







ಅಧ್ಯಕ್ಷ-ಹರಿಪ್ರಸಾದ್, ಉಪಾಧ್ಯಕ್ಷ-ಮಂಜೇಶ್, ಕಾರ್ಯದರ್ಶಿ-ಜೀವನ್, ಕೋಶಾಧಿಕಾರಿ-ಜಿತೇಶ್


ನೆಲ್ಯಾಡಿ: ಬಜತ್ತೂರು ಗ್ರಾಮದ ಡೆಂಬಲೆ ಮೇಲೂರು ವಿನಾಯಕ ಗೆಳೆಯರ ಬಳಗದ ನೂತನ ಅಧ್ಯಕ್ಷರಾಗಿ ಹರಿಪ್ರಸಾದ್ ಡೆಂಬಲೆ, ಉಪಾಧ್ಯಕ್ಷರಾಗಿ ಮಂಜೇಶ್ ಆರ್., ಕಾರ್ಯದರ್ಶಿಯಾಗಿ ಜೀವನ್ ಡೆಂಬಲೆ, ಕೋಶಾಧಿಕಾರಿಯಾಗಿ ಜಿತೇಶ್ ಡೆಂಬಲೆ ಆಯ್ಕೆಯಾಗಿದ್ದಾರೆ.



ಸೆ.೧೩ರಂದು ಚೌತಿ ಪ್ರಯುಕ್ತ ಮೇಲೂರಿನಲ್ಲಿ ನಡೆದ ವಿವಿಧ ಆಟೋಟ ಸ್ಪರ್ಧೆಗಳ ಬಳಿಕ ನೂತನ ಸಮಿತಿ ರಚನೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ನಾರಾಯಣ ಶೆಟ್ಟಿ ಮೇಲೂರು, ಗೌರವ ಸಲಹೆಗಾರರಾಗಿ ಆನಂದ ಕೆ.ಎಸ್., ದಿನೇಶ್ ಬಂಗೇರ, ಪದ್ಮಯ ಗೌಡ, ರಮೇಶ್ ಡಿ, ವಿಶಾಲಾಕ್ಷ ಮೇಲೂರು, ಗಂಗಾಧರ ಕೆ.ಎಸ್.ಅವರನ್ನು ನೇಮಿಸಲಾಯಿತು. ಸಂಘಟನೆಯ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಮುಂದಿನ ಯೋಜನೆಗಳ ಕುರಿತು ಚರ್ಚಿಸಲಾಯಿತು.










