ಪೆರುವಾಯಿಯಲ್ಲಿ ನಿವೃತ್ತ ವೀರ ಯೋಧನಿಗೆ ಅದ್ಧೂರಿ ಹುಟ್ಟೂರ ಸ್ವಾಗತ

0

200ಕ್ಕೂ ಅಧಿಕ ವಾಹನಗಳು, 600ಕ್ಕೂ ಅಧಿಕ ರಾಷ್ಟ್ರಭಕ್ತರೊಂದಿಗೆ ಬೃಹತ್ ವಾಹನ ಜಾಥಾ

ಪುತ್ತೂರು: ಭಾರತೀಯ ಸೇನೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ನಿಷ್ಠೆಯಿಂದ ದೇಶ ಸೇವೆ ಸಲ್ಲಿಸಿ ನಿವೃತ್ತರಾದ ಪೆರುವಾಯಿಯ ಹೆಮ್ಮೆಯ ವೀರ ಯೋಧ ಶ್ರೀ ಚಂದ್ರಶೇಖರ ಪೂಜಾರಿ ಅವರಿಗೆ ವಿಶ್ವ ಹಿಂದೂ ಪರಿಷತ್–ಬಜರಂಗದಳ ಘಟಕ, ಶ್ರೀ ಕೃಷ್ಣ ಶಾಖೆ ಪೆರುವಾಯಿ ವತಿಯಿಂದ ಸೆ.13ರಂದು ಅದ್ಧೂರಿ ಹುಟ್ಟೂರ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಕುದ್ದುಪದವು ದಿವ್ಯ ಶಕ್ತಿ ಯುವಕ ಮಂಡಲದಿಂದ ಪೆರುವಾಯಿ ಕಲ್ಲಡ್ಕದವರೆಗೆ ಸುಮಾರು 10 ಕಿ.ಮೀ. ಬೃಹತ್ ವಾಹನ ಜಾಥಾ ನಡೆಯಿತು. ಹಿರಿಯರಾದ ನಿವೃತ್ತ ಶಿಕ್ಷಕ ರಾಮಯ್ಯ ಶೆಟ್ಟಿ ಅವರು ವಾಹನ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ 200ಕ್ಕೂ ಅಧಿಕ ವಾಹನಗಳು ಹಾಗೂ 600ಕ್ಕೂ ಅಧಿಕ ರಾಷ್ಟ್ರಭಕ್ತರು ಭಾಗವಹಿಸಿದ್ದರು.

ದಿವ್ಯ ಶಕ್ತಿ ಯುವಕ ಮಂಡಲ (ರಿ.), ಕುದ್ದುಪದವು ವತಿಯಿಂದಲೂ ಗೌರವಾರ್ಪಣೆಯೊಂದಿಗೆ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು.ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್ ಮೆಲ್ಕಾರ್, ಬಜರಂಗದಳ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಚಾಲಕ ಲೋಹಿತ್ ಪಣೋಲಿಬೈಲ್, ವಿಹಿಂಪ ಪ್ರಮುಖರಾದ ಪದ್ಮನಾಭ ಕಟ್ಟೆ, ರಾಧಾಕೃಷ್ಣ ಚೆಲ್ಲಡ್ಕ, ರಾಜೀವ್ ಭಂಡಾರಿ, ಸಾಹಿತಿ ಸವಿತಾ ಎಸ್. ಭಟ್, ದಿವ್ಯ ಶಕ್ತಿ ಯುವಕ ಮಂಡಲದ ಅಧ್ಯಕ್ಷ ಸತೀಶ್ ಪಾಟಾಳಿ ಕುದ್ದುಪದವು, ಯೋಧರ ಕುಟುಂಬದ ಹಿರಿಯರಾದ ರಾಮಣ್ಣ ಪೂಜಾರಿ, ಪೆರುವಾಯಿ ಘಟಕದ ಗೌರವಾಧ್ಯಕ್ಷ ಮಂಜುನಾಥ್ ಆಚಾರ್ಯ ಅಶ್ವಥನಗರ, ಅಧ್ಯಕ್ಷ ಶೇಖರ ಪೂಜಾರಿ ಕುಂಬಳಕೋಡಿ, ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ಪೆರುವಾಯಿ, ಸಂಚಾಲಕರಾದ ವಿನೀತ್ ಕಾನ ಪೆರುವಾಯಿ, ಟಿ.ಆರ್. ನಾಗೇಶ್ ಪೆರುವಾಯಿ, ಸಂಘಟನೆ ಪ್ರಮುಖ ಯತೀಶ್ ಪೆರುವಾಯಿ ಸೇರಿದಂತೆ ಪರಿವಾರ ಸಂಘಟನೆಯ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾಮಸ್ಥರು, ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

“ವೀರ ಯೋಧನಿಗೆ ಸಲ್ಲಿಸಿದ ಗೌರವ — ದೇಶಕ್ಕೆ ಸಲ್ಲಿಸಿದ ಗೌರವ” ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮ ಪೆರುವಾಯಿಯ ದೇಶಭಕ್ತಿ, ಏಕತೆ ಮತ್ತು ವೀರ ಯೋಧರ ಮೇಲಿನ ಗೌರವಕ್ಕೆ ಸಾಕ್ಷಿಯಾಯಿತು.

LEAVE A REPLY

Please enter your comment!
Please enter your name here