ಕೆಮ್ಮಿಂಜೆ ದೇವಸ್ಥಾನದಲ್ಲಿ ತಿಂಗಳ ಸಂಕ್ರಮಣ, ತಿಂಗಳ ಷಷ್ಠಿ, ತಂಬಿಲ ಸೇವೆ, ಬಲಿವಾಡು ಸೇವೆ

0

ಪುತ್ತೂರು: ಕೆಮ್ಮಿಂಜೆ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸೆ.17 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತಿಂಗಳ ಸಂಕ್ರಮಣ, ತಿಂಗಳ ಷಷ್ಠಿ, ಬಲಿವಾಡು ಸೇವೆ, ರಕ್ತೇಶ್ವರಿ, ಧೂಮಾವತಿ ದೈವಗಳಿಗೆ ತಂಬಿಲ ಸೇವೆ,  ಮಾಡಾಂತಾರು ಮೈಲ್ (ಗೋಲೆಕ್ಸ್ ಫ್ಯಾಕ್ಟರಿ ಬಳಿ) ಕಲ್ಕುಡ ಕಲ್ಲುರ್ಟಿ, ಗುಳಿಗ ದೈವಗಳಿಗೆ ತಂಬಿಲ ಸೇವೆ, ಮಹಾಪೂಜೆ ಅರ್ಚಕ ವೆಂಕಟೇಶ್ ಭಟ್ ರವರ ನೇತೃತ್ವದ ಅರ್ಚಕ ವೃಂದದಿಂದ ಧಾರ್ಮಿಕ ಕಾರ್ಯಕ್ರಮ ಜರಗಿತು.

ಆ ಪ್ರಯುಕ್ತ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಭಜನೆ, ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಸದಸ್ಯರಾದ ಸೂರಪ್ಪ ಗೌಡ ಸಂಜಯನಗರ, ಚಂದ್ರಶೇಖರ ಕಲ್ಲಗುಡ್ಡೆ, ಮಹೇಶ್ ಕಾವೇರಿಕಟ್ಟೆ, ರಕ್ಷಿತ್ ನಾಯ್ಕ್ ದರ್ಬೆ, ವಸಂತ ನಾಯ್ಕ ಬೆದ್ರಾಳ, ಲಲಿತಾ ಕೆ, ರೇಖಾ ಯಶೋಧರ, ಸಿಬ್ಬಂದಿ ಭರತ್, ಗುಮಾಸ್ತ ರಘುನಾಥ್ ಪೂಜಾರಿ ಸಹಿತ ನೂರಾರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಹೆಚ್ಚಿನ ಮಾಹಿತಿಗಾಗಿ 9980223709, 7795711499 ನಂಬರಿಗೆ ಸಂಪರ್ಕಿಸಬಹುದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಸೇವಾ ಕೌಂಟರ್ ಉದ್ಘಾಟನೆ..
ಭಕ್ತಾಧಿಗಳಿಗೆ ಶ್ರೀ ದೇವರ ಸಮರ್ಪಣೆಗೆ ವಿವಿಧ ಧಾರ್ಮಿಕ ಸೇವೆಗಳನ್ನು ನೀಡಲು ದೇವಸ್ಥಾನದ ಒಳಗಡೆ ಸೇವಾ ಕೌಂಟರ್ ಕಾರ್ಯನಿರ್ವಹಿಸುತ್ತಾ ಬಂದಿತ್ತು. ಇದೀಗ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವಾಗಲೆಂದು ದೇವಸ್ಥಾನದ ಎದುರುಗಡೆ ಮುಖ್ಯ ದ್ವಾರದ ಬಳಿ ಸುಸಜ್ಜಿತ ಕೌಂಟರ್ ಅನ್ನು ತೆರೆಯಲಾಗಿದೆ. ಶ್ರೀ ಕ್ಷೇತ್ರದ ಅರ್ಚಕ ವೆಂಕಟೇಶ್ ಭಟ್ ರವರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಸಂತ ಫಿಲೋಮಿನಾ ಕಾಲೇಜಿನ ಉಪ ಪ್ರಾಂಶುಪಾಲ ಡಾ.ವಿಜಯಕುಮಾರ್ ಮೊಳೆಯಾರ್ ರವರು ದೀಪ ಬೆಳಗಿಸಿ ಸೇವಾ ಕೌಂಟರ್ ಗೆ ಚಾಲನೆಯಿತ್ತರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ ಸಹಿತ ವ್ಯವಸ್ಥಾಪನಾ ಸಮಿತಿ ಸದಸ್ಯರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here