







ಪುತ್ತೂರು: ಚೇತನ್ ಫೌಂಡೇಶನ್ ಧಾರವಾಡ ಇವರು ನೀಡುವ ರಾಷ್ಟ್ರಪ್ರಶಸ್ತಿಗೆ ಚೆನ್ನಾವರ ಶಾಲಾ ಶಿಕ್ಷಕ ಮಲ್ಲೇಶಯ್ಯ ಎಚ್.ಎಂ ಆಯ್ಕೆಯಾಗಿದ್ದಾರೆ.


ಮಲ್ಲೇಶಯ್ಶ ಹೆಚ್.ಎಂ ಅವರು ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಂದೆಣ್ಣೆ ಗ್ರಾಮದವರು. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಅರಕಲಗೂಡಲ್ಲಿ ಮುಗಿಸಿದರು. ಪದವಿಯನ್ನು ಮೈಸೂರು ಮಹಾರಾಜ ಕಾಲೇಜಿನಲ್ಲಿ ಮತ್ತು ಸ್ನಾತಕೋತರ ಪದವಿಯನ್ನು ಸಮಾಜಶಾಸ್ತ್ರ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಮುಗಿಸಿದರು. 2008ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನಲ್ಲಿ ಸೇವೆಗೆ ಸೇರಿದರು. ಅಲ್ಲಿ ಸಾಹಿತ್ಯಕವಾಗಿ ತೊಡಗಿಸಿಕೊಂಡು ‘ಛಲ ಬಿಡದ ಹುಡುಗಿ’, ‘ಮನಸ್ಸಿದ್ದರೆ ಮಾರ್ಗ’ ಎಂಬ ಎರಡು ಮಕ್ಕಳ ನಾಟಕಗಳನ್ನು ಬರೆದು ಮಕ್ಕಳಿಂದ ಪ್ರದರ್ಶನಗೊಂಡಿವೆ.



ಪ್ರಸ್ತುತ 2022ರ ಜನವರಿ 20ರಂದು ಕಡಬ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮಕುಂಜಕ್ಕೆ ವರ್ಗಾವಣೆಗೊಂಡರು. ಕಡಬ ತಾಲೂಕಿನ ಸಾಹಿತ್ಯ ಪರಿಷತ್ತಿನ ಪದಗ್ರಹಣ ಕಾರ್ಯಕ್ರಮದಲ್ಲಿ ಇವರು ಬರೆದ “ಜನಪದೀಯ ಗ್ರಾಮೀಣ ಆಟಗಳು” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಪುತ್ತೂರಿನಲ್ಲಿ “ಭರವಸೆಯೇ ಬಾಳಿನ ಬೆಳಕು” ಎಂಬ ಮಕ್ಕಳ ನಾಟಕವನ್ನು ಬರೆದು, ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಹಾರಾಡಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬಕ ಶಾಲೆಯ ಮಕ್ಕಳಿಂದ ಮಕ್ಕಳ ದಿನಾಚರಣೆಯಂದು ಪ್ರದರ್ಶನಗೊಂಡಿತು. ಈ ನಾಟಕವು ಪುತ್ತೂರಿನ FM ಪಾಂಚಜನ್ಯದಲ್ಲಿ ಮತ್ತು ಮಂಗಳೂರಿನ ಆಕಾಶವಾಣಿಯಲ್ಲಿ ಪ್ರಸಾರವಾಯಿತು. ಇದೇ ನಾಟಕವನ್ನು ಮಕ್ಕಳ ಕಿರುಚಿತ್ರವಾಗಿ ನಿರ್ದೇಶಿಸಿದ್ದು ಈ ಕಿರು ಚಿತ್ರವನ್ನು ಮಾಜಿ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ ನಾಗೇಶ್ ಸರ್ ಬಿಡುಗಡೆಗೊಳಿಸಿದರು ಇದನ್ನ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
2022ರ ಪುತ್ತೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಐತಪ್ಪ ನಾಯ್ಕ ಅವರ ಮಾರ್ಗದರ್ಶನದಲ್ಲಿ “ಮಕ್ಕಳ ಮೂರು ನಾಟಕಗಳು” ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು. 2024ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಭಾವಸುಮ” ಎಂಬ ಕವನ ಸಂಕಲವನ್ನು ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. 2025ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಜಾತಕ ಫಲ” ಎಂಬ ಜನಪದೀಯ ನಾಟಕವನ್ನು ಬಿಡುಗಡೆಗೊಳಿಸಲಾಯಿತು. 2022 ರಿಂದ 25ರ ವರೆಗೂ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಪುತ್ತೂರು ಕಡಬ ತಾಲೂಕುಗಳಲ್ಲಿ ನಡೆದ ಎಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕಗಳ ಬಿಡುಗಡೆ ಮತ್ತು ಕವನ ವಾಚನ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಯುವಕವಿ ಪ್ರಶಸ್ತಿ ನೀಡಲಾಗಿದೆ.
2023- 24ನೇ ಸಾಲಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕಡಬ ತಾಲೂಕಿನ 10 ಕ್ಲಸ್ಟರ್ ಮಕ್ಕಳಿಗೆ ಕತೆ ಮತ್ತು ಕವನ ಬರೆಯುವ ತರಬೇತಿ ನೀಡಿ ಕ್ಲಸ್ಟರ್ ನಿಂದ ಆಯ್ಕೆಯಾದ ಮಕ್ಕಳನ್ನು ತಾಲೂಕು ಹಂತಕ್ಕೆ ಕರೆತಂದು ತಾಲೂಕು ಹಂತದಲ್ಲಿ ಆಯ್ಕೆಯಾದ ಕಥೆ ಮತ್ತು ಕವನಗಳನ್ನು ಸಂಗ್ರಹಿಸಿ “ಅಕ್ಷರ ತೆನೆ” ಎಂಬ ಪುಸ್ತಕವನ್ನು ಬರೆದು ಲೋಕಾರಪಣೆಗೊಳಿಸಲಾಯಿತು. ಸಾಹಿತ್ಯಕವಾಗಿ ಅಲ್ಲದೆ ಶಾಲೆಗೆ MRPL ಮಂಗಳೂರು ಇವರಿಂದ 10 ಲಕ್ಷ ದೇಣಿಗೆ ತರಿಸಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಯಿತು. ದಾನಿಗಳಿಂದ ಹಣ ಸಂಗ್ರಹಿಸಿ ಶಾಲೆಗೆ ಮಕ್ಕಳ ಕಿಂಡರ್ ಗಾರ್ಡನ್ ನಿರ್ಮಾಣ ಮಾಡಲಾಗಿದೆ. ಭೀಮಾ ಜುವೆಲರ್ಸ್ ಬೆಂಗಳೂರು ಇವರ ವತಿಯಿಂದ ಶಾಲೆಗೆ ರೂ. 1,80,000 ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಿಸಲಾಗಿದೆ ಮತ್ತು 65,000 ವೆಚ್ಚದಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಫಿಲ್ಟರ್ ಅಳವಡಿಸಲಾಯಿತು.
2026-27 ನೇ ಸಾಲಿನಲ್ಲಿ 2.5 ಲಕ್ಷ ವೆಚ್ಚದಲ್ಲಿ ಶಾಲೆಗೆ ಡ್ರಮ್ಸೆಟ್, ಲ್ಯಾಪ್ಟಾಪ್, ಬ್ಲೂಟೂತ್ ಮತ್ತು ಶಾಲೆಗೆ ಬೇಕಾದ ಸ್ಮಾರ್ಟ್ ಡೆಸ್ಕ್ ಬೆಂಚ್ ರೌಂಡ್ ಟೇಬಲ್ ವೀಲ್ ಚೇರ್ ಕಂಪ್ಯೂಟರ್ ಟೇಬಲ್ ಗಳನ್ನು ನೀಡಿರುತ್ತಾರೆ.
- ಜನಪದೀಯ ಗ್ರಾಮೀಣ ಆಟಗಳು 2. ಮಕ್ಕಳ ಮೂರು ನಾಟಕಗಳು a) ಛಲ ಬಿಡದ ಹುಡುಗಿ b) ಭರವಸೆಯೇ ಬಾಳಿನ ಬೆಳಕು c) ಚಂದ್ರಗಿರಿಯ ಮಕ್ಕಳು,3. ಭಾವಸುಮ (ಕವನ ಸಂಕಲನ) ,4. ಜಾತಕ ಫಲ (ಜನಪದ ನಾಟಕ)
- ಅಕ್ಷರ ತೆನೆ (ಮಕ್ಕಳ ಕಥೆ ಕವನ) ಮಲ್ಲೇಶಯ್ಯ ಅವರ ಪ್ರಕಟಿತ ಕೃತಿಗಳು.










