ಆಲಂಕಾರು: 108 ಆಂಬುಲೆನ್ಸ್‌ನಲ್ಲಿ ಹೆರಿಗೆ : ಗಂಡು ಮಗುವಿಗೆ ಜನನ

0

ಆಲಂಕಾರು: ಆಲಂಕಾರು ಗ್ರಾಮದ ಮುಳ್ಳಂಕೊಚ್ಚಿಯಲ್ಲಿ ತೋಟದ ಕೆಲಸಕ್ಕೆ ಬಂದಿದ್ದ ಜಾರ್ಖಂಡ್ ಮೂಲದ 21 ವರ್ಷದ ಮಹಿಳೆ 108 ಆಂಬುಲೆನ್ಸ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ 108 ಆಂಬುಲೆನ್ಸ್ ಕರೆ ಮಾಡಲಾಗಿದ್ದು, ಕರೆ ಬಂದ ತಕ್ಷಣ 108 ಆಂಬುಲೆನ್ಸ್ ಸ್ಥಳಕ್ಕೆ ಧಾವಿಸಿದೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಆಂಬುಲೆನ್ಸ್‌ನಲ್ಲಿಯೇ ಹೆರಿಗೆಯಾಗಿದೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಪುತ್ತೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

108 ಆಂಬುಲೆನ್ಸ್ ಸಿಬ್ಬಂದಿ ನರ್ಸ್ ಚಂದ್ರಶೇಖರ್ ಹೆರಿಗೆ ಮಾಡಿಸಿದ್ದು, ಚಾಲಕ ಸತೀಶ್ ಸಹಕರಿಸಿದರು.

LEAVE A REPLY

Please enter your comment!
Please enter your name here