ಜಿಲ್ಲಾ ಮಟ್ಟದ ನೆಟ್‌ಬಾಲ್‌ನಲ್ಲಿ ಕಾಂಚನ ಪ್ರೌಢಶಾಲೆಗೆ ದ್ವಿತೀಯ : 5 ಮಂದಿ ರಾಜ್ಯಮಟ್ಟಕ್ಕೆ ಆಯ್ಕೆ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಮತ್ತು ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಕುಲಶೇಖರ ಮಂಗಳೂರು ಆಯೋಜಿಸಿದ ಜಿಲ್ಲಾ ಮಟ್ಟದ ನೆಟ್‌ಬಾಲ್ ಪಂದ್ಯಾಟದಲ್ಲಿ ಕಾಂಚನ ಪ್ರೌಢಶಾಲೆಯ 17ರ ವಯೋಮಾನದ ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ತಂಡದ ಐವರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವೈಶಾಖ್ ಜಿ (10ನೇ), ಪ್ರೀತಂ (10ನೇ), ತನುಷ್ ಎಸ್ (9ನೇ), ರಿತೇಶ್ (9ನೇ) ಮತ್ತು ಗೌತಮ್ (9ನೇ) ಆಯ್ಕೆಯಾದವರು. ಮುಖ್ಯ ಶಿಕ್ಷಕ ರಾಧಾಕೃಷ್ಣ ಎಸ್ ಅವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ಚಂದ್ರ ಕೆ ಅವರು ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್ ಮತ್ತು ಎಸ್‌ಡಿಎಂ ಆಡಳಿತ ಮಂಡಳಿಯ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here