ಕಾಣಿಯೂರು ಪ್ರಗತಿ ಐವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

0

  • 14ರ ವಯೋಮಾನದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬಾಲಕರ ತಂಡ ದ್ವಿತೀಯ ಸ್ಥಾನ

ಕಾಣಿಯೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರಿನಲ್ಲಿ ನಡೆದ ಶಿಕ್ಷಣ ಇಲಾಖೆಯ 14ರ ವಯೋಮಾನದ ಬಾಲಕ ಬಾಲಕಿಯರ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರಿನ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತದೆ.


ಈ ಮೂಲಕ ಪ್ರಗತಿ ತಂಡದ ಐವರು ಕ್ರೀಡಾಪಟುಗಳಾದ ಬಿಂದನ್ ಎನ್, ಅಭಿನ್ ಜೆ ಬಿ, ಉಜ್ವಲ್ ಜಿ ಎಸ್, ಹಾರ್ತಿಕ್ ಕೆ ಗೌಡ, ಇಶಾನ್ ಪಿ ಎಸ್ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಅವರ ಪೈಕಿ ಬಿಂದನ್ ಎನ್ ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಇತರ ಆಟಗಾರರಾದ ಮೌಖಿಕ್ ಬಿ ಎಸ್, ಸಾಶ್ರಿತ್ ರೈ ವಿ, ಉತ್ತಮ್ ಎಸ್, ರತನ್ ಕೆ, ಅಯಾನ್ ಯೂಸುಫ್, ಮೋಕ್ಷಿತ್ ಕೆ, ವೃಶಾಂಕ್ ಸಿ ಕೆ ಉತ್ತಮ ಪ್ರದರ್ಶನ ನೀಡಿದರು.


ವಿಜೇತರನ್ನು ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಅಧಿಕಾರಿಗಳು, ಮುಖ್ಯ ಗುರುಗಳು, ಶಿಕ್ಷಕ- ಶಿಕ್ಷಕರೇತರ ವೃಂದದವರು ಮತ್ತು ವಿದ್ಯಾರ್ಥಿ ಮಿತ್ರರು ಅಭಿನಂದಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್ ಕೆ ಮತ್ತು ಸುವರ್ಣ ಕೆ ಬಿ ಸೂಕ್ತ ತರಬೇತಿ ನೀಡಿದರು. ಸಹ ಆಡಳಿತ ಅಧಿಕಾರಿ ಹೇಮಾನಾಗೇಶ್ ರೈ, ಹಿರಿಯ ಶಿಕ್ಷಕಿ ಸವಿತಾ ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here