷತೆ ವಹಿಸಲಿದ್ದು ,ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ ಸಂಚಾಲಕರಾದ ದಂಬೆಕಾನ ಸದಾಶಿವ ರೈ ಮತ್ತು ಪುತ್ತೂರು ತಾಲೂಕು ಮಾಜಿ ಅಧ್ಯಕ್ಷರು,ಮಹಿಳಾ,ಯುವ ಬಂಟರ ಸಂಘದ ಅಧ್ಯಕ್ಷರು,ಪದಾಧಿಕಾರಿಗಳು, ಉದ್ಯಮಿಗಳು,ಮದ್ಯಾಹ್ನ ಸಭಾಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು,ಸಂಜೆ ಸಮಾರೋಪ ಸಮಾರಂಭ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಸಮಾರೋಪ ಸಮಾರಂಭ ಅಧ್ಯಕ್ಷತೆಯನ್ನು ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆಗುತ್ತು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ವಲಯದ ಬಂಟರ ಸಂಘದ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಶ್ರೀಮಾತಾ ಸೇರಿದಂತೆ ಹಲವು ಗಣ್ಯರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಕೆಸರ್ ದ ಗೊಬ್ಬಲು ನಿಧಿ ಶೋಧನೆ ಎಲ್ಲರಿಗೂ,ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ,ಪ್ರೌಡ ಶಾಲಾ ಬಾಲಕ, ಬಾಲಕಿಯರಿಗೆ, ಪುರುಷರಿಗೆ,ಮಹಿಳೆಯರಿಗೆ,45 ವರ್ಷ ಮೇಲ್ಪಟ್ಟ ಪುರುಷರಿಗೆ,ಮಹಿಳೆಯರಿಗೆ ಬೆಳಿಗ್ಗಿನಿಂದ ಸಂಜೆ ತನಕ‌ ಕೆಸರ್ ದ ಗೊಬ್ಬಲು ನಡೆಯಲಿದೆ.

ಕ್ರೀಡಾಕೂಟದ ತೀರ್ಪುಗಾರರಾಗಿ ದಯಾನಂದ ರೈ ಕೋರ್ಮಂಡ ಮತ್ತು ತಂಡ ಭಾಗವಹಿಸಲಿದ್ದಾರೆ ಈ ಎಲ್ಲಾ ಕಾರ್ಯಕ್ರಮಗಳಿಗೆ ತಾಲೂಕು,ಎಲ್ಲಾ ವಲಯದ ಬಂಟ ಸಮಾಜ ಭಾಂಧವರು ಕಾರ್ಯಕ್ರಮದಲ್ಲಿ ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸುಂತೆ ಬಂಟೆರೆ ಕೆಸರ್ ಡೊಂಜಿ ಕುಸಲ್ ಕಾರ್ಯಕ್ರಮದ ಆಯೋಜನ ಸಮಿತಿಯ ಗೌರವಾಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆಗುತ್ತು, ಸಂಚಾಲಕರಾದ ಮೋಹನದಾಸ ರೈ ಪರಾರಿಗುತ್ತು, ಕಾರ್ಯದರ್ಶಿ ಅಜಿತ್ ರೈ ಮನವಳಿಕೆಗುತ್ತು, ಸಹಸಂಚಾಲಕರಾದ ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಲೋಕನಾಥ ರೈ ಕೇಳ್ಕ,ಕೆ.ಗಣೇಶ ರೈ ಮನವಳಿಕೆಗುತ್ತು, ಮೋಹನದಾಸ ಶೆಟ್ಟಿ ಬಡಿಲ,ಪ್ರಭಾಕರ ಶೆಟ್ಟಿ ಕೇವಳ ಪಟ್ಟೆ,ಪ್ರಶಾಂತ ರೈ .ಜಿ ಮನವಳಿಕೆಗುತ್ತು, ಮಮತಾ ಶೆಟ್ಟಿ ಅಂಬರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here