







ಪುತ್ತೂರು: ಭಜನೆ ಮಾತ್ರವಲ್ಲದೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ (ರಿ), ಪುತ್ತೂರು ಇದರ ವತಿಯಿಂದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ 2 ಗ್ರಾಂ 32 ಮಿಲಿ ಗ್ರಾಂ ಚಿನ್ನವನ್ನು ಸಮರ್ಪಿಸಲಾಯಿತು.


ದೇವಳದ ಮುಖ್ಯ ಅರ್ಚಕರಾದ ವಿ.ಎಸ್. ಭಟ್ ಪ್ರಾರ್ಥನೆ ನೆರವೇರಿಸಿ, ವಿಶೇಷ ಪ್ರಸಾದ ನೀಡಿದರು. ಬಳಿಕ ಚಿನ್ನವನ್ನು ಕಛೇರಿಗೆ ಹಸ್ತಾಂತರಿಸಲಾಯಿತು. ಟ್ರಸ್ಟ್ನ ಸಂಚಾಲಕರು, ಗೌರವಾಧ್ಯಕ್ಷರು, ಟ್ರಸ್ಟಿಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.













